
ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗೌರಿದೇವಿ ಗ್ರಾಮಾಂತರ ಪ್ರೌಢ ಶಾಲೆಯ ಆವರಣವು ಕತ್ತಲಾಗುತ್ತಿದ್ದಂತೆ ಮದ್ಯಪ್ರಿಯರ ತಾಣವಾಗಿ ಪರಿವರ್ತನೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ..

ಬುಧವಾರ ಗಾಂಧಿಜಯಂತಿ ಪ್ರಯುಕ್ತ ಮದ್ಯಮಾರಾಟ ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಅದರಂತೆ ಮದ್ಯದಂಗಡಿ ಮುಚ್ಚಿದ್ದರಿಂದ ಶಾಲೆಗಳಿಗೆ ರಜೆ ನೀಡಿರುವುದರಿಂದ ಶಾಲಾ ಆವರದ ತುಂಬಾ ಎಲ್ಲೆಂದರಲ್ಲಿ ಕುಡಿದ ಮದ್ಯದ ಬಾಟಲಿ. ಪೌಚ್ ಗಳು ಪ್ಲಾಸ್ಟಿ ಹಾಗೂ ಅಡಿಕೆಪಟ್ಟೆ ತಟ್ಟೆ ಲೋಟಗಳು ಎಸೆದು ಹೋಗಿದ್ದಾರೆ.
ಇದು ಜ್ಞಾನ ದೇಗುಲು ಕೈಮುಗಿದು ಒಳಗೆ ಬನ್ನಿ ಎಂಬ ನಾಮಫಲವಿದ್ದರೂ ಸಹ ಮಕ್ಕಳಿಗೆ ವಿದ್ಯೆ ಬುದ್ದಿ ನೀಡುವ ಶಾಲೆ ದೇಗುಲ ಸಮಾನ ಇಂತಹ ಪವಿತ್ರವಾದ ಸ್ಥಳವನ್ನು ಕುಡುಕರ ಅಡ್ಡೆ ತಾಣವನ್ನಾಗಿ ಮಾಡಿಕೊಂಡಿರುವುದು ವಿಷಾದಕರ ಸಂಗತಿಯಾಗಿದೆ.
ಇಡೀ ಶಾಲೆಯ ಆವರಣವು ಗಾಜಿನ ಬಾಟಲಿ, ಗಾಜಿನ ಚೂರು ಹಾಗೂ ತಂಬಾಕು ಉತ್ಪನ್ನಗಳ ರಾಶಿಯಿಂದ ಕೂಡಿದೆ.ಸಂಬಂಧಪಟ್ಟ ಅಧಿಕಾರಿಗಳು ಕುಡುಕರ ಅಡ್ಡೆಗೆ ಕಡಿವಾಣ ಹಾಕುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಒತ್ತಾಯಿಸಿದ್ದಾರೆ.
ಈಗಲಾದರೂ ಕುಡುಕರ ಅಡ್ಡೆಗೆ ಕಡಿವಾಣ ಹಾಕುವರೇ ಕಾದು ನೋಡ ಬೇಕಿದೆ.


About The Author
Discover more from JANADHWANI NEWS
Subscribe to get the latest posts sent to your email.