
ರಾಜ್ಯದ ಆಡಳಿತ ಹಳ್ಳಿಗಳಿಂದ ಎಂದು ಹೇಳುವ ನೀವು ಗ್ರಾಮೀಣ ಭಾಗದ ಜನರ ಜೀವನಾಡಿಗಳಾದ ಗ್ರಾಮ ಆಡಳಿತ ಅಧಿಕಾರಿಗಳನ್ನು ಬೀದಿಯಲ್ಲಿ ನಿಲ್ಲಿಸಿ ಯಾವ ಮಟ್ಟಿಗಿನ ಆಡಳಿತದಲ್ಲಿ ಸುಧಾರಣೆ ತರಲು ಸಾಧ್ಯ.??? ಅವರು ಕೇಳುತ್ತಿರುವ ಕನಿಷ್ಠ ಬೇಡಿಕೆಗಳನ್ನ ಕಾನೂನು ಮತ್ತು ಮಾನವೀಯ ನೆಲಗಟ್ಟಿನಲ್ಲಿ ಈಡೇರಿಸಬೇಕಾಗುತ್ತದೆ. ಕುಳಿತುಕೊಳ್ಳಲು ಸ್ವಂತ ಕಚೇರಿ ಇಲ್ಲದೆ ಹಳ್ಳಿಗಳಲ್ಲಿರುವ ಅರಳಿ ಕಟ್ಟೆ, ಜಗಲಿಕಟ್ಟೆ, ಹಳೆ,ಶಿಥಿಲ ಕಟ್ಟಡ, ದೇವಸ್ಥಾನದ ಆವರಣದಲ್ಲಿ ಕುಳಿತು ಕಂದಾಯ ದಾಖಲೆಗಳನ್ನು, ಗ್ರಾಮದ ಆಡಳಿತವನ್ನು ನಿರ್ವಹಣೆ ಮಾಡಬೇಕಾಗುವ ದುಸ್ಥಿತಿ ಬಂದಿದೆ. ಅವರಿಗೆ ಒಂದು ಸುಸಜ್ಜಿತ ಕಟ್ಟಡವನ್ನು ಕಟ್ಟಿಸಿಕೊಡಲು ಮನಸ್ಸು ಮಾಡಬೇಕು. ಸರ್ಕಾರದ ಹತ್ತಾರು ಆ್ಯಪ್ ಗಳು ಒಂದೇ ಮೊಬೈಲ್ನಲ್ಲಿ ಕೆಲಸ ಮಾಡಲು ಕಷ್ಟ ಸಾಧ್ಯ ಆದ್ದರಿಂದ ಅವರಿಗೆ ಟ್ಯಾಬ್, ಸ್ಕ್ಯಾನರ್, ಪ್ರಿಂಟರ್ ಇತ್ಯಾದಿ ಆಧುನಿಕ ಡಿಜಿಟಲ್ ತಂತ್ರಜ್ಞಾನಕ್ಕೆ ಸರಿಹೊಂದುವ ಸೌಲಭ್ಯಗಳನ್ನು ಕೊಡಬೇಕು. ಅಲ್ಲದೆ ಕಾಲಕಾಲಕ್ಕೆ ತಾಂತ್ರಿಕ ತರಬೇತಿ ಕೊಡಬೇಕು ಹುದ್ದೆಯನ್ನು ಮೇಲ್ದರ್ಜೆಗೇರಿಸಬೇಕು. ಪದೋನ್ನತಿ ಎನ್ನುವುದು ಅವರಿಗೆ ಮರೀಚಿಕೆಯಾಗಿದೆ 20 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಮುಂದುವರಿಯುವ ಅನಿವಾರ್ಯ ಸ್ಥಿತಿಯಲ್ಲಿ ಮಾನಸಿಕವಾಗಿ ತೊಳಲಾಡುತ್ತಿದ್ದಾರೆ. ಆದ್ದರಿಂದ ಈ ಸಮಸ್ಯೆಗಳು ಕೇವಲ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳಲ್ಲ ಗ್ರಾಮೀಣ ಭಾಗದ ಜನರ ಭಾಗವೇ ಆಗಿರುವ ಇವರು ಸರಿಯಾದ ಸಮಯಕ್ಕೆ ಸರಿಯಾದ ಜಾಗದಲ್ಲಿ ನಮಗೆ ದಾಖಲೆಗಳನ್ನು ಒದಗಿಸದಿದ್ದಲ್ಲಿ ಹಳ್ಳಿಗಳ ಅಭಿವೃದ್ಧಿಯಾಗುವುದಿಲ್ಲ ಆದ್ದರಿಂದ ದೇಶ ವಿದೇಶಗಳನ್ನು ಸುತ್ತಿ ಬಂದಿರುವ ತಾವುಗಳು ಅವರು ಕೇಳುವ ಬೇಡಿಕೆಗಳನ್ನು ಕಾನೂನು ಹಾಗೂ ಮಾನವಿಯ ನೆಲೆಗಟ್ಟಿನಲ್ಲಿ ಈಡೇರಿಸಬೇಕೆಂದು ತಮ್ಮಲ್ಲಿ ಈ ಮೂಲಕ ಆಗ್ರಹಪೂರ್ವಕ ಒತ್ತಾಯ ಮಾಡುತ್ತೇವೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅವರ ಪರವಾಗಿ ನಾವು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸವಿನಯ ಪ್ರಾರ್ಥನೆ ಮಾಡುತ್ತೇವೆ ಇಂತಿ ನಿಮ್ಮವ …ಕಸವನಹಳ್ಳಿ ರಮೇಶ್.. ಸಾಮಾಜಿಕ ಕಾರ್ಯಕರ್ತರು. ಹಿರಿಯೂರು ತಾಲ್ಲೂಕ್, ಚಿತ್ರದುರ್ಗ ಜಿಲ್ಲೆ
About The Author
Discover more from JANADHWANI NEWS
Subscribe to get the latest posts sent to your email.