
ಚಳ್ಳಕೆರೆ ಅ.3. ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳಕು ಚೆಲ್ಲಿದ ಬೆನ್ನಲ್ಲೇ ಏಣಿ ಇಲ್ಲದ ಓವರ್ ಹೆಡ್ ಟ್ಯಾಂಕಿಗೆ ಏಣಿ ಕಟ್ಟಿ ಸ್ವಚ್ಚತೆಗೆ ಮುಂದಾದ ಗ್ರಾಮಪಂಚಾಯಿತಿ ಸಿಬ್ಬಂದಿ.
ಒವರ್ ಹೆಡ್ ಟ್ಯಾಂಕ್ ಇದೆ ಏಣಿ ಇಲ್ಲ ಸ್ವಚ್ಛತೆ ಮಾಡುವುದಾದರೂ ಹೇಗೆ ..?
ಎಂದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರವ್ಯಾಪ್ತಿಯ ಓಬಳಾಪುರ ಗ್ರಾಪಂ ಕೇಂದ್ರದಲ್ಲಿರು ಓವರ್ ಹೆಡ್ ಟ್ಯಾಂಕಿಗೆ ಸುಣ್ಣ ಬಣ್ಣ ಒಡೆಸಕಾಗಿದೆ ಆದರೆ ಇದಕ್ಕೆ ಏಣಿ ಇಲ್ಲ ಟ್ಯಾಂಕ್ ಸ್ವಚ್ಚತೆ ಮಾಡದೆ ಇರುವುದರಿಂದ ಕುಡಿಯುವ ನೀರಿನ ಜತೆಗೆ ಕ್ರಿಮಿಕೀಟಗುಳು ಉಚಿತ ಇದರಿಂದ ಇಂತಹ ಕಲುಷಿತ ನೀರು ಸೇವಿಸಿ ಸಾಂಕ್ರಮಿಕ ರೋಗ ಭೀತಿ ಎದುರಾಗಿದ್ದು ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಓವರ್ ಹೆಡ್ ಟ್ಯಾಂಕಿಗೆ ಏಣಿ ಅಳವಡಿಸಿ ಸ್ವಚ್ಚತೆ ಮಾಡುವ ಮೂಲಕ ಜನರಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವರೇ ಎಂದು ಜನಧ್ವನಿ ಡಿಜಿಟಲ್ ಮೀಡಿಯಾ ಸುದ್ದಿ ಬೆಳಕು ಚೆಲ್ಲಿದ ಕೆಲವೇ ಗಂಟೆಗಳಲ್ಲಿ ಏಣಿಕಟ್ಟಿಕೊಂಡು ಟ್ಯಾಂಕ್ ಸ್ವಚ್ಚತೆ ಮುಂದಾಗಿದ್ದಾರೆ.
ಏಣಿಯಿಲ್ಲದ ಓವರ್ ಹೆಡ್ ಟ್ಯಾಂಕಿಗೆ ಶಾಶ್ವತವಾಗಿ ಏಣಿ ನಿರ್ಮಿಸುರೇ ಕಾದು ನೋಡ ಬೇಕಿದೆ.
ಕುಡಿಯುವ ನೀರು ಸರಬರಾಜು ಇಲಾಖೆ ಜೆಇ ಮೋಹನ್ ಕುಮಾರ್ ಜನಧ್ವನಿಯೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.


About The Author
Discover more from JANADHWANI NEWS
Subscribe to get the latest posts sent to your email.