September 15, 2025

ಚಳ್ಳಕೆರೆ ಅ.3 ಟ್ಯಾಂಕ್ ಇದೆ ತೂತು ಬಿದ್ದಿದೆ ನೀರಿಲ್ಲ ಸ್ವಚ್ಚತೆಯಿಲ್ಲ ಜನ ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಕ್ಷೇತ್ರವ್ಯಾಪ್ತಿಯ ದೇವರೆಡ್ಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಗೌರಸಮುದ್ರ ಕಾವಲು ಹೊಸೂರು ಗೊಲ್ಲರಹಟ್ಟಿಯ ಜನರ ಗೋಳು ಕೇಳುವವರಿಲ್ಲವೆಂಬಂತಾಗಿದೆ ಇಲ್ಲಿ ಸುಮಾರು ಎರಡು ತಿಂಗಳಾದರೂ ಸಹ ಸರಿಯಾಗಿ ನೀರು ಸರಬರಾಜು ಮಾಡುತ್ತಿಲ್ಲ ಹಾಗೂ ಕಿರು ನೀರು ಸರಬರಾಜು ಟ್ಯಾಂಕ್ ಕಟ್ಟಿಸಿ 25 ವರ್ಷಗಳು ಕಳೆದಿವೆ ಟ್ಯಾಂಕ್ ತೂತು ಬಿದ್ದಿದೆ ಮತ್ತು ಹೊಡೆದು ಹೋಗಿದ್ದೆ ಸ್ವಚ್ಛತೆಯು ಸಹ ಮಾಡಿಲ್ಲಿ ಗ್ರಾಪಂ ಅಧಿಕಾರಿಗಳಲಾಗಲಿ ಸದಸ್ಯರಾಗಲಿ ಸ್ವಚ್ಛ ಮಾಡಿ ನೀರು ಒದಗಿಸಲು ಮುಂದಸಗುತ್ತಿಲ್ಲ ಸುಮಾರು ಹತ್ತರಿಂದ ಹದಿನೈದು ಮನೆಗಳಿವೆ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರುಗಳು ಎಲ್ಲಾ ಕೆಲಸಕ್ಕೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವರೇ ಕಾದು ನೋಡ ಬೇಕಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading