December 15, 2025
India_-_Fish_in_the_market_-_0881.jpg


ಚಿತ್ರದುರ್ಗ .ಸೆ.02:
ಮೀನುಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಮತ್ತು ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮತ್ಸ್ಯ ಸಂಪದ ಯೋಜನೆಯಡಿ ಮಧ್ಯಮ ಗಾತ್ರದ ಅಲಂಕಾರಿಕ ಮೀನುಗಳ ಸಾಕಾಣಿಕೆ ಘಟಕ ಹಾಗೂ ಹೊಸ ಮೀನು ಸಾಕಾಣಿಕೆ ಹೊಂಡ ನಿರ್ಮಿಸಲು ಸಾಮಾನ್ಯ ವರ್ಗದವರಿಗೆ ಶೇ.40 ರಷ್ಟು, ಮಹಿಳೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುವುದು.
ಜಿಲ್ಲೆಗೆ 8 ಲಕ್ಷ ವೆಚ್ಚದ ಒಂದು ಅಲಂಕಾರಿಕ ಮೀನುಗಳ ಸಾಕಾಣಿಕೆ ಘಟಕ ಗುರಿ ನಿಗದಿಯಾಗಿದ್ದು, ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು. 7 ಲಕ್ಷ ವೆಚ್ಚದ 0.5 ಹೆಕ್ಟೇರ್ ಗಾತ್ರದ ಹೊಸ ಮೀನು ಸಾಕಾಣಿಕೆ ಹೊಂಡ ನಿರ್ಮಿಸಲು ಗುರಿ ನಿಗದಿಯಾಗಿದ್ದು, ಪರಿಶಿಷ್ಟ ಪಂಗಡದವರು ಮಾತ್ರ ಅರ್ಜಿ ಸಲ್ಲಿಸಬಹುದು.
ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯ್ದ 3 ಜನ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರದ ವಾಹನ ಖರೀದಿಸಲು ಶೇ.50 ರಷ್ಟು ಅಥವಾ ಗರಿಷ್ಠ 3 ಲಕ್ಷದ ವರೆಗೆ ಆರ್ಥಿಕ ನೆರವು ನೀಡಲಾಗುವುದು.

ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಸೆ.17 ರ ಒಳಗೆ ಆಯಾ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಮೊಳಕಾಲ್ಮೂರು ಸಹಾಯಕ ನಿರ್ದೇಶಕ ತುಳಿಸಿದಾಸ್ ಮೊಬೈಲ್ ಸಂಖ್ಯೆ 9342187356, ಚಳ್ಳಕೆರೆ ಮತ್ತು ಹಿರಿಯೂರು ಸಹಾಯಕ ನಿರ್ದೇಶಕಿ ದೀಪಾಲಿ ಮೊಬೈಲ್ ಸಂಖ್ಯೆ 9740900866 ಹಾಗೂ ಹೊಸದುರ್ಗ ಮತ್ತು ಹೊಳಲ್ಕೆರೆ ಸಹಾಯಕ ನಿರ್ದೇಶಕ ವೆಂಕಟೇಶ್ವರ ಮೊಬೈಲ್ ಸಂಖ್ಯೆ 9945004235 ಕರೆ ಮಾಡಬಹುದು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading