September 14, 2025
1756904599534.jpg


ಹಿರಿಯೂರು ಸೆ.03:
ಕುಟುಂಬದ ಪ್ರಮುಖ ಅಗತ್ಯಗಳನ್ನು ರೈತರು ತಮ್ಮ ಜಮೀನಿನಿಂದಲೇ ಪೂರೈಸಿಕೊಳ್ಳುವಂತಹ ವ್ಯವಸ್ಥೆ ಮಾಡಿಕೊಂಡಲ್ಲಿ ತಕ್ಕಮಟ್ಟಿನ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ದಾವಣಗೆರೆಯ ಐಕಾಂತಿಕ ತೋಟದ ರಾಘವ ಹೇಳಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ದಾವಣಗೆರೆಯ ಐಕಾಂತಿಕ ಸಮುದಾಯದ ಸಹಯೋಗದಲ್ಲಿ ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಕೃಷಿ ತರಬೇತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಹಜ ಕೃಷಿ ಆನಂದಮಯ ಜೀವನಕ್ಕೆ ದಾರಿ ಕುರಿತ ಮೂರು ದಿನಗಳ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ನಮ್ಮ ಭೂಮಿ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡುವಂತಹ ವಾತಾವರಣ ನಿರ್ಮಿಸಿಕೊಳ್ಳಬೇಕು. ಸ್ವಾವಲಂಬನೆಯೇ ನಿಜವಾದ ಸ್ವಾತಂತ್ರ್ಯ ಎಂಬ ಅರಿವು ರೈತರಲ್ಲಿ ಇರಬೇಕು. ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿಗತಿ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಕುಟುಂಬದ ಆರ್ಥಿಕ ಸ್ಥಿತಿಯನ್ನು ಸಮತೋಲನ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಪ್ರಕೃತಿ ಜೊತೆ ಹೊಂದಿಕೊಂಡು ಜೀವನ ಮಾಡುವುದೊಂದೇ ನಮಗೆ ಉಳಿದಿರುವ ಏಕೈಕ ಮಾರ್ಗ’ ಎಂದು ಐಕಾಂತಿಕ ತೋಟದ ರಾಘವ ಹೇಳಿದರು.
‘ಪ್ರಕೃತಿಯ ಎದುರು ಡೈನೊಸಾರ್‍ನಂತಹ ದೈತ್ಯ ಪ್ರಾಣಿಗಳೇ ಅಳಿದು ಹೋಗಿರುವಾಗ ಮನುಷ್ಯರು ಲೆಕ್ಕವೇ ಅಲ್ಲ. ಮನುಷ್ಯ ಬದುಕಲು ಬೇಕಿರುವ ಗಾಳಿ, ನೀರು ಮತ್ತು ಎಲ್ಲ ತರಹದ ನೈಸರ್ಗಿಕ ಸಂಪನ್ಮೂಲಗಳು ಭೂಮಿಯ ಮೇಲೆಯೇ ಲಭ್ಯವಿರುವಾಗ, ಅವನ್ನೆಲ್ಲ ಹಾಳು ಮಾಡಿ ಚಂದ್ರಲೋಕ, ಮಂಗಳಲೋಕದ ಭ್ರಮೆ ಹುಟ್ಟಿಸುವುದು ಸರಿಯಲ್ಲ’ ಎಂದು ತಿಳಿಸಿದರು.
‘ರೈತರು ವಿಷಮುಕ್ತ ಆಹಾರ ಬೆಳೆಯಬೇಕು. ಸಹಜ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಸಿಗುವ ಮಣ್ಣು, ಕಲ್ಲು, ಮರಮುಟ್ಟು ಬಳಸಿಕೊಂಡು ನಾವೇ ಸ್ವಂತ ಸೂರು ನಿರ್ಮಿಸಿಕೊಳ್ಳಬೇಕು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಬಳಸಬೇಕು. ನೀರು ಮತ್ತು ವಾಯುವನ್ನು ಮಲಿನಗೊಳ್ಳಲು ಬಿಡಬಾರದು. ಪಾತ್ರೆ, ಬಟ್ಟೆ ತೊಳೆಯಲು ಹಾಗೂ ಸ್ನಾನಕ್ಕೆ ಅಂಟುವಾಳಕಾಯಿ, ಸೀಗೆಕಾಯಿ ಅತ್ಯುತ್ತಮ. ಅವನ್ನೆಲ್ಲ ಅಭ್ಯಾಸ ಮಾಡಿಕೊಂಡಲ್ಲಿ ರೈತರು ಸ್ವಾ-ವಲಂಬಿಗಳಾಗಿ ಬದುಕಲುಸಾಧ್ಯ’ ಎಂದು ರಾಘವ ಹೇಳಿದರು.
ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಭಿμÉೀಕ್, ಶೇ. 100ರಷ್ಟು ಶುದ್ಧ ಹತ್ತಿ, ರೇμÉ್ಮ ನೂಲಿನಿಂದ ತಯಾರಿಸಿದ ಉಡುಪು, ಬರಿಗಾಲಿನಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಪಾಂಡುರಂಗ, ಕೃಷಿಯು ಬೆಳೆದು ಬಂದ ಹಾದಿ ಕುರಿತು ರಾಘವ, ಬೆಳೆಯಲ್ಲಿನ ವೈವಿಧ್ಯತೆ ಮತ್ತು ಸಜೀವ ಮಣ್ಣು ಕುರಿತು ಜಬೀವುಲ್ಲಾ, ಸಹಜ ಕೃಷಿಯ ತತ್ವಗಳ ಬಗ್ಗೆ ವೀರೇಶ್ ಉಪನ್ಯಾಸ ನೀಡಿದರು.
ಮೊದಲ ಅಧಿವೇಶನದಲ್ಲಿ ಮಂಡಿಸಿದ ವಿವಿಧ ವಿಷಯಗಳ ಮೇಲೆ ರೈತರು ಕೇಳಿದ ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದರು. ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್. ರಜನೀಕಾಂತ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ರೈತರಿಗೆ ಗಾಣದ ಎಣ್ಣೆ, ವಿಷಮುಕ್ತವಾಗಿ ಬೆಳೆದ ಕಂದು ಬಣ್ಣದ ಅಕ್ಕಿ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಸಾತ್ವಿಕ ಆಹಾರ, ರಾಗಿ ಅಂಬಲಿ ಮತ್ತು ಕμÁಯ ಉಣಬಡಿಸಿದ್ದು ವಿಶೇಷವಾಗಿತ್ತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading