ದುರ್ಗದ ನೆಲ ಧಾರ್ಮಿಕ ಇತಿಹಾಸ ಮತ್ತು ಪರಂಪರೆಗೆ ಹಿಡಿದ ಕೈಗನ್ನಡಿ ಎಂದು ಚಳ್ಳಕೆರೆ ನಿಕಟ ಪೂರ್ವ ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು.


ಅವರು ಮೊಳಕಾಲ್ಮೂರು ಕ್ಷೇತ್ರದ ತಳಕು ಹೋಬಳಿ ಚಿಕ್ಕಳ್ಳಾರ್ತಿ ಗ್ರಾಮದಲ್ಲಿಬೋರೆದೇವರ ಎರಡನೇ ಶ್ರಾವಣ ಮಾಸ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ ಚಿತ್ರದುರ್ಗದ ಪಾಳ್ಳೇಗಾರರು ವಿಶಿಷ್ಟವಾದಂತ ಧಾರ್ಮಿಕ ಆಚರಣೆ ಮತ್ತು ಹಿನ್ನೆಲೆ ಉಳ್ಳವರು ಜೀವ ಬಿಟ್ಟರು ಧರ್ಮ ಮತ್ತು ಸ್ವಾಭಿಮಾನ ಬಿಡದವರು ದುರ್ಗದ ನೆಲದಲ್ಲಿ ನಿರಂತರ ಈ ಧಾರ್ಮಿಕ ಆಚರಣೆ ಈ ನೆಲವನ್ನು ಸಾಂಸ್ಕ್ರಿತಿಕವಾಗಿ ಶ್ರೀಮಂತ ಗೊಳಿಸಿದೆ ಇಲ್ಲಿನ ಬುಡಕಟ್ಟು ಸಮುದಾಯಗಳಲ್ಲಿ ಬರುವಂತ ಕಾಡುಗೊಲ್ಲ ಹಾಗೂ ವಾಲ್ಮಿಕಿ ಜನಾಂಗಗಳಲ್ಲಿ ಸಾಮರಸ್ಯ ಶಾಂತಿ ಮತ್ತು ಭಕ್ತಿ ಮನೆ ಮಾಡಿದೆ ಜನಾಂಗದ ಜನರು ಈ ಭಾವನೆಗಳ ಜೊತೆ ಶೈಕ್ಷಣಿಕ ಮತ್ತು ಸಾಮಾಜಿಕ ಬದಲಾವಣೆಯಾಗಬೇಕು ಮುಂದಿನ ದಿನಗಳಲ್ಲಿ ಸ್ವಾಭಿಮಾನದಿಂದ ಮತ್ತು ಸ್ವಾವಲಂಬಿ ಗಳಾಗಬೇಕಾದರೆ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸಂಸ್ಕಾರವನ್ನು ಕೊಡಬೇಕೆಂದು ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಪಟೇಲ್ ಜಿ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಮಾತನಾಡಿದರು ಬುಡಕಟ್ಟು ಸಮುದಾಯಗಳಲ್ಲಿ ಅದರಲ್ಲೂ ವಾಲ್ಮೀಕಿ ಸಮುದಾಯಗಳಲ್ಲಿ ಬರುವಂತ ನಾನಾ ರೀತಿಯ ಬೆಡಗಿನ ಕುಲದವರು ಭಿನ್ನಭೇದವಿಲ್ಲದೆ ಆರಾಧ್ಯ ದೈವ ಬೋರೇದೇವರಿಗೆ ಪ್ರತಿ ಶ್ರಾವಣದ ದಿವಸ ಉಪವಾಸದೊಂದಿಗೆ ತಮ್ಮ ಕಠಿಣ ಭಕ್ತಿಯೊಂದಿಗೆ ಪೂಜೆ ಸಮರ್ಪಣೆ ಮಾಡುತ್ತಾರೆ ಇಂತಹ ಪೂಜೆಗಳೊಂದಿಗೆ ಇಡೀ ಜಿಲ್ಲೆಯಲ್ಲಿ ಸಮೃದ್ಧಿ ಮತ್ತು ಶಾಂತಿ ನೆಲಸಲಿ ಇಂದಿನ ಯುವಕರು ಇಂತಹ ಧಾರ್ಮಿಕ ಆಚರಣೆಗಳನ್ನು ಮೈಗೂಡಿಸಿಕೊಂಡು ಉತ್ತಮವಾದ ಶಿಕ್ಷಣ ಪಡೆಯುವುದರೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲೆಂದು ಆಶಿಸಿದರು.
ನನ್ನಿವಾಳ ಬುಡಕಟ್ಟಿನ ದೊರೆ ಬೈಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎಲ್ಐಸಿ ಓಬಣ್ಣ ಬಿಜೆಪಿ ಮುಖಂಡರಾದ ದೊರೆ ನಾಗರಾಜ ಎರಗುಂಟಣ್ಣ, ದೊರೆ ಸೂರನಾಯಕ. ಅಪ್ಪಣ್ಣ, ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.