ನಾಯಕನಹಟ್ಟಿ : ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರವು ಕಾವಲಿನಲ್ಲಿರುವ ಸ್ಟೋನ್ ಕ್ರಷರ್ ಗಳಿಂದ ಬರುವ ಧೂಳಿನಿಂದ ಪರಿಸರ ಹಾಗೂ ರೈತರ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಡಾ. ವಾಸುದೇವ ಮೇಟಿ ) ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ ಗಂಭೀರ ಆರೋಪ ಮಾಡಿದರು.
ನಂತರ ಮಾತನಾಡಿದ ಅವರು ವರವಕಲ್ ನಲ್ಲಿ ನಡೆಯುತ್ತಿರುವ ಸ್ಟೋನ್ ಕ್ರಷರ್ ಗಳ ಘಟಕದಿಂದ ಕಲ್ಲುಗಳನ್ನು ಪುಡಿ ಮಾಡುವ ಸಂದರ್ಭದಲ್ಲಿ ಧೂಳಿನ ಪ್ರಮಾಣ ಹೆಚ್ಚಿದ್ದು, ಅಕ್ಕ ಪಕ್ಕದ ರೈತರಿಗೆ ಹಾಗೂ ಗಿಡ ಮರ ಪರಿಸರಕ್ಕೆ ಹಾನಿಯಾಗಿದೆ. ಕಲ್ಲು ಪುಡಿ ಮಾಡುವ ಘಟಕ ಚಾಲನೆ ಮಾಡುವ ಸಂದರ್ಭದಲ್ಲಿ ಘಟಕದಲ್ಲಿ ಉತ್ಪತ್ತಿಯಾಗುವ ಧೂಳಿನ ಪ್ರಮಾಣ ಹೆಚ್ಚಿದ್ದು ವಾಯು ಮಾಲಿನ್ಯ ಉಂಟಾಗುತ್ತದೆ. ಕಲ್ಲು ಘಟಕದಿಂದ ಉತ್ಪತ್ತಿಯಾದ ಧೂಳು ವಾಯುನೊಂದಿಗೆ ಸೇರಿ ವಾಯುಗುಣಮಟ್ಟ ಕೂಡ ಕುಸಿತ ಕಂಡಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರ ನಿಯಮಗಳನ್ನು ಉಲ್ಲಂಘಿಸಿ ಈ ಕಲ್ಲುಪುಡಿ ಘಟಕಗಳು ಕಾರ್ಯನಿರ್ವಹಿಸುತ್ತಿರುವುದು ಗೋಚರಿಸುತ್ತಿರುವುದರಿಂದ ಈ ಎರಡು ಘಟಕಗಳ ಮೇಲೆ ಸೂಕ್ತ ಕ್ರಮವನ್ನು ಇಲಾಖೆ ಅಧಿಕಾರಿಗಳು ತೆಗೆದುಕೊಂಡು ಇರುವುದಿಲ್ಲ. ಈ ವಾಯುನ್ ಮಾಲಿನ್ಯ ಉಂಟಾಗಲು ಮತ್ತು ಅಕ್ರಮ ಗಣಿಗಾರಿಕೆ ನಡೆಸಲು ಗಣಿ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದರು.
ನಂತರ ಬಿಜೆಪಿ ಮುಖಂಡ ಓಬಯ್ಯ ಬಿ ಗಜ್ಜಗಾನಹಳ್ಳಿ ಮಾತನಾಡಿ ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಲ್ಲು ಪುಡಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಗಡಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಸ್ಪಷ್ಟ ನಿರ್ದೇಶನ ನೀಡಿದ್ದರೂ ಕೂಡ ಈ ಕಲ್ಲು ಪುಡಿ ಘಟಕದ ಮಾಲೀಕರ ವಿರುದ್ಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ನಂತರ ಬಿಜೆಪಿ ಮುಖಂಡ ಪಟೇಲ್ ಕೆ ಬಿ ಕೃಷ್ಣೇಗೌಡ ಮಾತನಾಡಿ ಕರ್ನಾಟಕ ಉಪಕನಿಜಗಳ ಗುತ್ತಿಗೆ ನಿಯಮಗಳು 2023ರ ಕಾಯಿದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಈ ಕಲ್ಲುಪುಡಿ ಘಟಕಗಳನ್ನು ಕೂಡಲೇ ತನಿಖೆಗೆ ಒಳಪಡಿಸಿ ಪರಿಸರ ಹಾಗೂ ರೈತರ ಬೆಳೆಗಳ ಮೇಲೆ ಮಾಲಿನ್ಯ ಉಂಟಾಗಿದ್ದರಿಂದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.
ಈ ಕಲ್ಲುಪುಡಿ ಮಾಡುವ ಘಟಕಗಳಿಂದ ವಿಪರೀತವಾದಂತಹ ಧೂಳು ಬರುತ್ತಿದೆ. ತಾವುಗಳು ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಿಲ್ಲ. ನಾವುಗಳು ನೇರವಾಗಿ ಹೇಳಿದರೆ ನಮಗೆ ತೊಂದರೆ ನೀಡಿ ಬೆಳೆ ಬೆಳೆಯಲು ಬಿಡುವುದಿಲ್ಲ ಆದ್ದರಿಂದ ಕ್ರಷರ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು.
ಹೆಸರು ಹೇಳಲು ಇಚ್ಚಿಸದ ರೈತ.
About The Author
Discover more from JANADHWANI NEWS
Subscribe to get the latest posts sent to your email.