December 15, 2025
IMG-20250803-WA0053.jpg



ಮೊಳಕಾಲ್ಮುರು ತಾಲ್ಲೂಕಿನ ಗುಂಡ್ಲೂರು ಗ್ರಾಮದಲ್ಲಿ ಶುಕ್ರವಾರದಂದು ಶ್ರೀ ದುರ್ಗಾದೇವಿ ಉದ್ಘಾಟನೆ ಪ್ರಯುಕ್ತ ರಾತ್ರಿ ಶ್ರೀ ಮಾರುತೇಶ್ವರ ನಾಟ್ಯ ಯುವ ಕಲಾಸಂಘದವರಿಂದ ಶ್ರೀ ಡಿ.ರವಿಕುಮಾರ್ ಶಿಕ್ಷಕರು ದೇವರೆಡ್ಡಿಹಳ್ಳಿ ಯವರು ರಚಿಸಿದ ” ಸ್ನೇಹದಲ್ಲಿ ಶಾಂತಿ ಪ್ರೇಮದಲ್ಲಿ ಕ್ರಾಂತಿ ” ನಾಟಕ ಪ್ರದರ್ಶನ ಮಾಡಿದರು. ಈ ನಾಟಕದಲ್ಲಿ ನಾಟಕದ ಕವಿಗಳಿಗೆ ಸನ್ಮಾನಿಸಿ ಕಲಾಕಾಣಿಕೆ ನೀಡಿದರು.
ಕರ್ನಾಟಕ ರಾಜ್ಯ ನಾಟಕ ಬರಹಗಾರರ ( ಕವಿಗಳ ) ಸಂಘದ ಜಿಲ್ಲಾ ಅಧ್ಯಕ್ಷರಾದ ಕೆಳಗಿನ ಕಣಿವೆ ನಾಗರಾಜ್ ರವರಿಗೆ ಗೌರವಯುತವಾಗಿ ಕಲಾವಿದರು ಸನ್ಮಾಸಿದರು. ಮತ್ತು ಸಂಘಟನಾ ಕಾರ್ಯದರ್ಶಿ ಬಿ.ಜಿ.ಕೆರೆ ಉಪ್ಪಿ ಮಾತನಾಡಿ ನಾಟಕ ಕೃತಿ ಬರೆದಂತ ಕವಿಗಳಿಗೆ ನಮ್ಮ ಗ್ರಾಮೀಣ ಹವ್ಯಾಸಿ ಕಲಾವಿದರು ಗೌರವಯುತವಾಗಿ ಸನ್ಮಾನಿಸಿ ಕವಿ ಕಾಣಿಕೆಯಾಗಿ 2000 ರೂ ಇನ್ಮುಂದೆ ಪ್ರತಿ ಗ್ರಾಮಗಳಲ್ಲಿ ನಾಟಕ ಪ್ರದರ್ಶನ ಮಾಡುವ ಕಲಾವಿದರು ಕೊಟ್ಟು ಗೌರವಿಸಬೇಕು. ನಾಟಕ ಕರ್ತರಿಂದ ಹೊಸ ಹೊಸ ನಾಟಕ ಕೃತಿಗಳು ರಚಿಸಿ ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಮತ್ತು ಗ್ರಾಮೀಣ ಕಲೆ ನಶಿಸದಂತೆ, ನಾಟಕ ಪ್ರದರ್ಶನಗಳು ಮೊಟುಕು ಗೊಳಿಸದಂತೆ, ಉತ್ತಮವಾಗಿ ನಾಟಕ ಪ್ರದರ್ಶನಗಳು ಸಮಾಜಕ್ಕೆ ಕನ್ನಡಿಯಾಗಿ ಜನರ ಬದುಕಿಗೆ ಮಾದರಿಯಾಗಬೇಕಿದೆ. ಪ್ರತಿಯೊಬ್ಬ ಕಲಾವಿದರಿಗೂ ಗೌರವದಿಂದ ಕಾಣುವ ರಂಗ ಚಟುವಟಿಕೆ ಯಾಗಬೇಕು ಎಂದರು.
ಈ ವೇದಿಕೆಯಲ್ಲಿ ನಾಟಕ ಕರ್ತರಾದ ತುಮಕೂರ್ಲಹಳ್ಳಿ ಬಿ.ಬಿ.ರಾಜಣ್ಣ, ಗುಂಡ್ಲೂರು ಕಲಾವಿದರಾದ ಮುನೇಶ್ ಸ್ವಾಮಿ. ಕರಿಬಸಪ್ಪ ಮತ್ತಿತರ ಕಲಾವಿದರು ಹಾಜರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading