

ಜನಧ್ವನಿ ವಾರ್ತೆ. ಚಿತ್ರದುರ್ಗ ಮೇ 3.ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿಗಳ ಆದಾಯತೆರಿಗೆ ಸರ್ಕಾರಕ್ಕೆ ಪಾವತಿ ಮಾಡದ ಗ್ರಾಮ ಪಂಚಾಯ್ತಿ ಪಿಡಿಒಗಳು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬಆರೋಪಗಳು ಬಲವಾಗಿ ಕೇಳಿಬಂದಿವೆ.





ಹೌದು ಇದು ಚಿತ್ರದುರ್ಗ ಜಿಲ್ಲೆಯ 6 ತಾಲೂಕಿನ 189 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2023-2024 ಹಾಗೂ 2024-25 ನೇಸಾಲಿನಲ್ಲಿನರೇಗಾ ಯೋಜನೆಯಡಿ ಸಿಸಿ ರಸ್ತೆ, ಬಾಕ್ಸ್ ಚರಂಡಿ, ಶಾಲೆ, ಅಂಗನವಾಡಿ ಕಟ್ಟಡ, ಕಾಂಪೌಂಡ್,ಕಾಮಗಾರಿಗಳಿಗೆ ಸರಬರಾಜು ಮಾಡಿದ ಇಟ್ಟಿಗೆ, ಸಿಮೆಂಟ್, ಕಲ್ಲು, ಮರಳು, ಕಬ್ಬಿಣ, ಇತರೆ ಸಾಮಗ್ರಿಗಳ ಶೇ.4ರಷ್ಟು ಮಾರಾಟ ತೆರಿಗೆ, ಶೇ.1.25 ಆದಾಯ ತೆರಿಗೆ, ಶೇ.1 ಕಾರ್ಮಿಕ ತೆರಿಗೆಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಗುತ್ತಿಗೆದಾರರಿಂದ ಕಡಿತ ಮಾಡಿಕೊಳ್ಳುತ್ತಾರೆ. ಕಡಿತ ಮಾಡಿಕೊಂಡ ತೆರಿಗೆ ಹಣವನ್ನು ಸರಕಾರ ನಿಗದಿಪಡಿಸಿದಆಯಾ ಲೆಕ್ಕ ಶೀರ್ಷಿಕೆಗೆ ಪಿಡಿಒಗಳು ಜಮೆ ಮಾಡಬೇಕು. ಆದರೆ ಸರಕಾರಕ್ಕೆ ಜಮೆ ಮಾಡದೆ ಬಾಕಿ ಉಳಿಸಿಕೊಂಡಿರುವುದು ಸರಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ನಷ್ಟವನ್ನುಂಡು ಮಾಡಿದ್ದಾರೆ ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಿ ಸರಕಾರಕ್ಕೆ ವಂಚಿಸಿರುವ ತೆರಿಗೆ ಹಣವನ್ನು ಮರುಪಾವತಿ ಮಾಡಿಸುವಂತೆ ಮಾನವ ಹಕ್ಕುಗಳ ಸಂರಕ್ಷಣೆಹಾಗೂ ಭ್ರಷ್ಠಾಚಾರ ನಿರ್ಮೂಲನೆ ಸಂಸ್ಥೆಯ ಕಂದಿಕೆರೆ ಜಗದೀಶ್ ಗ್ರಾಮಾಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಿಗೆ ದೂರುಸಲ್ಲಿರುವ ಮಾಹಿತಿ ಜನಧ್ವನಿ ಡಿಜಿಟಲ್ ಮೀಡಿಯಾ ಮಾಹಿತಿ ಲಭ್ಯವಾಗಿದೆ.

ವಿಶೇಷ ಸಮಾಜಿಕ ಲೆಕ್ಕಪರಿಶೋದನೆಗೆ ಆದೇಶ.

ಚಿತ್ರದುರ್ಗ ಜಿಲ್ಲೆಯಲ್ಲಿ ನರೇಗಾ ಯೋಜನೆಯ2023-24 ಮತ್ತು 2024-25 ಸಾಲಿನ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲು ಕಾಮಗಾರಿವಾರು ಅಗತ್ಯವಿರುವ ಸಾಮಾಗ್ರಿಗಳನ್ನು ಸರಬರಾಜು ಮಾಡಲು ಸಾಮಾಗ್ರಿ ಸರಬರಾಜುದಾರರನ್ನ ಸರ್ಕಾರದ ಮಾರ್ಗಸೂಚಿ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘನೆ ಮಾಡಿ ಏಕಪಕ್ಷೀಯವಾಗಿ ಹಾಗೂ ಅನರ್ಹರನ್ನ ಮತ್ತು ಈ ಹಿಂದೆ ಸರ್ಕಾರಕ್ಕೆ ಜಿಎಸ್‌ಟಿ ಮತ್ತು ರಾಜಸ್ವಧನವನ್ನು ವಂಚಿಸಿ ಆರ್ಥಿಕ ನಷ್ಟ ಮಾಡಿರುವವರನ್ನು ನೇಮಕಾತಿಯನ್ನು ಮಾಡಿಕೊಂಡು ಜಿಎಸ್‌ಟಿ ಮತ್ತು ರಾಜಸ್ವಧನವನ್ನು ಕಾಮಗಾರಿವಾರು ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡದೆ ನಿರಂತರವಾಗಿ ಕೊಟ್ಯಾಂತರ ಮೊತ್ತವನ್ನು ಸರ್ಕಾರದ
ಬೊಕ್ಕಸಕ್ಕೆ ವಂಚಿಸಿ ಆರ್ಥಿಕ ನಷ್ಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯ ಸಂಸ್ಥೆಯ ಚುನಾಯಿತ ಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿರುತ್ತದೆ ಈ ಬಗ್ಗೆ ಸಾಕಷ್ಟು ಸರ್ಕಾರದ ಸಭೆಗಳಲ್ಲಿ ಗಮನ ಸೆಳೆಯುವಂತೆ ಮತ್ತು ತನಿಖೆ ನಡೆಸುವಂತೆ ತಿಳಿಸಿದಾಗ್ಯೂ ತಾವುಗಳು ಈವರೆಗೂ ಯಾವುದೇ ಕ್ರಮ ಜರುಗಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿರುವುದಿಲ್ಲ. ಆದ್ದರಿಂದ, ತಾವುಗಳು ಮೇಲ್ಕಂಡ ಅಂಶದ ಬಗ್ಗೆ ತಮ್ಮ ವೈಯಕ್ತಿಕ ಗಮನಹರಿಸಿ, ನರೇಗಾ ಯೋಜನೆಯ 2023-24 ಮತ್ತು 2024-25 ಸಾಲಿನಲ್ಲಿ ಅನುಷ್ಟಾನಗೊಂಡಿರುವ ಎಲ್ಲಾ ಕಾಮಗಾರಿವಾರು ಜಿ.ಎಸ್.ಟಿ ಮತ್ತು ರಾಜಸ್ವ ಧನದ ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಿರುವ ಬಗ್ಗೆ ಕೂಲಂಕುಶವಾಗಿ ನಿಯಮಾನುಸಾರ ಪರಿಶೀಲಿಸಿ/ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ವಸೂಲಾತಿಗೆ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಸರ್ಕಾರಕ್ಕೆ ವಾಸ್ತವಾಂಶದ ಅನುಪಾಲನಾ ವರದಿಯನ್ನು ವರದಿ ನೀಡಲು ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಆಯುಕ್ತಾಲಯದ ಕಾರ್ಯಾಲಯದಿಂದ ಆದೇಶಿಸಲಾಗಿರುವ ಮಾಹಿತಿ ಲಭ್ಯವಾಗಿದೆ.
ವಿಶೇಷ ಸಾಮಾಜಿಕ ಲೆಕ್ಕಪರಿಶೋದನೆಗೆ ಮುಹೂರ್ತಪಿಕ್ಸ್.


ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿಅನುಷ್ಠಾನಗೊಂಡ ಕಾಮಗಾರಿಗಳನ್ನು 2.06.2025 ರಿಂದ 28.02.2026 ರ ವರೆಗೆ 6 ತಾಲೂಕು, 189 ಗ್ರಾಮಪಂಚಾಯಿತಿ ವ್ಯಾಪ್ತಿಗಳಲ್ಲಿ 6 ಜನ ವಿಆರ್ ಪಿಗಳಿಂದ 6 ತಾಲೂಕುಗಳಲ್ಲಿ 6804 ಸಿಬ್ಬಂದಿಗಲು ತನಿಖೆ ಮಾಡಲು ತಗಲುವ ವೆಚ್ಚ ಸುಮಾರು 65 ಲಕ್ಷ ರೂಗಳ ಸದರಿ ಮೊತ್ತವನ್ನುಬಿಡುಗಡೆಮಾಡಲು ಮತ್ತು ವಿಶೇಷ ಸಾಮಾಜಿಕ ಪರಿಶೋನೆ ನಡೆಸುವ ತಂಡಗಳಿಗೆ ಅಗತ್ಯ ಸಹಕಾರನೀಡಲು ಅನುಷ್ಠಾನಾಧಿಕಾರಿಗಳಾದ ರಾಜ್ಯಕಾರ್ಯಕ್ರಮ ವ್ಯವಸ್ಥಾಪಕರು ಅನುಪಾಲನಾ ಮತ್ತು ಆಡಿಟ್ ಕೋಶ ಹಾಗೂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಚಿತ್ರದುರ್ಗ ಇವರಿಗೆ ಸಾಮಾಜಿಕ ಲೆಕ್ಕ ಪರಿಶೋಧನಾಲಯ ನಿರ್ಧೇಶಕಾಲಯದಿಂದ ಸೂಚನೆ ನೀಡಿಲಾಗಿದೆ.
ಅಸಮಾನ ಹೊರ ಹಾಕಿದ ಪಿಡಿಒಗಳು.
ನರೇಗಾ ಮಾರ್ಗದರ್ಶನದಂತೆ ನಿಗಧಿತ ಸಮಯಕ್ಕೆ ಗುರಿ ಸಾಧನೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಆದರೆ ಯಾವ ತಾಲೂಕು, ಗ್ರಾಮಪಂಚಾಯಿತಿಗಳಲ್ಲಿ ಭ್ರಷ್ಠಾಚಾರವಾಗಿದೆಯೋ ಅಲ್ಲಿ ತನಿಖೆ ನಡೆಯಲಿ ಆದರೆ ಇಡಿ ಜಿಲ್ಲೆಯನ್ನೇ ತಪ್ಪು ಮಾಡಿರುವಂತೆ ವಿಶೇಷ ಸಾಮಾಜಿಕ ಲೆಕ್ಕ ಪರಿಶೋದನೆಗೆ ಆದೇಶ ಮಾಡಿರುವುದು ಗ್ರಾಮಪಂಚಾಯಿಗಳಲ್ಲಿ ಕೆಲಸ ಮಾಡಲು ಮಾನಸಿಕ ಒತ್ತಡಗಳಿಗೆ ಸಿಲುವಂತೆ ಮಾಡಿದೆ ಈಗಾಗಲೆ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಆಯಾ ವರ್ಷಗಳಲ್ಲಿ ಸಾಮಾಜಿಕ ಲೆಕ್ಕ ಪರಿಶೋನೆಗಳು ನಡೆಯುತ್ತಿವೆ ಈಗಾ ಗ್ರಾಮಪಂಚಾಯಿತಿ ಮಟ್ಟದ ಸಾಮಾಜಿಕ ಲೆಕ್ಕ ಪರಿಶೋದನೆಗೆ ದಿನಾಂಕ ನಿಗಧಿಯಾಗಿದ್ದು ಇದರ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಮಪಂಚಾಯಿಗಳಲ್ಲಿ ನರೇಗಾ ಕಾಮಗಾರಿಗಳ ವಿಶೇಷ ಸಾಮಾಜಿಕ ಲೆಕ್ಕ ಪರಿಶೋನೆಗೆ ಒಳ ಪಡಿಸುವುದು ಕೆಲ ತಾಲೂಕಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ಗುಸು ಗುಸು ಮಾತಗಳು ಕೇಳಿ ಬರುತ್ತಿದ್ದು ಆಯಾ ಶಾಸಕರ ಬಳಿಯೂಸಹ ತಮ್ಮ ಕಷ್ಟಗಳನ್ನು ಹೇಳಿ ಕೊಳ್ಳಲು ಮುಂದಾಗಿರುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ.
About The Author
Discover more from JANADHWANI NEWS
Subscribe to get the latest posts sent to your email.