ಚಳ್ಳಕೆರೆ ಏ3
ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಅನುಷ್ಠಾನಗೊಂಡ ನರೇಗಾ (ಉದ್ಯೋಗಖಾತ್ರಿ)ಯೋಜನೆ ಇದೀಗ ದಿಕ್ಕು ತಪ್ಪಿದಂತಿದೆ. ಕೂಲಿ ಸೃಷ್ಟಿ ಹೆಸರಲ್ಲಿತಾಲೂಕಿನ ಬಹುತೇಕ ಗ್ರಾ.ಪಂ. ಆಡಳಿತ ವ್ಯಾಪ್ತಿ ಸಲೀಸಾಗಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆಯುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಚಳ್ಳಕೆರೆ ಇಲಾಖೆಯಿಂದ 2024-25 ನೇ ಸಾಲಿನ ನರೇಗಾ ಯೋಜನೆ ಉಲ್ಲಂಘಿಸಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಮಾತ್ರ ಕೂಲಿ ಕಾರ್ಮಿಕಲ್ಲದವರನ್ನು ಕರೆದುಕೊಂಡು ಹೋಗಿ ಎನ್ ಎಂ ಎಂಎಸ್ ಹಾಜರಾತಿ ಮಾಡುತ್ತಿದ್ದು ಪ್ರತಿನಿತ್ಯ ಕೂಲಿ ಕಾರ್ಮಿಕರ ಹಾಜರಾತಿ ಎಂಟ್ರಿ ಮಾಡುತ್ತಿದ್ದರೂ ಕಾಮಗಾರಿ ಮಾತ್ರ ನಡೆಯುತ್ತಿಲ್ಲ. ನರೇಗಾ ಯೋಜನೆಯಲ್ಲಿ ಕೋಟಿ ಕೋಟಿ ಅನುದಾನ ಯೋಜನೆಯಲ್ಲಿ ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಮಾಡದೆ ಕೂಲಿ ಹಣ ಎಂಟ್ರಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
200ರೂ ಕಮೀಷನ್:
ಕಾಮಗಾರಿಗೆ ಸಂಬಧಿಕರ ಹಾಗೂ ಹಣ ಬಿಡಿಸಿಕೊಡುವವರ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಗಳನ್ನು ಹಾಕಿ ಕಮೀಷನ್ ಆಸೆ ತೋರಿಸಿ ಜಾಬ್ ಕಾರ್ಡ್ ಹೊಂದಿರದ ಕಾರ್ಮಿಕರನ್ನು ಕಾಮಗಾರಿಗೆ ಕೆಲಸ ಮಾಡದ ಕರ್ಮಿಕರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲಾಗುತ್ತಿದೆ. ಒಂದು ವಾರದ ಕೂಲಿ ಮೊತ್ತಕ್ಕೆ 200ರೂ ಕಮೀಷನ್ ನೀಡಲಾಗುತ್ತಿದೆ.
ಎನ್.ಎಂ.ಎಂ.ಎಸ್ ಹಾಜರಾತಿ ಗೋಲ್ ಮಾಲ್.


ಉದ್ಯೋಗ ಖಾತ್ರಿಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಸರಕಾರ
(ನರೇಗಾ) ಯಲ್ಲಿ ‘ನ್ಯಾಷನಲ್ ಮೊಬೈಲ್ ಮಾನಿಟ ರಿಂಗ್ ಸಿಸ್ಟಂ (ಎನ್.ಎಂ.ಎಂ.ಎಸ್) ಆ್ಯಪ್ ಮೂಲಕ ಇ–ಹಾಜರಾತಿ ವ್ಯವಸ್ಥೆ ಜಾರಿಗೆ ತಂದಿರೂ ಸಹ ಕಾಮಗಾರಿಗೆ ಹಾಕಿರುವ ಕೂಲಿ ಕಾರ್ಮಿಕರ ಹೆಸರಲ್ಲದವರನ್ನು ನಿಲ್ಲಿಸಿ . ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಕಾರ್ಮಿಕರ ಇ–ಹಾಜರಾತಿ ಪಡೆಯಲು ಬೆಳಿಗ್ಗೆ 10ರಿಂದ 11ಹಾಗೂ ಮಧ್ಯಾಹ್ನ 2ರಿಂದ 5ರ ನಡುವಿನ ಸಮಯದೊಳಗೆ ಜಿಪಿಎಸ್ ನೆರವಿನಿಂದ ಕಾಮಗಾರಿ ಸ್ಥಳದ ಛಾಯಾಚಿತ್ರ ತೆಗೆದು ಅಪ್‌ಲೋಡ್ ಮಾಡುತ್ತಾರೆ.
ಬೆಳಗ್ಗೆ ಎನ್.ಎಂ.ಎಸ್ ಹಾಜರಾತಿಯಲ್ಲಿದ್ದಕೂಲಿ ಕಾರ್ಮೀರು ಮಧ್ಯಾಹ್ನ ತೆಗೆದು ಇ-ಹಾಜರಾತಿಯಲ್ಲಿ ಇರುವುದಿಲ್ಲ ಎನ್.ಎಂ.ಎಸ್ ಇ- ಹಾಜರಾತಿಯಲ್ಲಿ ವ್ಯತ್ಯಾಸದ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಗೆ ಎರಡು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿವೆ ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ತನಿಖೆ ನಡೆಸು ಸೂಕ್ತ ಕ್ರಮ ಜರುಗಿಸುವರೇ ಕಾದು ನೋಡ ಬೇಕಿದೆ.









About The Author
Discover more from JANADHWANI NEWS
Subscribe to get the latest posts sent to your email.