ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಜಾತ್ರಾಮಹೋಣ್ಸವ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ದೇವರ ದರ್ಶನ ಪಡೆದರು.
















ಪರಶುರಾಂಪುರ ಗ್ರಾಮದ
ಆರಾಧ್ಯ ದೇವತೆಯಾದ
ಕೊಲ್ಲಾಪುರದಮ್ಮ ದೇವಿಯ
ರಥೋತ್ಸವ ಬುಧವಾರ ಶ್ರದ್ಧಾ
ಭಕ್ತಿಯಿಂದ ವಿಜೃಂಭಣೆಯಿಂದ
ನೆರವೇರಿತು.
ರಥವನ್ನ
ಭಕ್ತಾದಿಗಳು
ಎಳೆದು
ಸಂಭ್ರಮಿಸಿದರು. ರಥೋತ್ಸವದ
ಅ೦ಗವಾಗಿ ದೇವಿಗೆ ವಿವಿಧ
ಧಾರ್ಮಿಕ ಕಾರ್ಯಕ್ರಮಗಳು ಬೆಳಗ್ಗೆಯಿಂದ ನೆರವೇರಿದವು, ರಥೋತ್ಸವ
ಅ೦ಗವಾಗಿ ರಥಾಂಗ ಹೋಮ ಬಳಿಕ ಪ್ರಾಕಾರೊತ್ಸವ ನಂತರ ಬಲಿ ಹಾಗೂ
ಬಾನ ನೆರವೇರಿಸಲಾಯಿತು.
ರಥವನ್ನು
ವಿವಿಧ ಬಗೆಯ ಹೂವು, ಬಾವುಟಗಳಿಂದ
ಅಲಂಕೃತಗೊಳಿಸಲಾಗಿತ್ತು. ಈ ವೇಳೆಯಲ್ಲಿ ಭಕ್ತಾದಿಗಳು ತಮ್ಮ ಹರಕೆಯನ್ನ
ತೀರಿಸಲು ವಿವಿಧ ಬಗೆಯ ದೊಡ್ಡ ದೊಡ್ಡ ಗಾತ್ರದ ಹೂವಿನ ಹಾರಗಳನ್ನು
ವಿವಿಧ ಜನಪದ ವಾದ್ಯಗಳ ಮೆರವಣಿಗೆ ಮೂಲಕ ರಥೋತ್ಸವಕ್ಕೆ ಅರ್ಪಿಸಿದರು.
ಕೆಡಿಪಿ ಮಾಜಿ ಸದಸ್ಯ ಜಯವೀರಚಾರಿ ಒಂದು ಲಕ್ಷದ ಒಂದು ರೂಪಾಯಿಗೆ
ಮುಕ್ತಿ ಭಾವುಟದ ಹರಾಜಿನಲ್ಲಿ ಪಡೆದುಕೊಂಡರು.

ಚಳ್ಳಕೆರೆ ತಾಲ್ಲೂಕಿನ ಪಗಡಲಬಂಡೆ ಗ್ರಾಮದಲ್ಲಿ ನಡೆದ ಶ್ರೀ ನಂದೀಶ್ವರ (ಬಸವೇಶ್ವರ) ಸ್ವಾಮಿ ಜಾತ್ರಾ ಮಹೋತ್ಸವದ ರಥೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಜಿಲ್ಲಾ ಗ್ಯಾರೆಂಟಿ ಸಮಿತಿಯ ಸದಸ್ಯ ಚನ್ನಕೇಶವ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯ ಬಸವರಾಜ್, ಮುಖಂಡರುಗಳಾದ ಬಸವರಾಜ್, ತಿಪ್ಪೇಸ್ವಾಮಿ, ಶಿವಶಂಕರ, ಮಂಜಣ್ಣ, ಮುಖಂಡರು, ಇತರರಿದ್ದರು.
ಚಳ್ಳಕೆರೆ ತಾಲ್ಲೂಕಿನ ಜಾಜ್ಯೂರು ಗ್ರಾಮದಲ್ಲಿ ನಡೆದ ಶ್ರೀ ಕರಿಯಮ್ಮ ದೇವಿ ಯ ನೂತನ ಮಹಾದ್ವಾರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಟಿ.ರಂಜನ್, ಉಪಾಧ್ಯಕ್ಷ ಪ್ರೇಮಕ್ಕ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಸದಸ್ಯರುಗಳಾದ ನರಸಿಂಹಪ್ಪ, ಹೇಮಂತ್ ಕುಮಾರ್, ರಂಗನಾಥ್, ಮುಖಂಡರುಗಳಾದ ವೆಂಕಟೇಶ್, ಚೆಲುಮೇಶ, ವೀರಣ್ಣ, ಸಂಪತ್ ಕುಮಾರ್, ನಾಗರಾಜ್, ಚೆಲುಮೇಶ್, ಸುರೇಶ್, ಮಂಜುನಾಥ್, ರಂಗಪ್ಪ, ರಂಗಪ್ಪ, ಮುಖಂಡರು ಇತರರಿದ್ದರು.
ಚಳ್ಳಕೆರೆ ತಾಲ್ಲೂಕಿನ ಪಿಲಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಯೋಗಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೌರ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಶಶಿಧರ, ಜಿಲ್ಲಾ ಗ್ಯಾರೆಂಟಿ ಸಮಿತಿಯ ಸದಸ್ಯ ಚನ್ನಕೇಶವ, ತಾಲ್ಲೂಕು ಪಂಚಾಯತ್ ಕೆಡಿಪಿ ನಾಮ ನಿರ್ದೇಶನ ಸದಸ್ಯಬಸವರಾಜ್, ಮುಖಂಡರುಗಳಾದ ಮಂಜಣ್ಣ, ಶಿವಣ್ಣ, ರಾಮಕೃಷ್ಣಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.