ಚಳ್ಳಕೆರೆ ಫೆ.3 ಭಾರತೀಯ ಹಿಂದೂ ಸನಾತನ ಧರ್ಮ ಭಕ್ತಿ ಭಾವನೆ ಮತ್ತು ನಂಬಿಕೆಗಳ ನೆಲೆ ನಾಡು ಈ ಚಿತ್ರದುರ್ಗ ಜಿಲ್ಲೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ಇಂದು ತುಳುಕು ಹೋಬಳಿಯ ಹಿರೇಹಳ್ಳಿಯಲ್ಲಿ ದೊಡ್ಡ ಸೂರ ನಾಯಕರ ಮೀಸಲು ನೀರು ಕುಂಭ ಮತ್ತು ದೇವರ ಎತ್ತು ಹರಿಸುವ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ ಈ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಗೆ ಬುಡಕಟ್ಟು ಸಮುದಾಯಗಳಾದಂತ ಮ್ಯಾಸಮಂಡಲ ಮತ್ತು ಕಾಡುಗೊಲ್ಲ ಜನಾಂಗಗಳ ಧಾರ್ಮಿಕ ಆಚರಣೆಗಳು ವಿಭಿನ್ನ ರೀತಿಯ ಜೀವನ ಶೈಲಿಗಳು ಮತ್ತು ಸಮಾಜದಲ್ಲಿನ ಸಹ ಬಾಳ್ವೆ,ನಿಸ್ವಾರ್ಥದ ಬದುಕಿಗೆ ಹಿಡಿದ ಕೈಕನ್ನಡಿಯಾಗಿದೆ





ಈ ಜನಾಂಗಗಳ ಬದುಕೇ ಒಂದು ಸ್ವಾಭಿಮಾನದ ಸಂಕೇತವಾಗಿದೆ ಬಡತನವನ್ನು ಮತ್ತು ಅನಕ್ಷರತೆಯನ್ನು ಮೀರಿ ಈ ಸಮಾಜಗಳು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿ ಹೊಂದುತ್ತಿರುವುದು ಸಾರ್ಥಕವೆನಿಸುತ್ತದೆ ಕಠಿಣ ವೃತದ ಮುಖಾಂತರ ಈ ದೇವರ ಪೂಜಾ ಕಾರ್ಯ ಗಳನ್ನು ಈ ಭಕ್ತಾದಿಗಳು ಪಾಲಿಸಿ ದೇವರ ಗುಡಿ ತುಂಬಿಸುವ ಕೆಲಸ ಮಾಡಿ ಈ ದೇವರ ಎತ್ತುಗಳ ಪೂಜಾ ಕಾರ್ಯ ಧಾರ್ಮಿಕ ಪರಾಕಷ್ಟೆಗೆ ಪೂರಕವಾಗಿದೆ ಇದರ ಜೊತೆಗೆ ಈ ಸಮುದಾಯದ ಕುಟುಂಬಗಳು ಇನ್ನು ಹೆಚ್ಚು ಹೆಚ್ಚು ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯನ್ನು ಸಾಧಿಸುವ ಅವಶ್ಯಕತೆ ಇದೆ ಹೆಚ್ಚು ಹೆಚ್ಚು ಈ ಕುಟುಂಬದ ಮಕ್ಕಳು ಉನ್ನತ ಶಿಕ್ಷಣವನ್ನು ತಮ್ಮದಾಗಿಸಿಕೊಂಡು ಸ್ವಾವಲಂಬಿ ಕುಟುಂಬಗಳಾಗಬೇಕೆಂದು ಕರೆ ನೀಡಿದರು
ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ್ ಪಂಚಾಯ್ತಿ ಅಧ್ಯಕ್ಷರಾದ ಮಂಜಮ್ಮ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜ್ಞಾನೇಶ್ ಸದಸ್ಯರಾದ ಚಂದ್ರಣ್ಣ ಮಲ್ಲೇಶ್ ಬಿಜೆಪಿ ಮುಖಂಡರಾದ ರೂಪ ನಾಗರಾಜ್ ಮತ್ತಿತರ ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.