ನಾಯಕನಹಟ್ಟಿ :ಹೋಬಳಿಯ ತೊರೆಕೋಲಮ್ಮನಹಳ್ಳಿ ಗ್ರಾಮದ ಗುರುಸ್ವಾಮಿ ಎಂಬ ವ್ಯಕ್ತಿ ಭಾನುವಾರ ರಾತ್ರಿ ಸುಮಾರು 8:30 ಕ್ಕೆ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಕಾರಣ ಎಂದು………….. ಅರ್ಪಿಸಿದರು.
ನಂತರ ಮಾತನಾಡಿದ ಅವರು ಪಟ್ಟಣ ಪಂಚಾಯತಿ ಅಧಿಕಾರಿಗಳು ಕಸ ಸಂಗ್ರಹಣ ಘಟಕವನ್ನು ವೈಜ್ಞಾನಿಕ ರೀತಿಯಲ್ಲಿ ರೂಪಿಸಿ, ಅದರಲ್ಲಿ ಹಂದಿ ಮತ್ತು ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಬೈಕ್ ನಲ್ಲಿ ಹೋಗುವಾಗ ಹಂದಿ ತಪ್ಪಿಸಲು ಹೋಗಿ ಮರಣ ಹೊಂದಿರುತ್ತಾರೆ. ಕಸ ಸಂಗ್ರಹಣ ಘಟಕವನ್ನು ಪಟ್ಟಣ ಪಂಚಾಯತಿಯವರು ಅವೈಜ್ಞಾನಿಕವಾಗಿರುವುದೇ ಗುರುಸ್ವಾಮಿ ಸಾವಿಗೆ ಕಾರಣ. ಆದ್ದರಿಂದ ಪಟ್ಟಣ ಪಂಚಾಯತಿ ಅಧಿಕಾರಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.



ನಂತರ ಗುಂತಕೋಲಮ್ಮನಹಳ್ಳಿ ಜೆಸಿಬಿ ತಿಪ್ಪೇಸ್ವಾಮಿ ಮಾತನಾಡಿದರು ನಾಯಕನಹಟ್ಟಿ ಪಟ್ಟಣದಿಂದ ತೊರೆಕೋಲಮ್ಮನಹಳ್ಳಿ ಮಾರ್ಗವಾಗಿ ಸಾಕಷ್ಟು ವಾಹನಗಳ ಸಂಚರಿಸುತ್ತಿವೆ. ಇದೇ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಸ ವಿಲೇವಾರಿ ಘಟಕವನ್ನು ಪ್ರವಾಸಿ ಮಂದಿರದ ಪಕ್ಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಪಟ್ಟಣದ ತ್ಯಾಜ್ಯದ ಜೊತೆಗೆ ಕೋಳಿ ಹಾಗೂ ಮಾಂಸದಂಗಡಿಯ ತ್ಯಾಜ್ಯಗಳನ್ನು ರಸ್ತೆ ಪಕ್ಕದಲ್ಲಿ ಹಾಕಿರುವುದರಿಂದ ಹಂದಿ, ನಾಯಿಗಳ ಹಾವಳಿಯಿಂದ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತವೆ. ವಾಹನಸವರು ಹಂದಿಯಾದ ನಾಯಿಗಳನ್ನು ತಪ್ಪಿಸಲು ಹೋಗಿ ತಮ್ಮ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕೂಡಲೇ ಅಧಿಕಾರಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು .
ಇದೇ ವೇಳೆ ಸಮಾಜ ಸೇವಕ ಕೆ.ಎಂ. ಪಂಚಾಕ್ಷರಿ ಸ್ವಾಮಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತೊರೆಕೋಲಮ್ಮನಹಳ್ಳಿ ಆರ್ ಬಸಪ್ಪ, ಎ.ಬಿ. ವಿರುಪಾಕ್ಷಪ್ಪ, ಎಸ್ .ಕೆ. ನಾಗರಾಜ್, ಡಿ. ಬಿ .ಬೋಸಯ್ಯ ಚನ್ನಬಸಯ್ಯನಹಟ್ಟಿ,ಬಿ. ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಹೊಸಕಪಿಲೆ ಬೋರೆಯ್ಯ, ಎಸ್ .ಬಿ.ಗುರುಸ್ವಾಮಿ, ಇದ್ದರು,
About The Author
Discover more from JANADHWANI NEWS
Subscribe to get the latest posts sent to your email.