January 30, 2026
IMG-20250203-WA0128.jpg

ಚಳ್ಳಕೆರೆ ಫೆ.2

ಸಭೆಗೆ ಬರುವಾಗ ಅಧಿಕಾರಿಗಳು ಅಗತ್ಯ ಮಾಹಿತಿ ಅಂಕಿ ಅಂಶಗಳೊಂದಿಗೆ ಬರುವಂತೆ ಶಾಸಕ ಟಿ.ರಘುಮೂರ್ತಿ ತಾಕೀತು ಮಾಡಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳಿಗೆ ಆಯೋಜಿಸಿದ್ದ ತ್ರೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಸಭೆಗೆ ಮಾಹಿತಿ ನೀಡುತ್ತಾ ತೊಗರಿ 6 ಸಾವಿರ ಬಿತ್ತನೆ 11 ಸಾವಿರ ಹೆಕರೆ ಬಿತ್ತನೆ ಕೃಷಿ ಪರಿಕರಗಳ ಬೇಡಿಕೆ ಇದ್ದು ವರ್ಷದಿಂದ ಬಿಡುಗಡೆಯಾಗಿಲ್ಲ.ಸ್ಪಿಂಕ್ಲರ್ ಬೇಡಿಕೆ ಇದ್ದು ಎಲ್ಲಾ ರೈತರಿಗೂ ಶೇ90 ಸಹಾಯಧನ ದಂತೆ ವಿತರಣೆ ಎಂದು ತಿಳಿಸಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ರೈತರ ಹೆಸರಿನಲ್ಲಿ ತಾಲೂಕಿನ 9 ಕೋ ರೂ ಸೇರಿದಂತೆ ಜಿಲ್ಲೆಯ 48 ಕೋಟಿ ರೂ ಬೆಳೆನಷ್ಟ ಪರಿಹಾರ ಮೊತ್ತದ ಬೇರೆಯವರ ಖಾತೆಗೆ ಹಾಕಿಕೊಂಡು ವಂಚನೆ ಮಾಡಿರುವ ಪ್ರಯಕರಣ ಏನಾಗಿದೆ. ಮತ್ತೆ ಜಿಲ್ಲಾ ಪಂಚಾಯತ್ ಸಭೆಯಲ್ಲೂ ಚರ್ಚೆ ಮಾಡುವೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗ ಬೇಕು ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ತಾಕೀತು ಮಾಡಿದರ.
ಪಶುಸಂಗೋಪನೆ ಸಹಾಯಕ ನಿರ್ದೇಶ ಡಾ.ರೇವಣ್ಣ ಮಾಹಿತಿ ನೀಡುವಾಗ ಶಾಸಕ ಟಿ.ರಘುಮೂರ್ತಿ ಮಾತನಾಡಿ ಪುಣ್ಯಕೋಟಿ ಗೋಶಾಲೆ ಸರಕಾರದ್ದು ಯೋರೋ ಖಾಸಗಿಯವರು ನಿರ್ವಹಣೆ ಮಾಡಲು ಕೊಟ್ಟು ಕೈತೊಳೆದುಕೊಳ್ಳಬೇಡಿ ದೊಡ್ಡ ಸಂಸ್ಥೆ ಗೋವುಗಳ ಪಾಲನೆ ಪೋಷಣೆ ಮಾಡುವಂತವರು ಬಂದರೆ ಕೊಡಿ .ದೇವರ ಎತ್ತುಗಳ ಸಾಕಾಣಿಕೆ ಟ್ರಸ್ಟ್‌ ಮಾಡಿಸಿ.ಕುರಿ ಹಾಗೂ ಜಾನುವಾರುಗಳು ರಜೆ ದಿನಗಳಲ್ಲಿ ಮೃತಪಟ್ಟರೆ ಸಿಬ್ಬಂದಿಯಿಲ್ಲ ಎಂದು ಹಾಗೆ ಇಟ್ಟುಕೊಳ್ಳಲು ಸಾದ್ಯವೇ ಯಾರಾದರೂ ಮೃತಪಟ್ಟರೆ ಹೊರದೇಶದಲ್ಲಿ ಬರುವತಕ ಕಾಯುವಂತೆ ಜಾನುವಾರುಳಿಗೆ ಬರ ಬಾರದು ಕೂಡಲೆ ಅಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ಮಾಡಿ ಸರಕಾರದ ಅನುಗ್ರಹ ಯೋಜನೆ ಕೊಡಿಸವಬೇಕು ಎಂದು ತಿಳಿಸಿದರು.

ಕುಡಿಯುವ ನೀರು ಎಇಇ ದಯಾನಂದ್ ಸಭೆಗೆ ಮಾಹಿತಿ ನೀಡುವಾಗ.ಶುದ್ದಕುಡಿಯುವ ನೀರಿನ ಘಡಕಗಳ ಹತ್ತು ವರ್ಷಗಳ ಅವಧಿ ಮುಗಿದಿದ್ದು ಗ್ರಾಮ ಪಂಚಾಯತಿ ಪಿಎಇಒಗಳು ವಶಕ್ಕೆ ಪಡೆಯುತ್ತಿಲ್ಲ ಓಡಾಡಿಸುತ್ತಾರೆ ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ ಬೇಸಿಗೆ ಬಂತು ಕುಡಿಯುವ ನೀರಿನ ಸಮಸ್ಯೆಯಾಗ ಬಾರದು ನೀರಿನ ಘಟಕಗಳನ್ನು ವಶಕ್ಕೆ ಪಡೆಯಕು ಏನು ಸಮಸ್ಯೆ ಎಂದು ಪಿಡಿಒ ಗಳಿಗೆ ಪ್ರಶ್ನಿಸಿದರು.
ಪಿಡಿಒ ಗಳ ಮಾತನಾಡಿ ಶುದ್ದ ಕುಡಿಯುವ ನೀರಿನ ಘಟಕಗಳು ಹತ್ತು ವರ್ಷ ಅವದಿಮುಗಿದಿದ್ದು ಕೆಲವು ಕೆಟ್ಟು ಹೋಗಿವೆ ವಿದ್ಯುತ್ ಬಿಲ್ ಬಾಕಿ ಇದೆ ದುರಸ್ಥಿ ಪಡಿಸಿಕೊಟ್ಟರೆ ಪಡೆಯಲಾಗುವುದು ಎಂದು ತಿಳಿಸಿದರು.
ಗುತ್ತಿಗೆದಾರ ಶಶಿಧರ್ ಮಾತನಾಡಿ ಎಲ್ಲವನ್ನು ದುರಸ್ಥಿ ಪಡಿಸಿ ಕೊಡಲಾಗುವುದು ಎಂದರು.
ಶಾಸಕ ಟಿ.ರಘುಮೂರ್ತಿಮಾತನಾಡಿ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಶಾಲಾ ಕಾಲೇಜು . ಆಸ್ಪತ್ರೆ. ಅಂಗನವಾಡಿ ಕೇಂದ್ರಗಳಿಗೆ ನಲ್ಲಿ ಸಂಪರ್ಕ ನೀಡ ಬೇಕು .ಪೈಪ್ ಲೈನ್ ಮಾಡಲು ಅಗೆದ ಸಿಸಿ ರಸ್ತೆ ದುರಸ್ತಿ ಪಡಿಸುವಂತೆ ತಿಳಿಸಿದರು.
ಸಾರಿಗೆ ವ್ಯವಸ್ಥಾಪಕ ಪ್ರಭು ಸಭೆಗೆ ಮಾಹಿತಿ ನೀಡುವಾಗ ನೀವು ನಗರ ಸಾರಿಗೆ ಬಸ್ ಬಿಡುವುದು ಯಾವಾಗ ಸಾಕಷ್ಟು ಹಳ್ಳಿಗಳಿಗೆ. ವಿದ್ಯಾರ್ಥಿ ನಿಯಮಗಳಿಗೆ ಬಸ್ ಸಂಚರಿಸದೆ ದೂರುಗಳು ಬರುತ್ತಿವೆ ಹಣ ಇದ್ದವರು ಬಾಟಲಿ ನೀರು ಖರೀದಿಸಿ ಕುಡಿಯುತ್ತಾರೆ .ಹಣ ಇಲ್ಲದವರು ಏನು ಮಾಡಬೇಕು ಕೂಡಲೇ ನೀರಿನ ಘಟಕ ದುರಸ್ಥಿಪಡಿಸುಂತೆ ತಾಕೀತು ಮಾಡಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ತಾಪಂ ಆಡಳೀತ ಅಧಿಕಾರಿ ಡಾ.ಮಂಜುನಾಥ್ . ತಹಶಿಲ್ದಾರ್ ರೇಹಾನ್ ಪಾಷ.ತಾಪಂ ಇಒ ಶಶಿಧರ್. ಚಿತ್ರದುರ್ಗ ತಹಶೀಲ್ದಾರ್ ನಾಗವೇಣಿ.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರ್.
ವಿವಿಧ ಇಲಾಖೆಯ ಅಧಿಕಾರಿಗಳು ಪಿಡಿಒ ಗಳು ಸಭೆಗೆ ಮಾಹಿತಿ ನೀಡಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading