ಹೊಸದುರ್ಗ ಜ 3. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳು ಮತ್ತು ದುಶ್ಚಟಗಳ ಬಗ್ಗೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಭಾರತ ಸೇವಾದಳ ತಾಲೂಕು ಅಧ್ಯಕ್ಷರಾದ ಮತ್ತು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಎಂ.ಆರ್.ಸಿ ಮೂರ್ತಿರವರು ಅಭಿಪ್ರಾಯಪಟ್ಟರು.

ಇಂದು ಹೊಸದುರ್ಗ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸೇವಾದಳವು ಹಮ್ಮಿಕೊಂಡಿದ್ದ ಸೇವಾದಳ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳು ಬೀಡಿ ಸಿಗರೇಟು ಗುಟ್ಕಾ ತಂಬಾಕಿನಂತಹ ವ್ಯಸನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಇದರಿಂದ ಅವರ ಆರೋಗ್ಯದ ಬಗ್ಗೆ ದುಷ್ಪರಿಣಾಮ ಬೀರಲಿದೆ ಇದೇ ಅಭ್ಯಾಸವು ಮುಂದೆ ಅವರು ಯುವಕರಾದಾಗ ಮಧ್ಯ ವ್ಯಸನಿ ಯಾಗುತ್ತಾರೆ. ಇದರಿಂದ ಸಮಾಜಕ್ಕೆ ಮತ್ತು ಅವರ ಕುಟುಂಬಕ್ಕೆ ಕಂಟಕವಾಗುತ್ತದೆ ಎಂದು ತಿಳಿಸಿದರು. ಇದರ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳಿಗೆ ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಗುವುದೆಂದು ತಿಳಿಸಿದರು.
ವಲಯ ಸಂಘಟಕರದ ಅಣ್ಣಯ್ಯನವರು ಪ್ರಾಸ್ತಾವಿಕವಾಗಿ ಮಾತನಾಡಿ ಸೇವಾದಳದ ಅಮೃತ ಮಹೋತ್ಸವ ಮತ್ತು ಸಪ್ತಾಹದ ಕಾರ್ಯಕ್ರಮಗಳನ್ನ ಜಿಲ್ಲಾ ದ್ಯಂತ ನಡೆಸಿರುವ ಬಗ್ಗೆ ತಿಳಿಸಿದರು. ಕಾಲೇಜಿನ ಹಿರಿಯ ಶಿಕ್ಷಕರಾದ ಹರೀಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಕರಾದ ರವಿಕುಮಾರ್ ಶಿವಶಂಕರ್ ಮಂಜುನಾಥ್ ಕೃಷ್ಣಮೂರ್ತಿ ಭಾರತಮ್ಮ ಉಪಸ್ಥಿತರಿದ್ದರು. ತಾಲೂಕು ಅಧಿನಾಯಕರಾದ ಮಹಾಂತೇಶವರು ಸರ್ವರನ್ನು ಸ್ವಾಗತಿಸಿ ತಾಲೋಕಿನಲ್ಲಿ ನಡೆದ ಸೇವಾದಳ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರಮೀಳಾರವರು ವಂದಿಸಿದರು ನಾಗಮಣಿ ಅವರು ನಿರೂಪಿಸಿದರು.
About The Author
Discover more from JANADHWANI NEWS
Subscribe to get the latest posts sent to your email.