January 30, 2026
IMG-20250103-WA0155.jpg

ಚಳ್ಳಕೆರೆ:ಋಷಿಮುನಿಗಳು ಮನಸ್ಸಿನ ಏಕಾಗ್ರತೆ ಮತ್ತು ತಪ್ಪಸ್ಸಿನ ಗುರಿ ಸಾಧನೆಗೆ, ನೀರು ಬಳಕೆ ಇರದ ತುಪ್ಪ ಬಳಸಿದ ಪಕ್ಕ ಆಹಾರ ಸೇವನೆ ಮಾಡುತ್ತಿದ್ದರು ಎಂದು ಕವಿ ಕೊರ್ಲಕುಂಟೆ ಜೆ. ತಿಪ್ಪೇಸ್ವಾಮಿ ಹೇಳಿದರು

ತ್ಯಗರಾಜ್ ನಗರದ ಇಂಡಸ್‌ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಬೆಂಕಿ ಬಳಸದೆ ಆಹಾರ ಪದಾರ್ಥಗಳ ತಯಾರು ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ತಿರ್ಪುಗಾರರಾಗಿ ಆಗಮಿಸಿ ಮಾತನಾಡಿ.

ಮಿತ ಆಹಾರ ಪದ್ದತಿ ಇರಬೇಕು. ಬಾಲ್ಯದಲ್ಲಿ ಮಗುವಿಗೆ ರೋಗ ನಿಯಂತ್ರಣ ಶಕ್ತಿ ವೃದ್ದಿಯಾಗುವ ಆಹಾರ ಬಗ್ಗೆ ಪಾಲಕರು ಜಾಗೃತಿ ವಹಿಸಬೇಕು ಎಂದು ಹೇಳಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಟಿ. ಚಿಕ್ಕಣ್ಣ ಮಾತನಾಡಿ, ಮಕ್ಕಳ ಭವಿಷ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಚಿಂತನೆ ಮಾಡಬೇಕಿದೆ. ಸಿರಿಧಾನ್ಯ ಪದಾರ್ಥಗಳ ಬಳಕೆಯಿಂದ ರೋಗಮುಕ್ತ ಆರೋಗ್ಯ ಇರುತ್ತದೆ. ಬೀದಿಬದಿ ಪದಾರ್ಥಗಳಿಂದ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಉತ್ತಮ ಆರೋಗ್ಯವಂತ ಮಗು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತದೆ. ಕಲಿಕೆಯ ಪ್ರಗತಿಯನ್ನ ಬಯಸುವ ಪಾಲಕರು ಮಗುವಿನ ಉತ್ತಮ ಆರೋಗ್ಯದ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯ ಪೋಷಕಿ ಎಸ್. ಆಶಾ ಮಾತನಾಡಿ, ಬದಲಾಗುತ್ತಿರುವ ಆಹಾರ ಪದ್ದತಿಯಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಪಾಲಕರಿಗೆ ಒಂದು ಸವಾಲಾಗಿದೆ.ಕುಟುಂಬದ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ. ಆಹಾರ ತಯಾರಿಕೆಯಲ್ಲಿ ಪ್ರತಿಯೊಂದು ಪದಾರ್ಥಗಳ ಗುಣಮಟ್ಟ ಮತ್ತು ಬಳಕೆಯ ಪ್ರಮಾಣದ ಬಗ್ಗೆ ಎಚ್ಚರ ಇರಬೇಕು. ಮಕ್ಕಳಲ್ಲಿ ಮನೆ ತಯಾರಿಕ ಆಹಾರ ಆಸಕ್ತಿ ಇರುವುದಿಲ್ಲ. ಆದರೂ, ಮೊಬೈಲ್, ಟಿವಿ. ತೋರಿಸುತ್ತ ಮತ್ತು ಆಟಿಕೆ ಸಾಮಾನುಗಳನ್ನು ಕೈಗೆ ಕೊಟ್ಟು ಬಲವಂತವಾಗಿ ಊಟ ಮಾಡಿಸುತ್ತೇವೆ. ಇದರಿಂದ ಆಹಾರದ ರುಚಿ ಮಕ್ಕಳಿಗೆ ರುಚಿಸುವುದಿಲ್ಲ. ಆಹಾರ ತಯಾರಿಸಿದ ವಿಧಾನ ಮತ್ತು ಬಳಸಿರುವ ಪದಾರ್ಥಗಳ ಬಗ್ಗೆ ತಿಳಿಸಿ ಮಕ್ಕಳಿಗೆ ಉಣಬಡಿಸುವ ಜಾಣ್ಮೆ ಇರಬೇಕು. ಬೆಂಕಿಯಿಂದ ಬೇಯಿಸುವ ಆಹಾರದಲ್ಲಿ ಪೌಷ್ಠಿಕತೆ ಕುಂಠಿತವಾಗುತ್ತದೆ. ಸೊಪ್ಪು, ತರಕಾರಿ ಮತ್ತು ಕಾಳು ಪದಾರ್ಥಗಳ ತಯಾರಿಕ ಪದಾರ್ಥಗಳನ್ನು ಮಕ್ಕಳಿಗೆ ಪರಿಚಯಿಸುತ್ತಿರುವುದು ಸಮಾಜಕ್ಕೆ ಮಾದರಿ ಎಂದು ಹೇಳಿದರು.
ವಿದ್ಯಾಸಂಸ್ಥೆ ಶಿಕ್ಷಕರಾದ ಪುಷ್ಪಾ, ಉಮಾದೇವಿ, ಸುಷ್ಮಾ, ಪಾಲಕರಾದ ಚೈತ್ರ, ಯಶಸ್ವಿನಿ, ಅಬ್ರಿನಾ, ಬೆಳಗೆರೆ ಸುರೇಶ್, ಅನಿತಾ, ಸವಿತಾ, ಗೌರಮ್ಮ, ಲಕ್ಷ್ಮಿ, ಸುನೀತಾ, ಲಲಿತಮ್ಮ.ಲಾವಣ್ಯ, ಸೌಮ್ಯ, ಮಮತಾ ಇತರರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading