ನಾಯಕನಹಟ್ಟಿ: ಎನ್ ದೇವರಹಳ್ಳಿ ಗ್ರಾಮದಲ್ಲಿ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ
ಕಾರ್ಯಕ್ರಮ ನಡೆಯಿತು.
ನಾಯಕನಹಟ್ಟಿ: ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಇರುವ ಉತ್ತಮ ವೇದಿಕೆ ಎಂದು. ಸಿ.ಆರ್. ಪಿ.
ಸಿ ಹನುಮಂತಪ್ಪ ಹೇಳಿದರು


ಮಂಗಳವಾರ ಎನ್ ಮಹದೇವಪುರ ಭಾಗದ ಕ್ಲಸ್ಟರ್‌ಮಟ್ಟದ ವ್ಯಾಪ್ತಿಯ ಎನ್ ದೇವರಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಚಳ್ಳಕೆರೆ ಎನ್ ಮಹದೇವಪುರ ಕ್ಲಸ್ಟರ್ ಮಟ್ಟದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇರುತ್ತದೆ.
ಅದನ್ನುಗುರುತಿಸುವ ಕಾರ್ಯವನ್ನು ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು ಮಾಡಬೇಕಾಗಿದೆ. ಮಕ್ಕಳನ್ನು
ಸಾಹಿತ್ಯ
ಸೇರಿದಂತೆ ಇತರೆ
ಚಟುವಟಿಕೆಗಳಲ್ಲಿ ತೊಡಗಿಸಬೇಕು.
ಜೊತೆಗೆ ಮಕ್ಕಳು ಮೊಬೈಲ್ ನಿಂದ ದೂರ ಇರುವಂತೆ ಜಾಗ್ರತೆ ವಹಿಸಬೇಕೆಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶಿಲ್ಪ,
ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಡಿಎಸ್ ಪಾಲಯ್ಯ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಅಶೋಕ್ ಕುಮಾರ್, ಇಂದಿರಾಗಾಂಧಿ ವಸತಿ ಶಾಲೆಯ ಮುಖ್ಯೋಪಾಧ್ಯರಾದ ಶಿವರಾಜ್,ಎನ್ ದೇವರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಹುರಿಗಡ್ಲಿ, ಏನ್ ಮಹದೇವಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ ಎಂ ತಿಪ್ಪೇಸ್ವಾಮಿ, ಗಜ್ಜುಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ, ಪ್ರಾರ್ಥನೆ ಕುಮಾರಪ್ಪ ನಿರೂಪಣೆ ಮಂಜುನಾಥ್, ಸೇರಿದಂತೆ ಎನ್ ಮಹದೇವಪುರ ವಲಯದ ಎಲ್ಲಾ ಶಾಲೆಯ ಶಿಕ್ಷಕರು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.