
ಹೊಳಲ್ಕೆರೆ ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ಮರಳು ಮಾಫಿಯಾ. ಹೊಳಲ್ಕೆರೆ ಪಟ್ಟಣದ ಗಣಪತಿ ದೇವಾಲಯದ ಚೀರನಹಳ್ಳಿಗೆ ಹೋಗುವ ರಸ್ತೆಯ ಹೀರೆಕೆರೆಯ ಪಕ್ಕದಲ್ಲಿ 5 ಎಕರೆ ಹಿಂದೂ ರುದ್ರಭೂಮಿ, 5 ಎಕರೆ 20 ಗುಂಟೆ ವೀರಶೈವ ರುದ್ರಭೂಮಿ ಇದ್ದು ಈ ಸಮಾಜದ ಧೈವಾಧೀನರಾದ ಪಾರ್ಥಿವ ಶರೀರಗಳನ್ನು ಈ ರುದ್ರಭೂಮಿಯಲ್ಲೇ ಅಂತ್ಯ ಸಂಸ್ಕಾರ ಮಾಡಲಾಗುವುದು ಈ ಸ್ಮಶಾನದಲ್ಲಿ ಮರಳು ದಂಧೆ ಮಾಡುವವರು ಜೆ ಸಿ ಬಿ ಮೂಲಕ ಶವ ಸಂಸ್ಕಾರ ಮಾಡಿದ ಹೆಣಗಳನ್ನು ಹೊರ ತೆಗೆದು ಮರಳು ತುಂಬಿರುತ್ತಾರೆ ಇತ್ತೀಚಿಗೆ ಶವ ಸಂಸ್ಕಾರ ಮಾಡಿದ ಹೆಣಗಳನ್ನು ತೆಗೆದು ತಲೆಬುರುಡೆ, ವಿಭೂತಿ,ಬಟ್ಟೆಗಳು ಸ್ಥಳದಲ್ಲಿ ಇರುತ್ತವೆ ರಾತ್ರಿ ಸಮಯದಲ್ಲಿ ಜೆ ಸಿ ಬಿ ಇಟ್ಟು ಟ್ರ್ಯಾಕ್ಟರ್ ಮೂಲಕ ಮರಳು ಏರಿರುತ್ತಾರೆ ಹೀಗೆ ಮುಂದುವರಿದರೆ ಹೆಣ ಹೂಣಲು ಜಾಗ ಇರುವುದಿಲ್ಲ ವೀರಶೈವ ರುದ್ರಭೂಮಿಯಲ್ಲಿ ಮರಳು ತುಂಬಿದವರ ವಿರುದ್ಧ ಪಟ್ಟಣ ಶಾಖೆಯ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಕಂದಾಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಿ ಇದಕ್ಕೆಲ್ಲಾ ಕಡಿವಾಣ ಹಾಕಿ ಅವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ರೈತ ಬಾಂಧವರು ಆಗ್ರಹಿಸಿರುತ್ತಾರೆ. ಪಟ್ಟಣ ಶಾಖೆಯ ಅಧ್ಯಕ್ಷ -ಎಸ್.ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ- ಕೆ.ಎನ್.ಅಜಯ್, ಖಜಾಂಚಿ ಎಸ್.ಶಿವಮೂರ್ತಿ,ಉಪಾಧ್ಯಕ್ಷ ಹಂಚಿನ ಮನೆ ಲೋಕಣ್ಣ,ದುಕ್ಕಡ್ಲೆ ನಾಗರಾಜ್,ಸಣ್ಣಕ್ಕಿ ಪ್ರಭಾಕರ್,ರವಿಕುಮಾರ್, ಕಾಲ್ಕೆರೆರ ಕುಬೇಂದ್ರಪ್ಪ ಇದ್ದರು.



About The Author
Discover more from JANADHWANI NEWS
Subscribe to get the latest posts sent to your email.