
ವರದಿ: ಕೆ.ಟಿ.ಓಬಳೇಶ್.
ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ಬರದ ನಾಡು ಎಂಬ ಅಣೆಪಟ್ಟಿಕೊಂಡಿರುವ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶಾಸಕ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಎಸ್ ಸಿ ವಿಭಾಗ ಹಿರೇಹಳ್ಳಿ ಟೀ ಮಲ್ಲೇಶ್ ಹೇಳಿದ್ದಾರೆ .
ಅವರು ಸೋಮವಾರ ಪಟ್ಟಣದ ಒಳಮಠದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮತದಾರರ ಋಣ ತೀರಿಸಲು ನಮ್ಮ ಶಾಸಕರು ಬದ್ಧರಾಗಿದ್ದಾರೆ
ಇಲ್ಲಿನ ಬಡ ರೈತರು ಅನುಭವಿಸುತ್ತಿರುವ ರೈತರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ರೈತರ ಕಣ್ಣೀರು ಒರೆಸುವ ಏಕೈಕ ಶಾಸಕರೆಂದರೆ ಎನ್ ವೈ ಗೋಪಾಲಕೃಷ್ಣ ರವರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಸೆವೆನ್ ಸ್ಟಾರ್ ಎಂದೆ ಖ್ಯಾತಿ ಪಡೆದಿರುವ ಶಾಸಕ ಎನ್ ವೈ ಗೋಪಾಲಕೃಷ್ಣ ರವರಿಗೆ ಬಹುದಿನದ ಕನಸು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ರೈತರು ಇರುವುದರಿಂದ ರೈತರಿಗೆ ನೀರಾವರಿಗೆ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಎಲ್ಲಾ ಕೆರೆಗಳಿಗೆ ನೀರು ಹರಿಸುವಂತ ಮುಖ್ಯ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ.
ರಾಜ್ಯ ಸರ್ಕಾರ ಮುಂಬರುವ ಸಚಿವ ಸಂಪುಟ ಸಂದರ್ಭದಲ್ಲಿ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ನಮ್ಮ ನೆಚ್ಚಿನ ಜನಪ್ರಿಯ ಶಾಸಕ ಗೋಪಾಲಕೃಷ್ಣ ರವರಿಗೆ ಸಚಿವ ಸ್ಥಾನ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಮನವಿಯನ್ನು ಮಾಡುತ್ತೇನೆ ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಎಸ್ ಸಿ ವಿಭಾಗ ಹಿರೇಹಳ್ಳಿ ಟಿ. ಮಲ್ಲೇಶ್ ತಿಳಿಸಿದರು.

About The Author
Discover more from JANADHWANI NEWS
Subscribe to get the latest posts sent to your email.