
ವರದಿ- ಎಂ.ಶಿವಮೂರ್ತಿ.
ನಾಯಕನಹಟ್ಟಿ : ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಸುಮಾರು ಆರು ಏಳು ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರು, ರೈತ ಮುಖಂಡರು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಏನ್ ಜಿ ಮಮತಾರ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಮುತ್ತುಗಾರಹಳ್ಳಿ, ಚೌಳಕೆರೆ, ಅಬ್ಬೇನಹಳ್ಳಿ, ಮುಸ್ಟಲಗುಮ್ಮಿ ಗ್ರಾಮದ ಮನೆಗಳಲ್ಲಿ ಇರುವಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ, ವಿದ್ಯಾಭ್ಯಾಸ ಮಾಡುವಂತಹ ವಿದ್ಯಾರ್ಥಿಗಳಿಗೂ,ವಯೋವೃದ್ದರಿಗೆ ದಿನನಿತ್ಯ ದೈನಂದಿನ ಯಾವುದೇ ಕೆಲಸಗಳಿಗೂ ಅಡ್ಡಿ ಉಂಟಾಗ್ತಾ ಇದ್ದು, ಕೆಲವು ವಿಷ ಜಂತುಗಳಿಂದ, ಕಾಡು ಪ್ರಾಣಿಗಳಿಂದ ಅನಾಹುತಕ್ಕೆ ಕಾರಣ ಆಗ್ತಾ ಇದೆ. ಈ ಕಾರಣಕ್ಕಾಗಿ ಈ ವ್ಯಾಪ್ತಿಯಲ್ಲಿ ಇರುವಂತ ರೈತ ಮುಖಂಡರು ಹಾಗೂ ಎಲ್ಲಾ ರೈತರು ದಿನಾಂಕ: 02.12.2024 ರಂದು ತಳಕು ಬೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಳಕು ಎನ್. ಜಿ .ಮಮತಾ ರವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕಾಗಿ ಕೋರಿದರು . ಸಮಸ್ಯೆ ಪರಿಹಾರವಾಗದ ಪಕ್ಷದಲ್ಲಿ ತಾಲೂಕಿನಾದ್ಯಂತ ರೈತ ಸಂಘಗಳ ಬೆಂಬಲದೊಂದಿಗೆ ಉಗ್ರ ಹೋರಾಟ ಮಾಡಲು ನಿಶ್ಚಯಿಸಿರುವುದಾಗಿ ರೈತ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಬಸವರಾಜ್ಗಂ,ಗಾಧರಪ್ಪ,ಓಬಯ್ಯ, ನಾಗರಾಜ್, ಮಹೇಶ್ ಕುಮಾರ್, ಸಿ.ಪಿ. ಬಸವರಾಜ್, ಮಂಜುನಾಥ್ಶಿ,ವಮೂರ್ತಿ,ಗೋವಿಂದಪ್ಪ, ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.