
ಹೊಸದುರ್ಗ : ಕನ್ನಡವನ್ನ ಬರೀ ಹೊಗಳಿಕೆಗೆ ಸೀಮಿತಗೊಳಿಸದೇ ಅದನ್ನ ಹುಸಿರಾಗಿಸಿಕೊಂಡಾಗ ಕನ್ನಡವನ್ನ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ನಾವು ನವಂಬರ್ ತಿಂಗಳ ಕನ್ನಡಿಗರಾಗದೆ ಬದುಕಿನ ಉಸಿರಿರುವವರೆಗೂ ಕನ್ನಡಿಗರಾದಾಗ ಮಾತ್ರ ಈ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಸಮಾಜ ಸೇವಕ ಆಗ್ರೋ ಹೆಚ್,ಶಿವಣ್ಣ ತಿಳಿಸಿದರು
ಡಾಕ್ಟರ್ ರಾಜ್‌ಕುಮಾರ್ ಮತ್ತು ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಶೂಭಾಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು ಮಾತೃಭೂಮಿ ಮತ್ತು ತಾಯಿ ಸ್ವರ್ಗಕ್ಕಿಂತ ಮಿಗಿಲಾದವರು ಈ ಇಬ್ಬರನ್ನ ಆರಾಧಿಸುವ ಮಕ್ಕಳು ಬದುಕಿನಲ್ಲಿ ಯಶಸ್ಸು ಕಾಣುವರು. ಕನ್ನಡತನಕ್ಕೆ ಅದಕ್ಕೆ ಬಂದಾಗ ಕನ್ನಡಿಗರಾದ ನಾವೆಲ್ಲರೂ ಸೆಟೆದು ನಿಂತಾಗ ಕನ್ನಡವನ್ನು ಉಳಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ನಗರದ ವೀರಭದ್ರ ಸ್ವಾಮಿ ದೇವಸ್ಥಾನದಿಂದ ತಾಯಿ ಭುವನೇಶ್ವರಿಯ ಮೆರವಣಿಗೆ ಕನ್ನಡ ಅಭಿಮಾನಿಗಳ ಕನ್ನಡ ಗೀತೆಗಳು, ಕೀಲು ಕುಣಿತ ಸ್ತಬ್ಧ ಚಿತ್ರಗಳೊಂದಿಗೆ ಭುವನೇಶ್ವರಿ ವೃತ್ತ ಮದಕರಿ ವೃತ್ತ ಬಸವೇಶ್ವರ ವೃತ್ತ ಗಾಂಧಿ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಧ್ವಜವನ್ನು ಆರಿಸಲಾಯಿತು
ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜ್ ಪುನೀತ್ ರಾಜ್ ಕುಮಾರ್, ಅಭಿಮಾನಿಗಳ ಸಂಘದ ಅಧ್ಯಕ್ಷ ಗೌಡ್ರ ತಿಪ್ಪೇಸ್ವಾಮಿ, ಕಾರ್ಯದರ್ಶಿ ಶಹಜನ್ ಸೇರಿದಂತೆ ಅಪಾರ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.