
ಹೊಸದುರ್ಗ ಡಿ.2: ತಾಲ್ಲೂಕಿನಾದ್ಯಂತ ಕೃಷಿ, ಸಂಗೀತ, ಸಾಹಿತ್ಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪರಿಣತಿ ಹೊಂದಿರುವವರಿದ್ದಾರೆ. ಆದರೆ ಅವರನ್ನು ಗುರುತಿಸಿ ಗೌರವಿಸುವಲ್ಲಿ ವಿಫಲರಾಗುತ್ತಿದ್ದೇವೆ. ಈ ಕಾರ್ಯವನ್ನ ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು ಆದರೆ ಇಂತಹ ಕೆಲಸ ನಡೆಯುತ್ತಿಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್ ಬಿಲ್ಲಪ್ಪ ವಿಷಾದ ವ್ಯಕ್ತಪಡಿಸಿದರು.
ಕಸಾಪ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಗು ಜನ್ಮ ತಾಳಿದ್ದಾಗಲೆ ಈ ದೇಶದ ಪ್ರಜೆಯಾಗುತ್ತದೆ. ಇಂದಿನ ಮಕ್ಕಳೇ ರಾಷ್ಟ್ರದ ಭವಿಷ್ಯಗಳು. ದೇಶದ ಬಗ್ಗೆ ಪ್ರತಿಯೊಬ್ಬರು ಗೌರವ ಹೊಂದಿರಬೇಕು. ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು. ಆತನ ಭವಿಷ್ಯ, ಸುಖ, ದುಃಖ ಎಲ್ಲವನ್ನೂ ನೀಡುವುದು ತಾಯ್ನಾಡು ಎಂದು ತಿಳಿಸಿದ ಅವರು ವ್ಯಕ್ತಿಯನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕಿದೆ. ಅದೇ ಶಿಕ್ಷಣ ಈ ಜಗತ್ತನ್ನೇ ಬದಲಾಯಿಸುತ್ತದೆ. ಅಂತಹ ಶಕ್ತಿ ಹೊಂದಿರುವ ಶಿಕ್ಷಣ ಅತಿ ಶ್ರೇಷ್ಠವಾದದ್ದು. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಪಿ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕ.ಸಾ.ಪ ಉಪಾಧ್ಯಕ್ಷ ಡಿ.ಟಿ. ಚಂದ್ರಶೇಖರ್, ಕಾರ್ಯದರ್ಶಿ ಸುಮತಿ ಕುಮಾರ್, ಚಿಕ್ಕಮುದ್ದು, ನಿಕಟ ಪೂರ್ವ ಅಧ್ಯಕ್ಷ ಧನಂಜಯಮೆAಗಸAದ್ರ, ಮಾಜಿ ಅಧ್ಯಕ್ಷ ಬಾ.ಮೈಲಾರಪ್ಪ, ಮಾಜಿ ಕಾರ್ಯದರ್ಶಿ ನಾಗತಿಹಳ್ಳಿಮಂಜುನಾಥ್, ಮತ್ತೋಡು ಹೋಬಳಿ ಅಧ್ಯಕ್ಷ ರಮೇಶ್, ಜನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
ತುಂಬಿನಕೆರೆ ಬಸವರಾಜ್,ಸಮಾಜ ಸೇವಕ ಆಗ್ರೋ ಶಿವಣ್ಣ, ಸುಹಾನ ಬ್ಯಾಂಕ್ ಅಧ್ಯಕ್ಷ ಬಿ.ಅಶ್ರುಫ್‌ವುಲ್ಲಾ, ಕ.ಸಾ,ಪ ಮತ್ತೋಡು ಘಟಕದ ಅಧ್ಯಕ್ಷ ರಮೇಶ್, ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.