ತಳಕು:: ಹುಟ್ಟಿನಿಂದ ಯಾರೂ ಶ್ರೇಷ್ಟರಾಗುವುದಿಲ್ಲ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಎಂತಹ ವ್ಯಕ್ತಿಯು ಕೂಡ ಶ್ರೇಷ್ಠನಾಗಬಹುದು ಎಂದು ನಿವೃತ್ತ ಕೆ ಎ ಎಸ್ ಅಧಿಕಾರಿ ಎನ್ ರಘುಮೂರ್ತಿ ಎಂದು ಹೇಳಿದರು









ಅವರು ಭಾನುವಾರ ತಳಕು ಗ್ರಾಮದಲ್ಲಿ ವಾಲ್ಮೀಕಿ ಯುವಕರ ಬಳಗ ಹಾಗೂ ನಾಯಕ ಸಮುದಾಯದ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿಯ ಮೆರವಣಿಗೆಯನ್ನು ಚಾಲನೆ ಕೊಟ್ಟು ಮಾತನಾಡಿ ತಾರಾಸು ಅವರ ಹುಟ್ಟಿದಂತ ನಾಡಿನಲ್ಲಿ ಇಂತಹ ಸಮಾರಂಭ ಮಾಡುತ್ತಿರುವುದು ಶ್ರೇಷ್ಠ ವಿನಿಸುತ್ತದೆ ವಿಶ್ವ ಕಂಡಂತಹ ಅದ್ಭುತ ವ್ಯಕ್ತಿಗಳು ಶ್ರೀ ಕೃಷ್ಣ ವಾಲ್ಮೀಕಿ ಮತ್ತು ಅಂಬೇಡ್ಕರ್ ಇವರು ಸಾಮಾಜಿಕವಾಗಿ ಹಿಂದುಳಿದಂತಹ ವರ್ಗಗಳಲ್ಲಿ ಹುಟ್ಟಿದರು ಕೂಡ ತಮ್ಮ ವೈಚಾರಿಕತೆ ನಡವಳಿಕೆ ಮತ್ತು ಪರಿಶ್ರಮದಿಂದ ಇಡೀ ವಿಶ್ವಕ್ಕೆ ಬೆಳಗಕಾ ದವರು ಹುಟ್ಟು ಆಕಸ್ಮಿಕ ಆದರೆ ಬದುಕು ನಮ್ಮ ಕೈಲಿರುತ್ತದೆ
ಮಹರ್ಷಿ ವಾಲ್ಮೀಕಿ ಯು ಒಬ್ಬ ಬೇಟೆಗಾರನಾಗಿದ್ದರೂ ಕೂಡ ಪರಿವರ್ತನೆಯ ದಾರಿ ಹಿಡಿದು ಇಡೀ ವಿಶ್ವವಿರುವುದು ಅಂತಹ ಶ್ರೀ ರಾಮಾಯಣವನ್ನು ರಚಿಸಿದರು ಶ್ರೀ ರಾಮನ ಆದರ್ಶ ಹನುಮಂತನ ಭಕ್ತಿ ಮತ್ತು ಸೀತೆಯ ಪಾ ತಿರ್ವತೆ ಇಡೀ ವಿಶ್ವಕ್ಕೆ ಅನುಕರಣೆಯ ಪಾಶ್ಚತ್ಯ ರಾಷ್ಟ್ರಗಳು ತಮ್ಮ ವೈಜ್ಞಾನಿಕತೆ ಮತ್ತು ನೈಪುಣ್ಯವನ್ನು ಮೀರಿ ಭಾರತೀಯ ಸನಾತನ ಸಂಸ್ಕೃತಿ ಮತ್ತು ಧರ್ಮವನ್ನು ಅನುಕರಣೇ ಮಾಡುತ್ತಿವೆ ಇದರ ಬಹುದೊಡ್ಡ ಕೊಡುಗೆ ನಮ್ಮ ಹಿಂದೂ ಧರ್ಮದ ನೆಲೆಗಟ್ಟಿನ ಶ್ರೀ ರಾಮಾಯಣ ಮಹಾಕಾವ್ಯ ಮತ್ತು ಭಗವದ್ಗೀತೆ ವಿಶ್ವದ ಬಹುತೇಕ ರಾಷ್ಟ್ರಗಳು ಶ್ರೀ ರಾಮಾಯಣ ಮತ್ತು ಭಗವದ್ಗೀತೆಯನ್ನು ಅನುಕರಣೆ ಮಾಡುತ್ತವೆ ಇಂತಹ ಮಹಾಕಾವ್ಯಗಳ ಸೊಗಡು ಈ ಭಾಗದ ಪ್ರತಿ ಮನೆಯಲ್ಲೂ ಪಸರಿಸಬೇಕು ಅಂದರೆ ಭಕ್ತಿ ಭಾತೃತ್ವ ಮತ್ತು ಆದರ್ಶದ ನಡೆ ನುಡಿಗಳು ಪ್ರತಿಯೊಬ್ಬರ ಮನೆ ಮತ್ತು ಮನಗಳನ್ನು ತುಂಬಬೇಕು ಮಹರ್ಷಿ ವಾಲ್ಮೀಕಿ ವಾಲ್ಮೀಕಿ ಜನಾಂಗದವರು ಎಂದು ಹೇಳಿಕೊಳ್ಳುವ ಮಾತ್ರಕ್ಕೆ ಜನಾಂಗ ಆದರ್ಶವಾಗುವುದಿಲ್ಲ ಆದರೂ ಈ ಭಾಗದಲ್ಲಿ ಶಾಂತಿ ಭಾತೃತ್ವ ಮತ್ತು ಸ್ವಾಭಿಮಾನ ಮನೆ ಮಾಡಿದೆ ಇನ್ನು ಹೆಚ್ಚು ಹೆಚ್ಚು ಈ ಭಾಗದ ಯುವಕರು ಸ್ವಾವಲಂಬಿಗಳಾಗಬೇಕು ಪ್ರತಿಯೊಂದು ಕುಟುಂಬದಲ್ಲೂ ಕೂಡ ವೈಜ್ಞಾನಿಕವಾದ ಮತ್ತು ಸುಸಂ ಕೃತವಾದಂತ ದಿಕ್ಕಿನಲ್ಲಿ ಮಕ್ಕಳು ಮತ್ತು ಯುವಕರು ಸಾಗಬೇಕು ಎಂದು ಆಶಿಸಿದರು
ಸಮಾರಂಭದಲ್ಲಿ ಯುವಕರದ ಪಾಲಯ್ಯ ಮಹಾಂತೇಶ್ ಗ್ರಾಮ ಪಂಚಾಯಿತಿಯ ಎಲ್ಲಾ ಮಾಜಿ ಸದಸ್ಯರು ಮಾಜಿ ಅಧ್ಯಕ್ಷರು ಮತ್ತು ಯುವಕರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.