
ನಾಯಕನಹಟ್ಟಿ : ನ. 02 ಪಟ್ಟಣದಲ್ಲಿ ರಸ್ತೆ ಗುಂಡಿಗಳನ್ನು ಕಂಡು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವವಾಗಿದೆ ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಟಿ. ವೀರಭದ್ರಪ್ಪ ಗಂಭೀರ ಆರೋಪ ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸುಮಾರು 25 ದಿನಗಳ ಹಿಂದೆ ಮಳೆಸುರಿದು ರಸ್ತೆಗಳಲ್ಲಿ ಗುಂಡಿ ಬಿದ್ದು ಹಾಳಾಗಿವೆ. ಲೋಕೋಪಯೋಗಿ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಮತ್ತು ಕ್ಷೇತ್ರದ ಶಾಸಕರು ಕೂಡ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಶ್ರೀ ಗುರು ತಿಪ್ಪೇರುದ್ರಸ್ವಾಮಿಗಳ ಪುಣ್ಯಕ್ಷೇತ್ರ ವಾಗಿರುವುದರಿಂದ ಸಾವಿರಾರು ಭಕ್ತರು ಈ ರಸ್ತೆಯ ಮೂಲಕ ಬಂದು ದೇವರ ದರ್ಶನ ಪಡೆಯುತ್ತಾರೆ. ಈ ರಸ್ತೆಯಲ್ಲಿ ಚಿಕ್ಕ ಮಕ್ಕಳು ವಯೋ ವೃದ್ಧರು ಕೂಲಿ ಕಾರ್ಮಿಕರು ವಿದ್ಯಾರ್ಥಿಗಳು ಸಂಚಾರ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕೇವಲ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಇನ್ನೂ ಪಟ್ಟಣದಲ್ಲಿ ಪಾದಗಟ್ಟೆ ಹತ್ತಿರ ಅಂಗಡಿ ಮುಂಗಟ್ಟುಗಳನ್ನು ತೆರಗೊಳಿಸಿರುವುದು ತರವಲ್ಲ. ಏಕೆಂದರೆ ಸಾಲ ಸೂಲ ಮಾಡಿ ಅಂಗಡಿ, ಹೋಟೆಲ್, ಶೆಡ್ಡುಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆದರೆ ತೆರವುಗೊಳಿಸಿರುವುದರಿಂದ ಅವರ ಬದುಕು ಬೀದಿಗೆ ಬಂದಿದೆ. ಯಾರು ಇದಕ್ಕೆ ಹೊಣೆ ? ತೆಗೆದುಕೊಂಡ ಸಾಲವನ್ನು ಕಟ್ಟುವುದು ಹೇಗೆ ? ಅವಶ್ಯಕತೆ ಇರುವಷ್ಟು ತೆರವುಗೊಳಿಸಬಹುದಿತ್ತು. ಆದರೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಿ, ಕಾಲುವೆ ತೋಡಿಬಿಟ್ಟಿದ್ದಾರೆ. ಸರಿಯಾದ ರೀತಿಯಲ್ಲಿ ಕಾಮಗಾರಿ ಪೂರ್ಣ ಮಾಡಿಕೊಂಡು ಮುಚ್ಚಬಹುದಿತ್ತು. ಆದರೆ ಏನು ಮಾಡದೆ ತೆರಗೊಳಿಸಿರುವುದರಿಂದ ಅಂಗಡಿ ಹಾಗೂ ಹೋಟೆಲ್ ಮಾಲೀಕರಿಗೆ ಸೂಕ್ತ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.




ಈ ಸಂದರ್ಭದಲ್ಲಿ ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಶಿವಣ್ಣ, ಮೊಳಕಾಲ್ಮೂರು ತಾಲೂಕು ಜೆಡಿಎಸ್ ಅಧ್ಯಕ್ಷ ಡಿ ಬಿ ಕರಿಬಸಪ್ಪ ಚೌಳಕೆರೆ, ನಾಯಕನಹಟ್ಟಿ ಜೆಡಿಎಸ್ ಹೋಬಳಿ ಅಧ್ಯಕ್ಷ ಸೆಳ್ಳೆ ಗೌಡ, ಬಲ್ಲನಾಯಕನಹಳ್ಳಿ ಚಿನ್ನಮಲ್ಲಯ್ಯ, ಮಲ್ಲೂರಹಳ್ಳಿ ತಿಪ್ಪಯ್ಯ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.