ಚಳ್ಳಕೆರೆ ನ.2ವಾಲ್ಮೀಕಿ ಮಹರ್ಷಿಗಳು ರಚಿಸಸಿದಂತ ಶ್ರೀ ರಾಮಾಯಣ ಮಹಾ ಕಾವ್ಯದ ಮೌಲ್ಯಗಳು ಸರ್ವಕಾಲಕ್ಕೂ ಶ್ರೇಷ್ಠ ಎಂದು ನಿವೃತ್ತ ಕೆ ಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು
ಅವರು ತಳಕು ಹೋಬಳಿಯ ಭೋಗನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಪುತ್ತಳಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಸಹ ಬಾಳ್ವೆಗೆ ಸಾಮರಸ್ಯಕ್ಕೆ ಮತ್ತು ಭಾತೃತ್ವಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಶ್ರೀ ರಾಮಾಯಣ ಮಹಾಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿ ಅವರು ಪ್ರತಿಬಿಂಬಿಸಿದ್ದಾರೆ ಇವುಗಳನ್ನು ಪರಿಪೂರ್ಣವಾಗಿ ನಮ್ಮಗಳ ಬದುಕಿನಲ್ಲಿ ಅನುಷ್ಠಾನಗೊಳಿಸುವುದು ಮಾತ್ರ ನಮ್ಮಗಳ ಕರ್ತವ್ಯವಾಗಿದೆ ಸಹಸ್ರ ಶತಮಾನಗಳಿಂದಚೆಯು ಶ್ರೀ ರಾಮಾಯಣ ಮಹಾ ಕಾವ್ಯವನ್ನು ರಚಿಸಿದಂತಹ ವಾಲ್ಮೀಕಿ ಅವರು ನಮ್ಮೊಂದಿಗೆ ಜೀವಂತವಾಗಿರುತ್ತಾರೆ ಹಿಂದುಳಿದ ಪ್ರದೇಶವಾಗಿರುವ ಈ ಗಡಿ ಭಾಗದ ನಾಡಿನಲ್ಲಿ ಶೈಕ್ಷಣಿಕ ನೆಲೆಗಟ್ಟು ಇನ್ನು ಉತ್ಕೃಷ್ಟವಾಗಿ ಬೆಳೆಯುವ ಅಗತ್ಯವಿದೆ ಕುಟುಂಬದಲ್ಲಿನ ಪ್ರತಿ ಮಗುವಿಗೆ ಶ್ರೀ ರಾಮಾಯಣ ಮಹಾ ಕಾವ್ಯದ ತಿರುಳನ್ನು ಹೇಳಿ ಅತ್ಯುನ್ನತ ವಾದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕೆಂದು ಮನವಿ ಮಾಡಿದರು




ಸಮಾರಂಭದಲ್ಲಿ ಉಪಸ್ಥಿತರಿದಂತಹ ಇನ್ನೊಬ್ಬ ಅತಿಥಿಗಳಾದ ಪಟೇಲ್ ಜಿ ತಿಪ್ಪೇಸ್ವಾಮಿ ಮಾತನಾಡಿ ಬಡತನ ಇದ್ದರೂ ಈ ಭಾಗದ ಜನ ಧರ್ಮ ಮತ್ತು ಸತ್ಯನಿಷ್ಠರು ಧಾರ್ಮಿಕ ಪರಂಪರೆ ಉಳ್ಳವರು ವಾಲ್ಮೀಕಿ ಅವರ ಮತ್ತು ಶ್ರೀ ರಾಮಾಯಣದ ಆದರ್ಶಗಳನ್ನು ಪಾಲಿಸುತ್ತಿರುವವರು ಇನ್ನು ಹೆಚ್ಚಿನ ಉನ್ನತ ಮಟ್ಟದ ಜೀವನ ನಡೆಸಬೇಕೆಂದರೆ ಈ ಭಾಗದವರು ಇನ್ನೂ ಹೆಚ್ಚು ಹೆಚ್ಚು ಸ್ವಾವಲಂಬಿಗಳಾಗಬೇಕು ಈ ಗ್ರಾಮದಲ್ಲಿ ಎಲ್ಲಾ ಕೋವಿನ ಜನಾಂಗಗಳಿದ್ದು ಎಲ್ಲರೂ ಸೇರಿ ಈ ದಿನ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆಂಜನಪ್ಪ ರವಿ ಪಾಲಣ್ಣ ಗ್ರಾಮದ ಎಲ್ಲಾ ಪ್ರಮುಖರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.