ಚಳ್ಳಕೆರೆ ನ.2
ಕೆರೆ ಭರ್ತಿಯಾಗಿ ಕೋಡಿ ಬಿದ್ದಿರುವುದು ಸಂತಸ ತಂದಿದೆ ಎಂದು ಶಾಸಕ ಟಿ .ರಘುಮೂರ್ತಿ ಹೇಳಿದರು.
ನಗರದ ಹೊರವಲಯದ ಅಜ್ಜನ ಗುಡಿ ಸಮೀಪದ ಅಜ್ಜನಗುಡಿ ಕೆರೆ ತುಂಬಿಕೋಡಿ ಬಿದ್ದ ಕೆರೆಗೆ ಬಾಗಿನಅರ್ಪಿಸಿ ಮಾತಮಾಡಿದರು.
ಕೆರೆಗೆ ನೀರು ಬಂದರೂ ತುಂಬಿರಲಿಲ್ಲಿ ಈ ಬಾರಿ ಅಕಾಲಿಕ ಮಳೆಗೆ ಬಹುತೇಕ ಕೆರೆಗಳು ತುಂಬಿ ಅಂರ್ತಜಲ ಹೆಚ್ಚಳವಾಗಿ ಜನಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದಂತಾಗಿದೆ.
ಕೆರೆಗಳು ರೈತರ ಜೀವನಾಡಿಯಾಗಿರುವ ತುಂಬಿದ ಕೆರೆಗಳಿಗೆ ಬಾಗಿನ ಅರ್ಪಿಸಿದರೆ ಮುಂದಿನ ದಿನಮಾನಗಳಲ್ಲಿಯೂ ಕೆರೆಗಳು ನೀರಿನಿಂದ ತುಂಬಿರಲಿ ಎನ್ನುವ ನಂಬಿಕೆ ಇದೆ ಕೆರೆಗಳು
ತುಂಬಿರುವುದರಿಂದ ಸಂತಸವಾಗಿದೆ ಕೆರೆಗಳು ರಕ್ಷೆ ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಜೈತುನ್ ಬೀ, ಉಪಾಧ್ಯಕ್ಷೆ ಸುಜಾತ ಪ್ರಹ್ಲಾದ್, ಸದಸ್ಯರಾದ ಕವಿತಾ. ಸುಮಾ. ಮಲ್ಲಿಕಾರ್ಜುನ, ರಮೇಶ್ ಗೌಡ, ರಾಘವೇಂದ್ರ,ಬಡಗಿ ಪಾಪಣ್ಣ, ಅನ್ವರ್ ಮಾಸ್ಟರ್, ಸುರೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಶಶಿಧರ, ಮುಖಂಡರಾದ ಸಿ.ಟಿ.ಶ್ರೀನಿವಾಸ್, ಕೃಷ್ಣಮೂರ್ತಿ, ಬೋರಣ್ಣ ಇತರರಿದ್ದರು .










About The Author
Discover more from JANADHWANI NEWS
Subscribe to get the latest posts sent to your email.