ಚಳ್ಳಕೆರೆ ನ. 2
ಚಳ್ಳಕೆರೆ ತಾಲೂಕು
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಯಾರು?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚಳ್ಳಕೆರೆ ಶಾಖೆಯ 2024-29ರ ಚುನಾವಣೆಯ ಒಟ್ಟು 34 ನಿರ್ದೇಶಕರ ಆಯ್ಕೆಯಾಗಿದೆ ಆರುದಿನಗಳು ಕಳೆದಿವೆ.
ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಅ.30 ರಿಂದ ಪ್ರಾರಂಭವಾಗಿದ್ದು ನ.7 ಸಂಜೆ 5 ಗಂಟೆಗೆ ಕೊನೆಯಾಗಲಿದ್ದು. ನಾಮಪತ್ರ ಸಲ್ಲಿಸಲು ಐದು ದಿನಮಾತ್ರ ಬಾಕಿ ಇದ್ದು ಯಾರೂ ನಾಮಪತ್ರ ಸಲ್ಲಿಸಿಲ್ಲ ಅಧ್ಯಕ್ಷ ಸ್ಥಾನಕ್ಕೆ ಪ್ರೌಢಶಾಲಾ ಶಿಕ್ಷಕ ಸಿ.ಟಿ.ವೀರೇಶ್ ಸರಕಾರಿ ನೌಕರರ ಸಂಘಕ್ಕೆ ಮೂರನೇ ಬಾರಿಗೆ ಆಯ್ಕೆದರೆ.ಆರೋಗ್ಯ ಇಲಾಖೆಯ ಜೆ.ಸಿ.ತಿಪ್ಪೇಸ್ವಾಮಿ ನಾಲ್ಕನೇ ಬಾರಿಗೆ. ಕಂದಾಯ ಇಲಾಖೆಯ ಲಿಂಗೇಗೌಡ ಎರಡನೇ ಬಾರಿ. ಪ್ರೌಢಶಾಲಾ ಶಿಕ್ಷಕ ಅಶೋಕ್ ಕುಮಾರ್ ಮೊದಲ ಬಾರಿಗೆ ಆಯ್ಕೆಯಾಗಿದ್ದು ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಜನರು ಪೈಪೋಟಿ ನಡೆಸುತ್ತಾರೆ ಎನ್ನಲಾಗಿದೆ. ನಾಲ್ಕ ಜನರು ಆಕಾಂಕ್ಷಿಗಳಿದ್ದು 34 ನಿರ್ದೇಶಕರ ಮನೆ ಬಾಗಿಲಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಗುಪ್ತವಾಗಿ ಬೆಂಬಲಿಸುವಂತೆ ಮತಯಾಚನೆಗೆ ಮುಂದಾಗಿದ್ದಾರೆ .
ಅಧ್ಯಕ್ಷ ಆಕ್ಷಾಂಕ್ಷಿಗಳ ಗುಪ್ತ ಸಭೆಗಳನ್ನು ಯಾರನ್ನು ಆಯ್ಕೆ ಮಾಡಬೇಕು ಎಂದು ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಾಲ್ಕು ಜನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಶಾಸಕ ಟಿ.ರಘುಮೂರ್ತಿಯವರನ್ನು ಭೇಟಿಯಾಗಿ ನಿರ್ದೇಕ ಸ್ಥಾನಕ್ಕೆ ಗೆದ್ದಿರುವ ಬಗ್ಗೆ ಸನ್ಮನಾನಿಸಿದ್ದಾರೆ.
ಈ ನಾಲ್ಕು ಜನರಲ್ಲಿ ಯಾರು ಅದೃಷ್ಟಶಾಲಿಗಳೆಂದು ತಿಳಿಯಲು ಯಾರು ನಾಮತ್ರಸಲ್ಲಿಸುತ್ತಾರೆ .ಹಿಂಪಡೆಯುತ್ತಾರೆ .ಕಣದಲ್ಲಿರುತ್ತಾರೆ ಚುನಾವಣೆ ಅಥವಾ ಅವಿರೋದವಾಗಿ ಆಯ್ಕೆಯಾಗುತ್ತಾರಾ ಎಂಬುದು ನ.11 ನಾಮಪತ್ರ ಹಿಂಪಡೆದು ಪರಿಶೀಲನೆ ಸಂಜೆ 5 ಗಂಟೆಗೆ ಅಂತಿಮ ತಿಳಿಯಲಿದೆ.





ರಾಜ್ಯ ಸರ್ಕಾರಿ ನೌಕರರ ತಾಲೂಕು ಶಾಖೆಗೆ 2025–29 ನೇ ಸಾಲಿನ ಅವಧಿಯಗೆ ನ.16 ರಂದು ಬೆಳಗ್ಗೆ9 ರಿಂದ ಸಂಜೆ4 ಗಂಟೆಗೆ ನಡೆಯಲಿದ್ದು ಚುನಾವಣೆ ನಂತರ ಚುನಾವಣೆ ಫಲಿತಾಂಶ ಹೊರ ಬೀಳಲಿದೆ.

About The Author
Discover more from JANADHWANI NEWS
Subscribe to get the latest posts sent to your email.