ನಾಯಕನಹಟ್ಟಿ : ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿರುವ ದೊರೆಗಳ ಮಟ್ಟಿ ಹತ್ತಿರ ದಸರಾ ಹಬ್ಬದ ಪ್ರಯುಕ್ತ ಪುರುಷರ ಮತ್ತು ಮಹಿಳೆಯರ ಬಯಲು ಜಂಗಿಕುಸ್ತಿ ಪಂದ್ಯಾವಳಿಗಳಿಗೆ ಡಾ.ಬಿ.ಯೋಗೇಶ್‌ಬಾಬು, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಚಾಲನೆ ನೀಡಿದರು.

ನಂತರ ದ್ರಾಕ್ಷಿ ರಸ ನಿಗಮ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್‌ಬಾಬು ಮಾತನಾಡಿ ವಾಲ್ಮೀಕಿ ವೃತ್ತ ಮತ್ತು ಜಂಗಿ ಕುಸ್ತಿಗೆ 2 ಲಕ್ಷ ರೂಪಾಯಿ ಧನಸಹಾಯ ಮಾಡಿದ್ದೇನೆ. ಹಟ್ಟಿ ಮಲ್ಲಪ್ಪ ನಾಯಕ ಎನ್ನುವುದರ ಬದಲು ರಾಜಹಟ್ಟಿ ಮಲ್ಲಪ್ಪನಾಯಕ ಎಂದು ಕರೆಯಬೇಕು. ಈ ಹಿಂದೆ ದೊರೆಗಳ ಸಮಾಧಿಗೆ ಪೂಜಿಸಿ ದೊರೆಗಳಹಟ್ಟಿಯಲ್ಲಿನ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿದ್ದೆವು. ಈ ದಿನ ಇಷ್ಟು ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರೆ ಈ ಮಣ್ಣಿನ ಶಕ್ತಿ. ರಾಜಾಹಟ್ಟಿ ಮಲ್ಲಪ್ಪನಾಯಕ ಸಾಮಾಧಿಯ ಸ್ಥಳವನ್ನು ಯಾರಾರೂ ಅಕ್ರಮಣ ಮಾಡಿಕೊಂಡಿದ್ದಾರೆ ಅವರಿಂದ ಮುಕ್ತಿ ಕೊಡಿಸುವಂತಹ ಕೆಲಸ ಆಗಬೇಕು, ಮುಕ್ತಿಕೊಡಿಸುವ ಕೆಲಸಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಜೊತೆಗೆ ಹೋರಾಟವನ್ನು ಮಾಡಬೇಕು. ತಾಯಿ ಚಾಮುಂಡೇಶ್ವರಿಯವರ ನಾಡಹಬ್ಬ ದಸರಾ ಅದ್ಧೂರಿಯಾಗಿ ಪ್ರಾರಂಭವಾಗುತ್ತಿದೆ. ಈದಿನ ಅಧರ್ಮ ಹೋಗಿ ಧರ್ಮ ಉಳಿಯಬೇಕು. ಶ್ರೀಗುರು ತಿಪ್ಪೇರುದ್ರಸ್ವಾಮಿಗಳ ಆರ್ಶೀವಾದದೊಂದಿಗೆ ರಾಜಾಹಟ್ಟಿ ಮಲ್ಲಪ್ಪನಾಯಕರು ಹೋಗಿ ತಮ್ಮ ಕಿರೀಟವನ್ನು ಕೊಟ್ಟು ನನ್ನ ಕೈಯಲ್ಲಿ ಆಗುವುದಿಲ್ಲ ಇನ್ನು ಮುಂದೆ ತಾವುಗಳು ಹಟ್ಟಿ ಜನರಿಗೆ ನೀವೆ ಮಾರ್ಗದರ್ಶಕರಾಗಿರಬೇಕೆಂದು ಬೇಡಿಕೊಂಡಿದ್ದರು. ಆ ಸಮಯದಲ್ಲಿ ಬರಗಾಲ ಬಂದಿದ್ದರಿಂದ ನಾಯಕನಹಟ್ಟಿಯ ಸುತ್ತಮುತ್ತಲೂ ಕೆರೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲವಾಗುವಂತೆ ಮಾಡಿಕೊಟ್ಟರು ಎಂದು ಹೇಳಿದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ ಶ್ರೀ ಹಟ್ಟಿಮಲ್ಲಪ್ಪ ನಾಯಕ ದೊರೆ ಈತ ಮ್ಯಾಸನಾಯಕ ಒಂದೇ ಅಲ್ಲ ಎಲ್ಲಾ ವರ್ಗದವರನ್ನು ಪ್ರೀತಿ, ವಿಶ್ವಾಸದಿಂದ ಕಂಡಂತಹ ವ್ಯಕ್ತಿ. ಜಾತಿ ಗಣತಿ ಸಮೀಕ್ಷೆ ನಡೆಯುತ್ತಿದ್ದು ಪ್ರತಿಯೊಬ್ಬರೂ ನಾಯಕ ಸಮುದಾಯ ಎಂದು ಬರಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ರಾಜಾಹಟ್ಟಿಮಲ್ಲಪ್ಪ ನಾಯಕ ವಂಶಸ್ಥರು, ಸಮಸ್ತ ಹೋಬಳಿಯ ನಾಯಕ ಸಮುದಾಯದವರು ಹಾಗೂ ನಾಯಕನಹಟ್ಟಿ ಹೋಬಳಿಯ ಸುತ್ತಮುತ್ತಲ ಗ್ರಾಮಸ್ಥರು, ಕುಸ್ತಿಪಟುಗಳು, ತೀರ್ಪುಗಾರರು, ಪೊಲೀಸ್‌ಇಲಾಖೆಯವರು, ಆಯೋಜಕರು, ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.