ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕಚೇರಿಯ ಕೌನ್ಸಿಲ್ ಸಭಾಂಗಣದಲ್ಲಿ 156ನೇ ಗಾಂಧಿ ಜಯಂತೋತ್ಸವ ಪ್ರಯುಕ್ತ ಮಹಾತ್ಮ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಭಾವಚಿತ್ರಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಅವರು ಗಾಂಧೀಜಿಯವರ ಹೆಸರು ಭಾರತೀಯರ ಮನಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಟ ಮಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧಿ, ಅಹಿಂಸೆಯೇ ಅವರ ಅಸ್ತ್ರವಾಗಿತ್ತು.1869ರ ಅಕ್ಟೋಬರ್ 2ರಂದು ಗುಜರಾತ್‌ನ ಪೋರಬಂದರಿನಲ್ಲಿ ಹುಟ್ಟಿದ ಮೋಹನದಾಸ್ ಕರಮಚಂದ ಗಾಂಧಿ ಮುಂದೆ ಮಹಾತ್ಮ ಎಂದು ಕರೆಯಲ್ಪಟ್ಟರು.ಗಾಂಧೀಜಿಯವರು ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದರು. ಅವರ ‘ಸತ್ಯಾಗ್ರಹ’ದ ತತ್ವವು ವಿಶ್ವಾದ್ಯಂತ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಚಳವಳಿಗಳಿಗೆ ಸ್ಫೂರ್ತಿ ನೀಡಿತು. ಅವರನ್ನು ಭಾರತದ ‘ರಾಷ್ಟ್ರಪಿತ’ ಎಂದು ಗೌರವದಿಂದ ಕರೆಯಲಾಗುತ್ತದೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಮಾತನಾಡಿ ಭಾರತದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮ ಗಾಂಧೀಜಿಯವರು ಸತ್ಯ, ಅಹಿಂಸೆಯ ಮೂಲಕ ಜಗತ್ತಿನ ಮಾನವ ಗೆದ್ದ ಮಹಾತ್ಮರಿವರು. ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಎಂದೆಂದಿಗೂ ಅಮರ, ಇಡೀ ಪ್ರಪಂಚವೇ ಮಹಾತ್ಮ ಗಾಂಧೀಜಿಯವರನ್ನು ಕೊಂಡಾಡುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರು ಎಂದು ಹೇಳಿದರು.
ಪಟ್ಟಣ ಪಂಚಾಯಿತಿಯ ಸದಸ್ಯರಾದ ಜೆ.ಆರ್.ರವಿಕುಮಾರ್ ಮಾತನಾಡಿ ಗಾಂಧಿ ಜಯಂತಿ ಭಾರತದ ರಾಷ್ಟ್ರೀಯ ಹಬ್ಬ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮ ದಿನವನ್ನು ಗಾಂಧಿ ಜಯಂತಿಯೆಂದು ಆಚರಿಸಲಾಗುತ್ತದೆ. ಸ್ವತಂತ್ರಕ್ಕಾಗಿ ಹೋರಾಟ ಮಾಡಿದ ಅವರು ಜಗತ್ತಿನಲ್ಲಿ ಶಾಂತಿ, ಅಹಿಂಸೆ ಹೋರಾಟದ ಮೂಲಕ ಸ್ವಾತಂತ್ರ್ಯವನ್ನು ತಂದು ಕೊಟ್ಟರು. ಪ್ರತಿಯೊಬ್ಬರೂ ಮಹಾತ್ಮಗಾಂಧಿಯವರ ಜೀವನದ ಆಶಯಗಳನ್ನು ಪಾಲಿಸಬೇಕಾಗಿದೆ. ಬ್ರಿಟೀಶ್ ಆಡಳಿತದ ವಿರುದ್ಧ ಅಹಿಂಸ ಮಾರ್ಗದ ಮೂಲಕ ಸ್ವಾತಂತ್ರ್ಯಕಾಗಿ ಹೋರಾಟ ನಡೆಸಿ ರಾಷ್ಟ್ರಪಿತ ಎನಿಸಿಕೊಂಡವರು ಮಹಾತ್ಮಗಾಂಧೀಜಿ. ಗಾಂಧೀಜಿ ಅವರು ಕಾನೂನು ಪದವಿಯನ್ನು ಪಡೆದವರು, ಬ್ರೀಟಿಷರಿಂದ ಹಲವಾರು ತೊಂದರೆಗಳನ್ನು ಅನುಭವಿಸಿದರು. ದೇಶದ ಮಹಾನ್ ನಾಯಕರ ತ್ಯಾಗ ಬಲಿದಾನದ ಪ್ರತಿಫಲದಿಂದ ದೇಶ ನಮ್ಮದಿಯಿಂದ ಇದೆ ಎಂದು ಹೇಳಿದರು.
ಪ.ಪಂ. ಸದಸ್ಯ ಎಂ ಟಿ ಮಂಜುನಾಥ ಮಾತನಾಡಿ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬ ಹಾಗೂ ಕರ್ನಾಟಕ ರಾಜ್ಯದ ನಾಡ ಹಬ್ಬವಾದ ದಸರಾ ಹಬ್ಬದಲ್ಲಿ ಬನ್ನಿ ಮುಡಿಯುವುದರ ಜೊತೆಗೆ ಗಾಂಧೀಜಿಯವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸೋಣ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ ಮಹಾತ್ಮ ಗಾಂಧೀಜಿಯವರ 156ನೇ ಜನ್ಮದಿನೋತ್ಸವವನ್ನು ನಾವೆಲ್ಲರೂ ಆಚರಣೆ ಮಾಡುತ್ತಿದ್ದೇವೆ. ಮಹಾತ್ಮ ಗಾಂಧೀಜಿಯವರು ಅಹಿಂಸಾ ವಾದಿಗಳು ಹಿಂಸೆಯನ್ನು ಅವರು ವಿರೋಧಿಸುತ್ತಿದ್ದರು. ಅವರನ್ನು ನೆನೆಯುತ್ತಾ ಭಾರತ ದೇಶದ ಎಲ್ಲಾ ಪ್ರಜೆಗಳಿಗೂ ಮಹಾತ್ಮ ಗಾಂಧೀಜಿಯವರ ಜಯಂತೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಈ ಸಂರ‍್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾಶ್ರೀಕಾಂತ್, ಉಪಾಧ್ಯಕೆ ಬೋಸಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್, ಗುರುಶಾಂತಮ್ಮ, ಸುನಿತಮುದಿಯಪ್ಪ, ಪ.ಪಂ. ಸದಸ್ಯ ಎಂ ಟಿ ಮಂಜುನಾಥ, ಮುಖ್ಯಾಧಿಕಾರಿ ಓ.ಶ್ರೀನಿವಾಸ್, ಪೌರಕಾರ್ಮಿಕರು , ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
ಬಾಕ್ಸ್ ಮಾಡಿ :
ಅಕ್ಟೋಬರ್ 02, 1869ರಂದು ಗುಜರಾತ್‌ನ ಪೋರಬಂದರಿನಲ್ಲಿ ಜನಿಸಿದ ಮೋಹನ್‌ದಾಸ ಕರಮಚಂದ ಗಾಂಧಿ ಬ್ರಿಟೀಶರ ಆಳ್ವಿಕೆಯ ವಿರುದ್ದ ಅಹಿಂಸೆಯ ಮಾರ್ಗದ ಮೂಲಕ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು.
ಮಂಜುಳಶ್ರೀಕಾಂತ್.
ಪ.ಪಂ. ಅಧ್ಯಕ್ಷೆ.
About The Author
Discover more from JANADHWANI NEWS
Subscribe to get the latest posts sent to your email.