March 17, 2026
d2-tm4A.jpg


ನಾಗತಿಹಳ್ಳಿ ಮಂಜುನಾಥ್ ಹೊಸದುರ್ಹ
ಹೊಸದುರ್ಗ:ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಬನ್ನಿಮರದ ಮಂಟಪದ ವಿಶಾಲವಾದ ಆವರಣದಲ್ಲಿ ವಿಯದಶಮಿಯಂದು ಗುರುವಾರ ಸಂಜೆ ಅತ್ಯಂತ ವೈಭವಯುತವಾದ ಅಂಬಿನೋತ್ಸವ ನಡೆಯಿತು.
ಸಂಜೆ ೫.೪೫ ರ ಸುಮಾರಿನಲ್ಲಿ ಪಟ್ಟಣದ ಪ್ರಮುಖ ದೇವತಗಳಾದ ಶ್ರೀದುರ್ಗಾಂಬಿಕಾ ದೇವಿ.ಶ್ರೀ ಬನಶಂಕರಿದೇವಿ.ಶ್ರೀ ಪ್ಲೇಗದಮ್ಮ,ಶ್ರೀ ಅಂತರಗಟ್ಟೆಮ್ಮ,ಕಾಳಮ್ಮ ಸೇರಿದಂತೆ ಒಟ್ಟು ೯ ದೇವರುಗಳು ಪಟ್ಟಣದ ಪ್ರಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಹೋರಟು ಬನ್ನಿ ಮಂಟಪವನ್ನ ಸೇರಿದವು.
ಬನ್ನಿ ಮಂಟಪದ ಅವರಣದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ದೇವರುಗಳಿಗೆ ಹಾಗೂ ಬನ್ನಿ ಮಂಟಪದಲ್ಲಿನ ಅವರಣದಲ್ಲಿದ್ದ ದೇವರುಗಳಿಗೆರ ಪೂಜೆ ಸಲ್ಲಿಸಿ ನಂತರ ನೆರೆದಿದ್ದ ಭಕ್ತ ಸಮೂಹಕ್ಕೆ ಸ್ನೇಹಿತ ಬಳಗಕ್ಕೆ ಮತ್ತು ಆತ್ಮೀಯರಿಗೆ ಪರಸ್ಪರ ಬನ್ನಿಪತ್ರೆಯನ್ನ ಆತ್ಮೀಯತೆಯಿಂದ ವಿನಿಮಯ ಮಾಡಿಕೊಂಡರು.
ಬನ್ನಿ ಪೂಜೆ ಮುಗಿದ ಕ್ಷಣಾರ್ಧದಲ್ಲೆ ನೆರೆದಿದ್ದ ಜನರು ಬನ್ನಿ ಪತ್ರೆ ಹಾಗೂ ಬಾಳೆ ಪತ್ರೆಯನ್ನ ತೆಗೆದುಕೊಳ್ಳಲು ಮುಗಿ ಬಿದ್ದರು. ಗ್ರಾಮದ ೯ ದೇವರುಗಳ ಪೂಜಾರಿಗಳು ಮುಖಂಡರು ಜನಪ್ರತಿನಿಧಿಗಳು ಗೌಡರು ಪ್ರಮುಖರು ಪೂಜೆಯಲ್ಲಿ ಪಾಲ್ಗೊಂಡು ಬನ್ನಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ಇದೇ ಸಂಧರ್ಬದಲ್ಲಿ ತಹಶಿಲ್ದಾರ್ ತಿರುಪತಿಪಾಟೀಲ್ ಅವರು ಬನ್ನಿ ಮಂಟಪದ ಅವರಣದ ಸುತ್ತ ಬಿಲ್ಲಿನ ಬಾಣ ಬಿಡುವ ಮೂಲಕ ಅಂಬಿನೋತ್ಸವ ಸಡಗರ ಸಂಬ್ರಮದಿAದ ಜರುಗಿತು. ಶಾಸಕ ಬಿ.ಜಿ.ಗೋವಿಂದಪ್ಪ ಪುರಸಭಾ ಮುಖ್ಯಾಧಿಕಾರಿ ನಾಗಭೂಷಣ್ ಸೇರಿದಂತೆ ಪುರಸಭಾ ಅಧ್ಯಕ್ಷರು, ಉಪಾಧ್ಯಕ್ಷರು ಸರ್ವ ಸದಸ್ಯರು ಪುರಸಭಾ ಸಿಬ್ಬಂಧಿ ವರ್ಗ ಹಾಗೂ ಪಟ್ಟಣದ ಪ್ರಮುಖ ಜನಪ್ರತಿನಿಧಿಗಳು ಮುಖಂಡರುಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಹಾಲಯ ಅಮವಾಸ್ಯೆಯಿಂದ ಒಂಬತ್ತು ದಿವಸಗಳ ಕಾಲ ಪ್ರಮುಖ ದೇವಾಲಯಗಳಲ್ಲಿ ದೇವಿ ಪುರಾಣ ಹರಿಕಧೆ.ಶನಿ ಪುರಾಣ ದೇವಿ ಮಹತ್ಮೆ, ಮತ್ತು ಭಜನೆ ವಿಶೇಷ ಪೂಜಾ ಕಾರ್ಯಕ್ರಮಗಳು ಶ್ರದ್ದಾ ಪೂರ್ವಕವಾಗಿ ಜರುಗಿದವು.
ಅದೇ ರೀತಿ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಬಾಗೂರು. ನೀರಗುಂದ, ದೇವಪುರ, ಮತ್ತೋಡು ಶ್ರೀರಾಂಪುರ, ಎಸ್.ನೇರಲಕೆರೆ, ಬೆಲಗೂರು. ತೇಕಲವಟ್ಟಿ. ಜಾನಕಲ್ಲು, ಮಾಡದಕೆರೆ, ಬಳ್ಳೆಕರೆ ಬುರುಡೇಕಟ್ಟೆ , ಮಳಲಿ ಶ್ರೀರಾಂಪುರ, ಮೈಲಾರಪುರ, ಗವಿರಂಗಾಪುರ ಮುಂತಾದ ಗ್ರಾಮಗಳಲ್ಲಿಯೂ ಅಂಬಿನೋತ್ಸವ ಜರುಗಿತು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading