ವರದಿ: ಕೆ.ಟಿ.ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ :
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳು ವರದಾನವಾಗಿದೆ ಎಂದು ಗ್ರಾಮದ ಮುಖಂಡ ಪಿ ಎಂ ಮಂಜಣ್ಣ ಹೇಳಿದರು.
ಗುರುವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಾಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎನ್ ಮಹದೇವಪುರ ಕ್ಲಸ್ಟರ್ ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಶಿಕ್ಷಕ ಜಿ.ಟಿ. ತಿಪ್ಪೇಸ್ವಾಮಿ ಇವರಿಗೆ ಬೀಳ್ಕೂಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕ ಜಿ.ಟಿ. ತಿಪ್ಪೇಸ್ವಾಮಿ ನೂರಾರು ವಿಧ್ಯಾರ್ಥಿಗಳಿಗೆ ವಿಧ್ಯಾ ಧಾನ ಮಾಡಿ ಸುಮಾರು 9 ವರ್ಷಗಳ ಕಾಲ ರಾಮಸಾಗರದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿದ್ದಾರೆ, ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸಿದರು.
ಇದೇ ವೇಳೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಟಿ. ತಿಪ್ಪೇಸ್ವಾಮಿ ಗೊಂಚಿ, ಗ್ರಾಮ ಪಂಚಾಯಿತಿ ಸದಸ್ಯ ಎಂ ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಿ.ಎಂ. ವಿಶ್ವನಾಥ್, ಅಬ್ಬೇನಹಳ್ಳಿ ಕ್ಲಸ್ಟರ್ ಸಿಆರ್ಪಿ ಜಿ ಪಾಲಯ್ಯ, ನಾಯಕನಹಟ್ಟಿ ಹೋಬಳಿ ಶಿಕ್ಷಕರ ಸಂಘದ ಹೋಬಳಿ ಅಧ್ಯಕ್ಷ ಬಿ ಎಚ್ ತಿಪ್ಪೇರುದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ನಿರ್ದೇಶಕ ಸಿ. ಹನುಮಂತಪ್ಪ, ಶಿಕ್ಷಕರ ಸ್ನೇಹ ಬಳಗದ ಕಾರ್ಯದರ್ಶಿ ಕೆ. ಗೋವಿಂದಪ್ಪ, ಅಧ್ಯಕ್ಷ ಜಿ.ಟಿ. ಆನಂದಪ್ಪ, ಮಾಜಿ ಸಂಘಟನಾ ಕಾರ್ಯದರ್ಶಿ ಆರ್ ಚಂದ್ರಣ್ಣ, ರಾಮಸಾಗರ ಶಾಲೆಯ ಶಿಕ್ಷಕ ಸುನಿಲ್, ಹುಸೇನ್ ಸಾಬ್, ಗ್ರಾಮಸ್ಥರಾದ ಸಣ್ಣ ತಿಪ್ಪಯ್ಯ, ಜಯಣ್ಣ, ಪೂಜಾರಿ ಪಾಲಯ್ಯ, ಬಸವರಾಜಪ್ಪ, ಶ್ರೀನಿವಾಸ್,ಪಿ.ಪಿ ಮಹಾಂತೇಶ್, ಲೋಕೇಶ್, ಜಯಣ್ಣ, ಸಣ್ಣ ಪಾಲಯ್ಯ, ಹಳೆ ವಿದ್ಯಾರ್ಥಿಗಳು ಸೇರಿದಂತೆ ಶಾಲೆಯ ವಿದ್ಯಾರ್ಥಿನಿಯರು ಸಮಸ್ತ ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.