
ಚಳ್ಳಕೆರೆಜು. 2 ನಗರದ ಇಂಜಿನಿಯರಿಂಗ್ ಕಾಲೇಜು ಬಂಗಾರದ ಪದಕ ಹಾಗೂ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬಿಡುಗಡೆಗೊಳಿಸಿದ್ದು, ಇದೇ ಮೊಟ್ಟಮೊದಲ ಬಾರಿಗೆ ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆಟೋಮೊಬೈಲ್ ವಿಭಾಗದ ವಿದ್ಯಾರ್ಥಿನಿ ಚಿನ್ನದ ಪದಕದೊಂದಿಗೆ ಮೊದಲರ್ಯಾಂಕ್ ಪಡೆದರಲ್ಲದೆ, ಇನ್ನೂ ಇಬ್ಬರು ವಿದ್ಯಾರ್ಥಿಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ರ್ಯಾಂಕ್ ಪಡೆದಿದ್ಧಾರೆಂದು ಕಾಲೇಜು ಪ್ರಾಂಶುಪಾಲ ಎಂ.ಎಂ.ಬೆನಾಲ್ ತಿಳಿಸಿ, ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ಧಾರೆ.



ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಿಜಿಸ್ಟಾರ್ ಎನ್.ಟಿ.ಶ್ರೀನಿವಾಸ ಮಾಹಿತಿ ನೀಡಿದ್ದು, ಜುಲೈ4ರ ಶುಕ್ರವಾರ ವಿವಿಯಲ್ಲಿ ನಡೆಯುವ 25ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ವಿಶ್ವವಿದ್ಯಾಲಯದ ಚಾನ್ಸಿಲರ್ ಥಾವರಚಂದ್ ಗೆಹಲೋಟ್ ಪದವಿಪ್ರಧಾನ ಮಾಡುವರು.
ಆಟೋಮೊಬೈಲ್ ವಿಭಾಗದಲ್ಲಿ ಈ. ರಂಜಿತ ಆಟೋಮೊಬೈಲ್ ವಿಭಾಗದ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ, ಬೆಳಗಾವಿಯ ಚಿಕ್ಕೋಡಿಟಿ ವ್ಯಾಪ್ತಿಯ ಇಂಗಲಿ ಗ್ರಾಮದ ಆರ್ಚನ ಹರದಾರೆ ಮೂರನೇ ರ್ಯಾಂಕ್, ಚಿತ್ರದುರ್ಗ ತಾಲ್ಲೂಕಿನ ಮೇಗಳಹಳ್ಳಿ ಗ್ರಾಮದ ಬಿ.ಎಸ್ ದಿವ್ಯಾ ನಾಲ್ಕನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿತಂದಿದ್ಧಾರೆ.
ರ್ಯಾಂಕ್ ವಿಜೇತರಿಗೆ ಶಾಸಕರ ಅಭಿನಂದನೆ :-

ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಕ್ರಮವಾಗಿ ಒಂದು, ಮೂರು ಮತ್ತು ನಾಲ್ಕನೇ ರ್ಯಾಂಕ್ ಪಡೆಯುವ ಮೂಲಕ ಕಾಲೇಜು ಹಾಗೂ ಜಿಲ್ಲೆಗೆ ಕೀರ್ತಿತಂದಿದ್ದು, ರ್ಯಾಂಕ್ ವಿಜೇತರನ್ನು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಅಭಿನಂದಿಸಿದ್ದಾರೆ
About The Author
Discover more from JANADHWANI NEWS
Subscribe to get the latest posts sent to your email.