
ಚಳ್ಳಕೆರೆ
ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ 4856 ವಿದ್ಯಾರ್ಥಿಗಳ ಪೈಕಿ 3017ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ62.92ರಷ್ಟು ಮಾತ್ರ ಫಲಿತಾಂಶ ಬಂದಿದ್ದು,ಇದರಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಲೇನಹಳ್ಳಿ ಗೇಟ್‌ನಲ್ಲಿರುವ ಇಂದಿರಾಗಾಂಧಿ ಸರಕಾರಿ ವಸತಿ ಪ್ರೌಢಶಾಲೆ ಮತ್ತು ಕಾಟಂದೇವರಕೋಟೆಯ ಸರ್ವೋದಯ ಖಾಸಗಿ ಪ್ರೌಢಶಾಲೆಯಲ್ಲಿ 11 ವಿದ್ಯಾರ್ಥಿಗಳಿದ್ದು,ಎಲ್ಲರೂ ಉತ್ತೀರ್ಣರಾಗುವ ನೂರಷ್ಟು ಫಲಿತಾಂಶ ಗಳಿಸಿವೆ ಎನ್ನಲಾಗಿದೆ.
ಈ ಬಾರಿ ಪರೀಕ್ಷೆ ಬರೆದಿದ್ದ 2449 ಗಂಡು ಮಕ್ಕಳ ಪೈಕಿ 1319 ಮಕ್ಕಳಷ್ಟೇ ಪಾಸ್ ಆಗಿದ್ದಾರೆ.ಇನ್ನೂ 2406 ಹೆಣ್ಣು ಮಕ್ಕಳ ಪೈಕಿ 1690 ಉತ್ತೀರ್ಣರಾಗಿದ್ದಾರೆ.ಇತ್ತ ತಾಲೂಕಿನ ನಾಯಕನಹಟ್ಟಿಯ ವಿದ್ಯಾವಿಕಾಸ್ ಪ್ರೌಢಶಾಲೆಯ ಜಿ.ರಾಮ್‌ಕುಮಾರ್ 622ಅಂಕ ಮತ್ತು ನಗರದ ಚಿನ್ಮಯ ಪ್ರೌಢಶಾಲೆಯ ಡಿ.ಕವನ 622ಅಂಕ ಗಳಿಸುವ ಮೂಲಕ ಇಬ್ಬರು ತಾಲೂಕಿಗೆ ಟಾಪರ್ ಆಗಿದ್ದಾರೆ.ಇನ್ನೂ ನಗರದ ವಾಸವಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಟಿ.ಸಿಂಚನ 620ಅಂಕ ಗಳಿಸುವ ಮೂಲಕ 2ನೇ ಸ್ಥಾನ ಮತ್ತು ಮೈತ್ರಿ ಎಚ್.ಪಿ618 ತೃತೀಯ ಸ್ಥಾನ ಪಡೆದಿದ್ದು,ಸರಕಾರಿ ಪ್ರೌಢಶಾಲೆಗಳ ಪೈಕಿ ಹೆಗ್ಗೆರೆ ತಾಯಮ್ಮ ಬಾಲಕಿಯರ ಸರಕಾರಿ ಪ್ರೌಢಶಾಲೆಯ ಎಂ.ಸೌಮ್ಯ 615 ಹಾಗೂ ಆದರ್ಶ ಆಂಗ್ಲ ಮಾಧ್ಯಮ ವಿದ್ಯಾಲಯದ ಎಂ.ಎ.ಕುಶಾಲ್ 613 ಅತಿ ಹೆಚ್ಚು ಅಂಕ ಗಳಿಸಿದ್ದಾನೆ ಎಂದು ಬಿಇಒ ಕೆ.ಎಸ್.ಸುರೇಶ್ ತಿಳಿಸಿದ್ದಾರೆ.
ನಗರ ಪ್ರತಿಷ್ಠಿತ ಹಿನ್ನೆಲೆ ಹೂಂದಿರುವ ಹಾಗೂ ಸ್ವಾತಂತ್ರ್ಯ ಪೂರ್ವಕಾಲದ ಹಳೆ ಕಟ್ಟಡಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಶಾಸಕ ಟಿ ರಘುಮೂರ್ತಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢ ಶಾಲೆಯಲ್ಲಿ ಪರಶುರಾಂಪುರ ಹೋಬಳಿಯ ಕೇಂದ್ರದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಈ ಶಾಲೆಯಲ್ಲಿ 140 ವಿದ್ಯಾರ್ಥಿಗಳು ಪರಿಕ್ಷೆ ಗೆ ಕುಳಿತಿದ್ದವರಲ್ಲಿ ಕೇವಲ
21 ವಿದ್ಯಾರ್ಥಿಗಳ ಮಾತ್ರ ಉತ್ತೀರ್ಣರಾಗಿರುವುದು ಇಲ್ಲಿನ ಪ್ರೌಢಶಾಲೆಯ ಶಿಕ್ಷಕರ ಮೇಲೆ ಶೈಕ್ಷಣಿಕ ಪ್ರಗತಿಯ ಮೇಲೆ ಅನುಮಾನಕ್ಕೆ ಎಡೆ ಮಾಡುವಂತಿದೆ.
About The Author
Discover more from JANADHWANI NEWS
Subscribe to get the latest posts sent to your email.