September 15, 2025
IMG20250502110538_01.jpg

ಚಳ್ಳಕೆರೆಮೇ.2.ನ್ಯಾಯಮೂರ್ತಿ ಡಾ. ಎಚ್.ಎಸ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗದ ಸೂಚನೆ ಪ್ರಕಾರ ಈಗಾಗಲೇ ಗುರುತಿಸಿರುವ 101 ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯಡಿ, ಉಪ ಜಾತಿಗಳ ಸಮೀಕ್ಷೆ ಮೇ 5 ರಿಂದ ಆರಂಭವಾಗಲಿದೆ. ಸಮೀಕ್ಷೆದಾರರು ಯಾವುದೇ ಒತ್ತಡ, ಪ್ರಭಾವಗಳಿಗೆ ಒಳಗಾಗದೇ, ಅಗತ್ಯ ದಾಖಲೆಗಳ ಅನುಸಾರ ಕರಾರುವಕ್ಕಾಗಿ ಮತ್ತು ನಿಯಮಗಳ ಅನುಸಾರ ಸಮೀಕ್ಷೆ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇಮ್ಲನಾಯ್ಕ ತಿಳಿಸಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಸಮೀಕ್ಷೆದಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಅಡಿ, ಉಪಜಾತಿಗಳ ಸಮೀಕ್ಷೆಯನ್ನು ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್ ಮೂಲಕ ಸಮಾಜ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಶಿಕ್ಷಕರಿಂದ . ಮೇ 5 ರಿಂದ 17ರ ವರೆಗೆ ಮೊದಲ ಹಂತದಲ್ಲಿ ಸಮೀಕ್ಷೆದಾರರು ಮನೆ ಮನೆ ಭೇಟಿ ಮೂಲಕ ಸಮೀಕ್ಷೆ ಮಾಡಿ, ಮಾಹಿತಿ ದಾಖಲಿಸಲಿದ್ದಾರೆ ಎಂದರು.
ಬಿಇಒ ಸುರೇಶ್ ಮಾತನಾಡಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಎಲ್ಲಾ ವರ್ಗದವರಿಗೆ ಎಲ್ಲಾ
ಕಾಲದಲ್ಲಿಯೂ ನೀಡುವುದು ಸರ್ಕಾರದ ಅತಿ ದೊಡ್ಡ ಆಕಾಂಕ್ಷೆಯಾಗಿರುತ್ತದೆ. ಈ
‘ಸಮಾನತೆಯ ಪರಿಕಲ್ಪನೆ ಅನೇಕ ಶ್ರೇಷ್ಠ ಚಿಂತನಶೀಲರು ಮತ್ತು ದಾರ್ಶನಿಕರಿಂದ ಸ್ಫೂರ್ತಿ
ಪಡೆದಿದೆ. ಇವರಿಂದ ಪ್ರತಿವಾದಿಸಲ್ಪಟ್ಟ “ಸಮಾನತೆಯ ತತ್ತ್ವ” ವೆಂದರೆ ಎಲ್ಲಾ ನಾಗರಿಕರಿಗೆ
ಸಮಾನ ಸ್ಥಾನಮಾನ ಹಾಗೂ ಅವಕಾಶಗಳನ್ನು ನೀಡುವುದಾಗಿರುತ್ತದೆ. ಭಾರತದ
ಸಂವಿಧಾನದ 15ನೇ ಪರಿಚ್ಛೇದವು ಮತ, ಕುಲ, ಜಾತಿ, ಲಿಂಗ ಮತ್ತು ಜನ್ಮ ಸ್ಥಳಗಳ ಆಧಾರದ
ಮೇಲೆ ಯಾವುದೇ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ. ಅದೇ ರೀತಿ ಪರಿಚ್ಛೇದ
16ರಲ್ಲಿ ಎಲ್ಲರಿಗೂ ಸಾರ್ವತ್ರಿಕ ಉದ್ಯೋಗ ವಲಯದಲ್ಲಿ ಸರಿಸಮಾನ ಅವಕಾಶಗಳನ್ನು
ಒದಗಿಸಲು ಅನುವು ಮಾಡಿಕೊಡಲಾಗಿದೆ. ಮೀಸಲಾತಿ ವರ್ಗೀಕರಣ ಸಮೀಕ್ಷೆ ಯಾವ ಕುಟುಂಬ ಹೊರಗುಳಿಯದಿರಲಿ
ಎಸ್ಸಿ ಮೀಸಲಾತಿ ವರ್ಗೀಕರಣ ಸಮೀಕ್ಷೆ ಯಾವ ಕುಟುಂಬ ಹೊರಗುಳಿಯದಿರಲಿ
ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲೂ ಜಾತಿ ಗಣತಿ ಸಮೀಕ್ಷೆ ಮಾಡಬೇಕು
ಪರಿಶಿಷ್ಟ ಜಾತಿಯ ಪ್ರತಿ ಮನೆಗಳಲ್ಲೂ ಜಾತಿ ಗಣತಿ ಸಮೀಕ್ಷೆ ಮಾಡಬೇಕು ಸಮೀಕ್ಷೆಯಲ್ಲಿ ಉಳಿದವರಿಗಾಗಿ ಮತಗಟ್ಟೆ ಮಟ್ಟದಲ್ಲಿ ಸಮೀಕ್ಷೆದಾರರು ವಿಶೇಷ ಶಿಬಿರ ಆಯೋಜಿಸಿ ಮಾಹಿತಿ ಸಂಗ್ರಹಿಸಿ, ದಾಖಲಿಸುತ್ತಾರೆ. ಸಮೀಕ್ಷೆಯಲ್ಲಿ ಹಾಜರಾಗದ, ಬಿಟ್ಟು ಹೋದ ಪರಿಶಿಷ್ಟ ಜಾತಿಯ ಜನರು ಸ್ವತಃ ತಾವೇ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಕಂಟ್ರೋಲ್ ರೂಮ್‌: ಸಮೀಕ್ಷೆಯು ನಿಗದಿತ ಅವಧಿಯೊಳಗೆ ಮಾಡಬೇಕಿದ್ದು, ಕ್ಷೇತ್ರಮಟ್ಟದಲ್ಲಿ ಸಮೀಕ್ಷೆದಾರರಿಗೆ ಉಂಟಾಗುವ ಗೊಂದಲ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಸ್ಪಂಧಿಸಿ, ಬಗೆ ಹರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಅಲ್ಲಿನ ಸಹಾಯವಾಣಿಗೆ ಕರೆ ಮಾಡಿ, ಸಮೀಕ್ಷೆದಾರರು ಸಹಾಯ ಪಡೆಯಬಹುದು ಎಂದು ಹೇಳಿದರು.

ಈ ಸಮೀಕ್ಷೆಯು ಮೂಲ ದತ್ತಾಂಶಗಳನ್ನು ಸಂಗ್ರಹಿಸುವದಾಗಿರುವುದರಿಂದ ಅತೀ ಮುಖ್ಯವಾಗಿದೆ. ಪಾರದರ್ಶಕವಾಗಿ, ಸಮರ್ಪಕವಾಗಿb ನಡೆಯಬೇಕು. ಈ ನಿಟ್ಟಿನಲ್ಲಿ ತರಬೇತಿ ಪೂರ್ಣಪ್ರಮಾಣದಲ್ಲಿ ಆಗಬೇಕು ಎಂದರು.
ಬಿ.ಜಿ.ಶಾಂತಕುಮಾರ್ ತರಭೇತಿದಾರ . ಮಾಹಿತಿ ನೀಡಿದರು.ಮಂಜುನಾಥಸ್ವಾಮಿ.ಸಣ್ಣಸೂರಮ್ಮ.ಹನುಮಂತರಾಯ.ತಿಪ್ಪೇಸ್ವಾಮಿ.ಮಂಜುನಾಥ.ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading