September 15, 2025
IMG-20250502-WA0183.jpg

ಚಳ್ಳಕೆರೆ ತಾಲೂಕಿನ ಗಡಿಭಾಗದ ಓಬಳಾಪುರ ಗ್ರಾಮದಲ್ಲಿ ನಡೆದ 134ನೇ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ರವರ ಜಯಂತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಗ್ರಾಮದ ಹಿಂದುಳಿದ ಯುವ ಪ್ರತಿಭಾವಂತರು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣದ ಪ್ರಗತಿಯತ್ತ ಚಿತ್ತಹರಿಸಲು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿರುತ್ತದೆ.

ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತ ಗ್ರಾಮದ ಶಿಕ್ಷಕರಾದ ಡಿ.ಸುರೇಶ್ ರವರು ಹಾಗೂ ಕಾರ್ಯಕ್ರಮದ ಉಧ್ಘಾಟಕರು ಗ್ರಾಮ ಪಂಚಾಯತಿ ಅಧ್ಯಕ್ಷರು ಶ್ರೀಮತಿ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರು ಬಿ.ಲಿಂಗರಾಜ್ ಹಾಗೂ ಕಾರ್ಯಕ್ರಮದ ಅತಿಥಿಗಳು ಹಿರಿಯೂರು ಸರ್ಕಾರಿ ಜೂನಿಯರ್ ಕಾಲೇಜ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಸಾಹಿತಿಗಳು ಹಾಗೂ ವಚನಕಾರರು ಸುಬ್ರಹ್ಮಣ್ಯಂ ರವರು ರಚಿಸಿದ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನ ಚರಿತ್ರೆಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಯುವಕರು ದುಷ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನಬಹರಿಸಿ ಶೈಕ್ಷಣಿಕ ಪ್ರಗತಿಯೆಡೆಗೆ ಮುನ್ನುಡಿಯಾಗಲು ಕರೆ ನೀಡಿದರು. ಮುಂದಿನ ವರ್ಷಕ್ಕೆ ಪ್ರತಿಭಾ ಪುರಸ್ಕಾರಕ್ಕೆ ಪೈಪೋಟಿಯಿಂದ ಕೂಡಿರಬೇಕು. ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಬೆಂಬಲ ನೀಡಿ ಡಾ, ಬಿ. ಆರ್ ಅಂಬೇಡ್ಕರ್ ರವರ ಅನುಯಾಯಿಯಾಗಿ ನಮ್ಮ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯ ಪ್ರವೃತ್ತಿಯಲ್ಲಿ ತೊಡಗಿರುವ ವಕೀಲರಾದ ಶ್ರೀ ಎಸ್.ಜಿ ಅಶೋಕ್ ಕುಮಾರ್ ರವರಿಗೆ ಸನ್ಮಾನ ಮಾಡಲಾಯಿತು. ಗ್ರಾಮದ ನಿವೃತ್ತಿ ನೌಕರರಿಗೆ ಹಾಗೂ ಹತ್ತನೇ ತರಗತಿಯ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು

ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಲಾಯಿತು
ಮಹಿಳೆಯರು ಕುಂಭಾ ಮೇಳದೊಂದಿಗೆ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ರವರ ಪ್ರತಿಮೆಯನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ವಾಧ್ಯಗಳೊಂದಿಗೆ ಡೊಳ್ಳು ಕುಣಿತದ ಸಂಭ್ರಮದಿಂದ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮದ ಡಿ.ಚಿದಾನಂದ ಆರೋಗ್ಯ ಶಿಕ್ಷಣ ಅಧಿಕಾರಿಗಳು, ವಾಣಿಜ್ಯ ತೆರಿಗೆಯ ಇಲಾಖೆಯ ಅಧಿಕಾರಿಗಳು ರಂಗನಾಥ್. ಗ್ರಾಮದ ವಕೀಲರು ಜಿ. ಅಶೋಕ್ ಹಾಗೂ ಗ್ರಾಮದ ಮುಖಂಡರು ಎಂ.ಪಾತಲಿಂಗಪ್ಪ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading