ನಾಯಕನಹಟ್ಟಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಾನವೀಯ ಕಾರ್ಯ ನಡೆಯಿತು.

ತಾಲೂಕಿನಲ್ಲಿ ಒಟ್ಟು 45 ಮಾಶಾಸನ ಫಲಾನುಭವಿಗಳಿದ್ದು, ಡಾ. ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ದೇವರಹಳ್ಳಿ ವಲಯದ ವರವು ಕಾರ್ಯಕ್ಷೇತ್ರದಲ್ಲಿ ಅಶಕ್ತ ಕುಟುಂಬದ ಫಲಾನುಭವಿಗಳಾದ ದುರ್ಗಮ್ಮ ಮತ್ತು ದಾದಾಮ್ಮ ಅವರ ಮನೆಗೆ ಭೇಟಿ ನೀಡಿದ ಯೋಜನಾಧಿಕಾರಿಗಳಾದ ಜಯಂತ್ ಸರ್, ವಲಯ ಮೇಲ್ವಿಚಾರಕರಾದ ಜ್ಯೋತಿ ಮೇಡಂ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಶಿಕಲಾ ಅವರು, ಅವರ ಯೋಗಕ್ಷೇಮವನ್ನು ವಿಚಾರಿಸಿದರು.
ಈ ಸಂದರ್ಭದಲ್ಲಿ ಹೇಮಾವತಿ ಅಮ್ಮನವರ ಜನ್ಮದಿನದ ಅಂಗವಾಗಿ ಹಣ್ಣು ಹಂಪಲುಗಳನ್ನು ಮಾಶಾಸನ ಫಲಾನುಭವಿಗಳಿಗೆ ವಿತರಿಸಿ ಮಾನವೀಯತೆ ಮೆರೆದರು.
ಸಾಮಾಜಿಕ ಕಳಕಳಿಯೊಂದಿಗೆ ನಡೆಯುತ್ತಿರುವ ಇಂತಹ ಸೇವಾ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ…
About The Author
Discover more from JANADHWANI NEWS
Subscribe to get the latest posts sent to your email.