ಚಳ್ಳಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ಪೂಜ್ಯ ಡಿ. ವೀರೇಂದ್ರ ಹೆಗ್ಡೆ ಅವರ ಧರ್ಮಪತ್ನಿ ಹೇಮಾವತಿ ಅಮ್ಮನವರ ಹುಟ್ಟುಹಬ್ಬದ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮ ನಡೆಯಿತು.










ತಾಲೂಕಿನ ಅಸಹಾಯಕರಾದ ಸುಮಾರು 38 ಫಲಾನುಭವಿಗಳನ್ನು ಗುರುತಿಸಿ, ಕಳೆದ ಹಲವು ವರ್ಷಗಳಿಂದ ಪ್ರತಿಮಾಸವೂ ತಲಾ 1,000 ರೂಪಾಯಿಗಳ ನೆರವು ನೀಡುತ್ತಿರುವ ಯೋಜನೆಯಡಿ, ಫಲಾನುಭವಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಯೋಜನಾಧಿಕಾರಿ ಶಶಿಕಲಾ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳದ ಆಶ್ರಯದಲ್ಲಿ ನಡೆಯುತ್ತಿರುವ ಈ ಯೋಜನೆ ಅಸಹಾಯಕರ ಬದುಕಿಗೆ ಆಶಾಕಿರಣವಾಗಿದೆ. ನಿರಂತರ ಸಹಾಯಧನದೊಂದಿಗೆ ಇಂತಹ ದಿನಗಳಲ್ಲಿ ಮಾನವೀಯತೆ ಮೆರೆದಿರುವುದು ಶ್ಲಾಘನೀಯ,” ಎಂದರು.
ನಗರಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ನೇತಾಜಿ ಪ್ರಸನ್ನ ಮಾತನಾಡಿ, “ನಿರ್ಗತಿಕರಿಗೆ ಸಹಾಯ ಮಾಡುವ ಇಂತಹ ಯೋಜನೆಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು. ಇದು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ,” ಎಂದು ಅಭಿಪ್ರಾಯಪಟ್ಟರು.
ಯೋಜನೆಯ ಮಧ್ಯವರ್ಜನ ಶಿಬಿರದ ಉಪಾಧ್ಯಕ್ಷ ಮೃತ್ಯುಂಜಯ ಮಾತನಾಡಿ“ಸತತವಾಗಿ ನೀಡುತ್ತಿರುವ ಈ ನೆರವು ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದೆ. ಸಮಾಜದ ಪ್ರತಿಯೊಬ್ಬರೂ ಇಂತಹ ಸೇವೆಯಲ್ಲಿ ಭಾಗಿಯಾಗಬೇಕು,” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಶಶಿಕಲಾ, ಯೋಜನೆ ಮುಖ್ಯಸ್ಥರಾದ ಭವಾನಿ, ಮುತ್ತುಭಾಗ್ಯಲಕ್ಷ್ಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನೇತಾಜಿ ಪ್ರಸನ್ನ ಮದ್ಯವರ್ಜನ ಶಿಬಿರದ ಉಪಾಧ್ಯಕ್ಷ ಮೃತ್ಯುಂಜಯ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.