.
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಹೋಬಳಿಯ ಎನ್.ದೇವರಹಳ್ಳಿ ಗ್ರಾಮದಲ್ಲಿ ಬುಧವಾರ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀದಡ್ಲು ಮಾರಮ್ಮದೇವಿ ಜಾತ್ರೆಯು ಸಡಗರ, ಸಂಭ್ರಮದಿಂದ ಜರುಗಿತು.





ಎನ್.ದೇವರಹಳ್ಳಿ ಗ್ರಾಮದಲ್ಲಿ ವಿಶೇಷವೆಂದರೆ ದಡ್ಲು ಮಾರಮ್ಮ ದೇವಿಯ ಜಾತ್ರೆಯಂದು ಬೇವು, ಬೆಲ್ಲ ಸವಿಯುವ ಮೂಲಕ ಯುಗಾದಿ ಹಬ್ಬವನ್ನು ಆಚರಣೆ ಮಾಡುವುದು ಪದ್ದತಿಯಾಗಿದೆ. ಎಲ್ಲರೂ ಯುಗಾದಿ ಹಬ್ಬದ ಮೊದಲನೇ ದಿನವೇ ಬೇವು, ಬೆಲ್ಲವನ್ನು ಸವಿದು ಯುಗಾದಿ ಹಬ್ಬ ಆಚರಣೆ ಮಾಡಿದರೆ, ಎನ್.ದೇವರಹಳ್ಳಿ ಗ್ರಾಮದಲ್ಲಿ ಜಾತ್ರಾ ಮಹೋತ್ಸವದ ಬುಧವಾರ ಬೇವು, ಬೆಲ್ಲ ಸವಿದರು… ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು .
ಶ್ರೀ ದಡ್ಲು ಮಾರಮ್ಮ ದೇವಿ ಜಾತ್ರೆಯಲ್ಲಿ ಭಾಗವಹಿಸಿ, ದೇವಾಲಯದ ಸುತ್ತ ಪ್ರದಕ್ಷಣೆ ಹಾಕಿ ಹರಕೆ ತೀರಿಸಿದರು. ಮತ್ತೊಂದು ಕಡೆ ರೈತರು ತಮ್ಮ ಜಾನುವಾರುಗಳನ್ನು ಪ್ರದಕ್ಷಣೆ ಹಾಕಿದರು..
ಇನ್ನೂ ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಶ್ರೀರಾಮ ಸೇನಾ ವತಿಯಿಂದ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇದೆ ವೇಳೆ ಎನ್ ದೇವರಹಳ್ಳಿ ಗ್ರಾಮದ ಗುರು-ಹಿರಿಯರು ಸಮಸ್ತ ಊರಿನ ಗ್ರಾಮಸ್ಥರು ವಿವಿಧ ಹಳ್ಳಿಗಳ ಭಕ್ತಾದಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.