ವರದಿ: ಕೆ.ಟಿ.ಮೋಹನ್ ಕುಮಾರ್
ಸಾಲಿಗ್ರಾಮ (ಮೈಸೂರು ಜಿಲ್ಲೆ): ಮಹನೀಯರ, ದಾರ್ಶನಿಕರ ಹಾಗೂ ಗಣ್ಯರ ಆದರ್ಶ ಗುಣಗಳನ್ನು ಸರ್ವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ
ಎಚ್.ಎನ್.ವಿಜಯ್ ಹೇಳಿದರು.









ಅವರು ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಾಂಗ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀ ದೇವರ ದಾಸಿಮಯ್ಯ ಅವರ 1046ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹನೀಯರ ಜಯಂತಿಗಳನ್ನು ವರ್ಷದಲ್ಲಿ ಕೇವಲ ಒಂದು ದಿನಕ್ಕೆ ಸೀಮಿತ ಮಾಡದೆ ಅವರು ನಡೆದು ಬಂದ ಹಾದಿ ಹಾಗೂ ಅವರುಗಳು ಸಮಾಜಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಜೊತೆಗೆ ಅದರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಂತಹ ಕೆಲಸ ನಿರಂತರವಾಗಿ ನಡೆಯಬೇಕು ಎಂದರು.
ಯಾವುದೇ ಗಣ್ಯರ ಜಯಂತಿಗಳನ್ನು ಆಚರಿಸುವ ಸಂದರ್ಭದಲ್ಲಿ ಸರ್ವ ಸಮುದಾಯಗಳು ಒಟ್ಟಾಗಿ ಸೇರಿ ಆಚರಣೆ ಮಾಡುವ ಮೂಲಕ ಅವರುಗಳಿಗೆ ಗೌರವ ಸಲ್ಲಿಸಬೇಕು ಆ ಹಾದಿಯಲ್ಲಿ ಹರದನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಂಗ ಸಂಘದವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಇತರರಿಗೆ ಮಾದರಿಯಾಗಿದೆ ಎಂದರು.
ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಾಂಗ ಸಮುದಾಯದವರು ಮಾಡುವಂತಹ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಸದಾ ನನ್ನ ಸಹಕಾರವಿರುತ್ತದೆ ಎಂದರು.
ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ ನಂತರ ಶ್ರೀ ದೇವರ ದಾಸಿಮಯ್ಯ ಅವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರು ಪೂರ್ಣ ಕುಂಭ ಕಳಸಹೊತ್ತು ವೀರಗಾಸೆ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಮೆರವಣಿಗೆ ಯುದ್ಧಕ್ಕೂ ಮಾಡಲಾದ ವೀರಗಾಸೆ ನೃತ್ಯ ವಿಶೇಷವಾಗಿ ಎಲ್ಲರನ್ನೂ ತಮ್ಮತ್ತ ಸೆಳೆದರೆ ವಿವಿಧ ವಾದ್ಯ ಪ್ರಕಾರಗಳ ಸದ್ದಿಗೆ ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ನೃತ್ಯ ಮಾಡುತ್ತಾ ಹೆಜ್ಜೆ ಹಾಕಿದ್ದು ಮೆರವಣಿಗೆಗೆ ರಂಗು ತಂದಿತು. ಈ ಸಂದರ್ಭದಲ್ಲಿ ಯುವಕರೊಂದಿಗೆ ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಹೆಜ್ಜೆ ಹಾಕುವ ಮೂಲಕ ಯುವಕರಲ್ಲಿ ಮತ್ತಷ್ಟು ಉತ್ಸಾಹ ತುಂಬಿದರು.
ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯಜಮಾನರುಗಳಾದ ರಂಗಸ್ವಾಮಿ, ತಮ್ಮಯ್ಯಶೆಟ್ಟಿ, ಶಂಕರಶೆಟ್ಟಿ, ಟೈಲರ್ ತಿಮ್ಮಶೆಟ್ಟಿ,
ಗೋವಿಂದಶೆಟ್ಟಿ, ಪೂ.ರಾಜಶೆಟ್ಟಿ, ಪೂ.ಕೃಷ್ಣಶೆಟ್ಟಿ,
ತಾ.ಪಂ.ಮಾಜಿ ಅಧ್ಯಕ್ಷ ಹೆಚ್.ಟಿ.ಮಂಜಪ್ಪ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ರಮೇಶ್, ಮಾಜಿ ಅಧ್ಯಕ್ಷರುಗಳಾದ ತುಕಾರಾಂ, ಹೆಚ್.ಜೆ.ಗೋಪಾಲ, ದೀಪು, ನಂದಿನಿ ರಮೇಶ್, ಸದಸ್ಯರುಗಳಾದ ಮಂಜುಳಾಚಂದ್ರ, ಜಯರಾಮ್, ಶೈಲಜಾಯೋಗೇಶ್, ಮುಖಂಡರುಗಳಾದ ತಿ.ನಾಗರಾಜಶೆಟ್ಟಿ, ಬೈ.ಸುರೇಶ, ಸುಂದರ, ರಾಮಶೆಟ್ಟಿ, ಅಶೋಕ್, ಪ್ರಭು, ತ.ವೆಂಕಟೇಶ್, ಶ್ಯಾಮಶೆಟ್ಟಿ, ಲಕ್ಷ್ಮಣ, ದೇವೇಗೌಡ, ಮಹದೇವ, ಕಿಟ್ಟಿ, ಗೋಪಲಶೆಟ್ಟಿ, ಹರೀಶ್, ಕು.ವೆಂಕಟೇಶ್, ರಾಜಶೆಟ್ಟಿ, ನಾಗಶೆಟ್ಟಿ, ಪೂ.ಅ.ರಾಮಣ್ಣ, ರಮೇಶ್, ಶ್ರೀಧರ್, ಶಿವಣ್ಣಶೆಟ್ಟಿ, ಶೇಖರ ಶೆಟ್ಟಿ,
ಅಪ್ಪಸ್ವಾಮಿಶೆಟ್ಟಿ, ನರಸಿಂಹಶೆಟ್ಟಿ, ಪುರಸಂಶೆಟ್ಟಿ, ನಂದಕುಮಾರ್, ಮೂರ್ತಿ, ಶ್ರೀ ಚೌಡೇಶ್ವರಿ ಸಂಘದ ಯುವಕರು, ಮಹಿಳೆಯರು, ದೇವಾಗ ಸಮಾಜದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
About The Author
Discover more from JANADHWANI NEWS
Subscribe to get the latest posts sent to your email.