March 2, 2026
514367-ksrtc8.webp

ಚಿತ್ರದುರ್ಗ ಮಾ.02:
ಮಾರ್ಚ್ 6 ರಂದು ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ನಾಯಕನಹಟ್ಟಿಯ, ತಿಪ್ಪೇರುದ್ರಸ್ವಾಮಿಯ ದೊಡ್ಡರಥೋತ್ಸವ ಜರುಗಲಿದೆ. ಈ ಹಿನ್ನಲೆಯಲ್ಲಿ ಮಾರ್ಚ್ 5 ರಿಂದ 7ನೇ ತಾರೀಖಿನವರೆಗೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಹಿರಿಯೂರು, ಪಾವಗಡ ಘಟಕಗಳಿಂದ ಜಾತ್ರಾ ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಚಿತ್ರದುರ್ಗ ನಾಯಕನಹಟ್ಟಿ ಮಾರ್ಗದ ಬಸ್‌ಗಳು ಬೆಳಗಟ್ಟ, ಹಾಯ್ಕಲ್, ಚಳ್ಳಕೆರೆ ಮೂಲಕ, ಚಳ್ಳಕೆರೆ-ನಾಯಕನಹಟ್ಟಿ ಮಾರ್ಗದ ಬಸ್‌ಗಳು ನರ‍್ಲಗುಂಟೆ ಮೂಲಕ, ಹಿರಿಯೂರು-ನಾಯಕನಹಟ್ಟಿ ಬಸ್‌ಗಳು ಸಾಣಿಕೆರೆ, ಚಳ್ಳಕೆರೆ, ನರ‍್ಲಗುಂಟೆ ಮೂಲಕ ಹಾಗೂ ನಾಯಕನಹಟ್ಟಿ-ಪರುಶುರಾಂಪುರ ಮಾರ್ಗದ ಬಸ್‌ಗಳು ಚಳ್ಳಕೆರೆಯ ಮೂಲಕ ಸಂಚರಿಸಲಿವೆ.
ಸಾರ್ವಜನಿಕರು ವಿಶೇಷ ಬಸ್‌ಗಳ ಸದುಪಯೋಗ ಪಡೆದುಕೊಳ್ಳುವಂತೆ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
================

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading