ಹೊಸದುರ್ಗ: ತಾಲೂಕಿನ ಮಧುರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿಇಓ ಸೈಯದ್ ಮೊಸಿನ್, ಇಂದಿನ ಮಕ್ಕಳು ವೈಜ್ಞಾನಿಕ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿಜ್ಞಾನವೆಂಬುದು ಕಬ್ಬಿಣದ ಕಡಲೆ ಅಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳು ಆಸಕ್ತಿಯಿಂದ ಸಂಶೋಧನೆಗಳನ್ನು ತಮ್ಮ ತರಗತಿಗಳಲ್ಲೇ ಕೈಗೊಳ್ಳುವುದರಿಂದ ವಿಜ್ಞಾನವನ್ನು ಸುಲಭವಾಗಿ ತಮ್ಮದಾಗಿಸಿಕೊಳ್ಳಬಹುದು. ದೇಶವನ್ನು ಅಭಿವೃದ್ಧಿಯ ದಾರಿಯಲ್ಲಿ ಸಾಗಿಸಲು ವೈಜ್ಞಾನಿಕ ಮನೋಭಾವನೆ ಅಗತ್ಯವಾಗಿದ್ದು, ಈ ರೀತಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಕುತೂಹಲ ಮತ್ತು ಚಿಂತನಾ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.
ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳಿಗೆ ಹೊಸ ವಿಷಯಗಳನ್ನು ಅನ್ವೇಷಿಸಲು ಹಾಗೂ ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಿ.ಆರ್.ಸಿ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇ.ಸಿ.ಓ ಶಶಿಧರ್, ಸಿ.ಆರ್.ಪಿ ಮಂಜುನಾಥ್, ಬಿ.ಆರ್.ಪಿ ರುದ್ರೇಶ್, ಎಸ್‌ಬಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಬಿ. ಲತಾ, ಕಾಂಚನ ರಾಘವೇಂದ್ರ, ಮುಖ್ಯ ಶಿಕ್ಷಕಿ ಬಲ್ಕಿಸ್ ಬಾನು, ಶ್ರೀಮತಿ ಚೇತನ, ಶ್ರೀಮತಿ ಯಶಸ್ವಿನಿ ಎಸ್ ಸೇರಿದಂತೆ ಶಿಕ್ಷಕರು ಮತ್ತು ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.