September 15, 2025
IMG-20250302-WA0200.jpg

ಚಳ್ಳಕೆರೆ-02 ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಪುರಾತನ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರೆ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಕರ್ನಾಟಕವೂ ಸೇರಿದಂತೆ ಆಂಧ್ರಪ್ರದೇಶದಿಂದಲ್ಲೂ ಸಾವಿರಾರು ಭಕ್ತರು ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ಶನಿವಾರ ಸಂಜೆ ಚೆನ್ನಮ್ಮನಾಗತಿಹಳ್ಳಿ ಗ್ರಾಮದಿಂದ ಹಲವಾರು ಕಲಾತಂಡಗಳೊಂದಿಗೆ ಸ್ವಾಮಿಯ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ತಂಡಗಳಾದ ಕೋಲಾಟ, ಗೊಂಬೆಕುಣಿತ, ಕೀಲು ಕುದುರೆ ಮುಂತಾದ ಕಲಾತಂಡಗಳು ಮೆರಗು ನೀಡಿದ್ದವು, ನೂರಾರು ಭಕ್ತರು ಮೆರವಣಿಗೆ ಉದ್ದಕ್ಕೂ ಸ್ವಾಮಿಗೆ ಜೈಕಾರವನ್ನು ಹಾಕುತ್ತಾ ಸಾಗಿದರು. ಭಾನುವಾರ ಮುಂಜಾನೆ 5ರಿಂದಲೇ ರುದ್ರಾಭಿಷೇಕ, ಬಿಲ್ವಪಪತ್ರೆ ಅಭಿಷೇಕ, 10ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಗೊರವಿಕೆರೆ ವಂಶಸ್ಥರು ಅಣ್ಣತಮ್ಮಂದಿರು ಅಡವಿಯಲ್ಲಿ ನೆಲೆಸಿರುವ ದೇವರಿಗೆ ವಿಶೇಷ ಪೂಜಾ ಕಾರ್ಯಗಳನ್ನು ಮಾಡಿ, ತಮ್ಮ ಹರಿಕೆಗಳನ್ನು ಈಡೇರಿಸಿಕೊಂಡು.ಗೊರವಿಕೆರೆ ವಂಶಸ್ಥರು ಮತ್ತು ಭಕ್ತರು ದಾವಣಗೆರೆ, ಶಿವಮೊಗ್ಗ, ಬಳ್ಳಾರಿ, ಹಿರಿಯೂರು, ಚಿತ್ರದುರ್ಗ, ಮೊಳಕಾಲ್ಮೂರು ಭಾಗಗಳಿಂದ ಭಕ್ತರು ಆಗಮಿಸಿದ್ದರು. ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ದೇವಸ್ಥಾನ ಸಮಿತಿ ಮಾಡಿದ್ದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಪರಶುರಾಮಪುರ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಆರ್.ಕಿರಣ್‍ಶಂಕರ್, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಣ್ಣ, ಕಾರ್ಯದರ್ಶಿ ಕರೀಕೆರೆನಾಗರಾಜು, ತಿಪ್ಪೇಸ್ವಾಮಿ, ಪಿಡಿಒ ವೇದಮೂರ್ತಿ, ಪೂಜಾರಿ ಶ್ರೀನಿವಾಸ್, ಉಮೇಶ್, ರಮೇಶ್, ಮನಮೋಹನ್, ನಿಂಗಪ್ಪ ಮತ್ತು ಗೊರವಿನಕೆರೆ ವಂಶಸ್ಥರು ಹಾಗೂ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading