
ಹೊಸದುರ್ಗ: ಇ-ಖಾತ ಮತ್ತು ಬಿ-ಖಾತಾ ಅಭಿಯಾನ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಪುರಸಭಾ ಅಧಿಕಾರಿಗಳು ಖಾತೆ ಮಾಡುವ ಸಲುವಾಗಿ ಪಟ್ಟಣದ ಪ್ರತಿ ವಾರ್ಡುಗಳಲ್ಲೂ ಸಹಾ ಕ್ಯಾಂಪ್ ಹಾಕುವುದರ ಮೂಲಕ ಠಿಕಾಣಿ ಹೂಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೋರಕುತ್ತಿದೆ.
ಪಟ್ಟಣದ ಎಸ್. ನಿಜಲಿಂಗಪ್ಪ ಶಾಲೆಯ ಬಳಿ ಭಾನುವಾರ ಹಾಕಲಾಗಿದ್ದ ಕ್ಯಾಂಪ್‌ನಲ್ಲಿ ಮನೆ ಮನೆಗೆ ಕರ ಪತ್ರಗಳನ್ನು ವಿತರಿಸಿ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ. ಇ-ಖಾತಾ ಅಂದೋಲನ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಪಟ್ಟಣದ ವಾರ್ಡುಗಳ ಮಟ್ಟದಲ್ಲಿ ಅಭಿಯಾನವನ್ನ ಹಮ್ಮಿಕೊಂಡಿದ್ದು ಪಟ್ಟಣದಲ್ಲಿ ೧೨೮೦೦ ಆಸ್ತಿ ಮಾಲಿಕರ ಖಾತೆಗಳು ದಾಖಲಾಗಿದ್ದು ಈವರೆಗೆ ಸದರಿ ಖಾತೆಗಳಿಗೆ ಇ-ಖಾತ ನೀಡಲು ಈಗಾಗಲೆ ಸರ್ಕಾರದ ಸುತ್ತೋಲೆಯಂತೆ ರಾಜ್ಯವ್ಯಾಪ್ತಿ ಚಾಲನೆ ದೋರಕಿದ್ದು ಮೂರು ತಿಂಗಳೋಳಗೆ ಎಲ್ಲಾ ಆಸ್ತಿ ಮಾಲಿಕರಿಗೆ ಇ-ಖಾತೆಯನ್ನ ವಿತರಿಸುವ ನಿಟ್ಟಿನಲ್ಲಿ ಪಟ್ಟಣದ ಆಸ್ತಿ ಮಾಲಿಕರು ಮತ್ತು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆಯನ್ನ ನೀಡುತ್ತಾ ಬಂದಿದ್ದು ಪುರಸಭೆಯಿಂದ ಮೂರು ತಂಡಗಳಾಗಿ ರಚನೆ ಮಾಡಿಕೊಂಡು ವಾರ್ಡು ಮಟ್ಟದಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ,ಪ್ರತಿ ಎರಡು ವಾರ್ಡು ಸೇರಿ ಒಂದು ಸ್ಧಳ ನಿಗಧಿ ಮಾಡಲಾಗಿದೆ, ಪುರಸಭಾ ತಂಡ ಪಟ್ಟಣದ ಪ್ರತಿಯೊಂದು ವಾರ್ಡಿನ ಮನೆ ಮನೆಗೂ ಹೋಗಿ ಕರಪತ್ರಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು ಅಲ್ಲದೆ ಅಟೋ ಮೂಲಕ ಪ್ರಚಾರ ನೀಡಲಾಗುತ್ತಿದೆ.
ಕನಿಷ್ಟ ಮೂರು ತಿಂಗಳು ಅಭಿಯಾನವನ್ನ ಮಾಡಲಾಗುತ್ತಿದ್ದು ಸಾರ್ವಜನಿಕರು ಮತ್ತು ಆಸ್ತಿ ಮಾಲಿಕರು ಇದರ ಸದುಪಯೋಗವನ್ನ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಈ ಸಂಧರ್ಬದಲ್ಲಿ ಪುರಸಭಾ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿಆನಂದ್, ಉಪಾಧ್ಯಕ್ಷೆ ಶ್ರೀಮತಿ ಗೀತಾಆಸಂಧಿ ಕಂದಾಯ ಅಧಿಕಾರಿ ಯೋಗೇಶ್ ಮತ್ತು ಪುರಸಭೆಯ ಹಲವು ಸದಸ್ಯರುಗಳು ಉಪಸ್ಧಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.