
ಹಿರಿಯೂರು: ವಿದ್ಯಾರ್ಥಿಗಳ ಎಲ್ಲಾ ಪೋಷಕರು ಸಹಾ ಎಸ್.ಡಿ.ಎಂ.ಸಿ ಸಭೆ ಕರೆದಾಗ ಬಂದು ಭಾಗವಹಿಸಿ ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ವಿಚಾರಿಸಿದರೆ ಶಿಕ್ಷಣವು ಉನ್ನತ ಮಟ್ಟಕ್ಕೆ ಹೋಗುತ್ತದೆ ಎಂದು ಹಿರಿಯೂರು ಬಿಇಓ ಸಿ.ಎಂ.ತಿಪ್ಪೇಸ್ವಾಮಿ ಪೋಷಕರಿಗೆ ಕರೆ ನೀಡಿದರು.
ಹಿರಿಯೂರು ತಾಲೂಕು ಯಲ್ಲದಕೆರೆ ಕ್ಲಸ್ಟರನ ಪಿಲಾಜನಹಳ್ಳಿ-2 ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಮತ್ತು ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಗ್ರಾಮವು ತುಂಭಾ ಕುಗ್ರಮವಾಗಿದ್ದರೂ ಇಲ್ಲಿ ಉತ್ತಮವಾದಂತ ಶಿಕ್ಷಕರಿದ್ದಾರೆ ಮಕ್ಕಳಿಗೆ ಉತ್ತಮ ಗುಣ ಮಟ್ಟದ ಶಿಕ್ಷಣವನ್ನ ನೀಡುತ್ತಿದ್ದಾರೆ, ಈ ಶಾಲೆಯ ಮುಖ್ಯ ಶಿಕ್ಷಕರಾದ ಎಸ್.ಮಂಜುನಾಥ ಅವರು ನಾನು ಹೊಸದುರ್ಗದಲ್ಲಿ ಬಿಇಓ ಆದಾಗಿನಿಂದಲೂ ಸಹಾ ಪರಿಚಿತರು ಮತ್ತು ಸ.ಶಿ ರಾಘವೇಂದ್ರ ಇವರೆಲ್ಲ ಉತ್ತಮ ಶಿಕ್ಷಕರು ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ಪದೇ ಪದೇ ಬಂದು ಬೇಟಿ ನೀಡಿ ಪರಿಶೀಲಿಸಿ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುವುದರ ಮೂಲಕ ಸಲಹೆ ಸೂಚನೆಗಳನ್ನ ನೀಡಿ ಎಂದು ಕರೆ ನೀಡಿದ ಅವರು ಇಲ್ಲಿನ ಎಸ್.ಡಿ.ಎಂ.ಸಿ ಮತ್ತು ಗ್ರಾಮಸ್ಧರು ಮತ್ತು ಪೋಷಕರು ಶಾಲೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಶ್ಲಾ಼ಘಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ ಈ ಶಾಲೆಗೆ ಕಂಪ್ಯೋಟರ್ ಹಾಗೂ ಪ್ರಿಂಟರ್ ವ್ಯವಸ್ಧೆಯನ್ನ ನನ್ನ ಸ್ವಂತ ಖರ್ಚಿನಲ್ಲಿ ಕೊಡಿಸುತ್ತನೆ ಎಂಬ ಭರವಸೆ ನೀಡಿದರು.
ವೆಂಕಟೇಶ್ ಮಾತನಾಡಿ ಶಾಲೆಯ ಅಭಿವೃದ್ದಿಗೆ ಸಚಿವ ಡಿ.ಸುಧಾಕರ್ ಅವರು ಕಾಂಪೌAಡ್ ಹಾಗೂ ಒಂದು ಕೊಠಡಿ ನಿರ್ಮಿಸಲು ೫ ಲಕ್ಷ ಅನುದಾನವನ್ನ ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ.ಅಧ್ಯಕ್ಷ ಎಂ.ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಎಸ್.ಮಂಜುನಾಥ, ಸ.ಶಿ ರಾಘವೇಂದ್ರ, ಶಿಕ್ಷಕಿ ಶ್ರೀಮತಿ ಜಾನಕಿ, ಅನಂತ್, ದುರ್ಗೆಶ್, ನಿಂಗಣ್ಣ, ಮಹೇಶ್, ಮಂಜಪ್ಪ, ತಿಪ್ಪೇರುದ್ರಪ್ಪ, ರಂಗಸ್ವಾಮಿ, ನಿಜಗುಣಮೂರ್ತಿ, ದೇವೇಂದ್ರಪ್ಪ, ಶ್ರೀಮತಿಚಂದ್ರಕಲಾ, ರವಿಕುಮಾರ್, ಜಯಣ್ಣ ಸೇರಿದಂತೆ ಹಿರಿಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಗ್ರಾಮಸ್ಧರು ಭಾಗವಹಿಸಿದ್ದರು, ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವೈವಿದ್ಯಮಯ ಮನೋರಂಜನೆ ಕಾರ್ಯಕ್ರಮಗಳು ಜರುಗಿದವು.
About The Author
Discover more from JANADHWANI NEWS
Subscribe to get the latest posts sent to your email.