
ಯಾವುದೇ ಜಾತಿಗೆ ಸೀಮಿತವಾಗದೆ ಶೋಷಿತರ ನೊಂದವರ ಧ್ವನಿಯಾಗಬೇಕು
ಹೊಸದುರ್ಗ : ಮಠಾಧೀಶರಾಗಲಿ, ರಾಜಕಾರಣಿಗಳಾಗಲಿ ಯಾವುದೇ ಜಾತಿಗೆ ಸೀಮಿತವಾಗದೆ ಶೋಷಿತರ ನೊಂದವರ ಧ್ವನಿಯಾಗಬೇಕು ಎಂದು ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಕೋರ್ಟ್ ಮುಂಭಾಗದ ಆವರಣದಲ್ಲಿ ಶಿವು ಮಠ ಅಭಿಮಾನಿ ಬಳಗ ಹಾಗೂ ಸ್ನೇಹಿತರ ಬಳಗದಿಂದ ಆಯೋಜಿಸಲಾಗಿದ್ದ ಶಿವು ಮಠ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಲ್ಲಿ ಭಾಗವಹಿಸಿರುವ ಸ್ವಾಮೀಜಿಗಳ್ಯಾರು ಯಾವುದೇ ಪಕ್ಷ ಜಾತಿಯ ಪರವಾಗಿ ಬಂದಿಲ್ಲ ಶಿವು ಎಂಬ ಯುವಕನ ಸತ್ಕಾರ್ಯ ನೋಡಿ ಬಂದಿದ್ದೇವೆ. ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ನೊಂದವರ ಧ್ವನಿಯಾಗಿ ಯುವಕರ ಕಣ್ಮಣಿಯಾಗಿ ಬೆಳೆದಿರುವ ಶಿವು ಅವರ ಜೀವನ ಉಜ್ವಲವಾಗಿರಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಶಿವುಮಠ ಅವರ ಪತ್ನಿ ಐಶ್ವರ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿದ್ದಬಸಪ್ಪ ಮಹಾಕವಿ, ಶಾಂತವೀರ ಮುರುಘಾ ಜೇಂದ್ರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಈಶ್ವರಾನಂದ ಪುರಿ ಸ್ವಾಮೀಜಿ, ಕೃಷ್ಣ ಯಾದವನಂದ ಸ್ವಾಮಿಜಿ, ಮಡಿವಾಳ ಮಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಅನ್ನದಾನಿ ಸ್ವಾಮೀಜಿ, ನಾರಾಯಣಗುರು ಸಂಸ್ಥಾನದ ರೇಣುಕನಂದ ಸ್ವಾಮೀಜಿ, ಸಿದ್ದಬಸವಸ್ವಾಮೀಜಿ, ಇಳಕಲ್ ಮಠ ಬಸವ ಪ್ರಭು ಸ್ವಾಮೀಜಿ ಸೇರಿದಂತೆ ಬಿಜೆಪಿ ಮುಖಂಡರಾದ ಲಿಂಗ ಮೂರ್ತಿ, ಉದ್ಯಮಿ ಸದ್ಗುರು ಪ್ರದೀಪ್ ಸೇರಿದಂತೆ ಹಲವರು ಭಾಗವಹಿಸಿ ಶಿವು ಮಠ ಅವರಿಗೆ ಸಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕಿರು ತೆರೆಯ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿ¸
About The Author
Discover more from JANADHWANI NEWS
Subscribe to get the latest posts sent to your email.