September 15, 2025
d2-tm3A.jpg



ಹೊಸದುರ್ಗ:ಪಟ್ಟಣದ ಪ್ರಮುಖ ರಸ್ತೆಯ ಹುಳಿಯಾರು ವೃತ್ತದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ರಾಘವೇಂದ್ರ ಸ್ವಾಮಿಯವರಿಗೆ ಮಾ. 6 ರಂದು ಗುರುವಾರ ಬೆಳಿಗ್ಗೆ 8.30 ಕ್ಕೆ ಬೆಳ್ಳಿ ಕವಚ ಧಾರಣೆ ಜರುಗಲಿದೆ ಎಂದು ದೇವಸ್ಧಾನ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಮಂಜುನಾಥ್ ದಿವಾಕರ್ ತಿಳಿಸಿದ್ದಾರೆ.
ಪಟ್ಟಣದ ಆರ್.ಅರ್.ಸಮುದಾಯ ಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿ ಮಾತನಾಡಿದ ಅವರು ಶ್ರೀ ಆಂಜನೇಯ ಸ್ವಾಮಿ ದೇವಸ್ಧಾನ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕ ಬೃಂದಾವನ ಸೇವಾ ಸಮಿತಿಯ ವತಿಯಿಂದ ಈ ಮಂಗಳ ಕಾರ್ಯವನ್ನ ಕೈಗೊಂಡಿದ್ದು ಅಂದು ಬೆಳಿಗ್ಗೆ ೫ ಗಂಟೆಯಿಂದ ಶಿಲಾ ಮೂರ್ತಿಗಳಿಗೆ ನಿರ್ಮಲ್ಯ ಅಭಿಷೇಕ, ಪಂಚಾವೃತ ಅಭಿಷೇಕ, ಸಂಕಲ್ಪ ಸೇವೆಗಳು ಹಾಗೂ ಗಣಕಹೋಮ, ನವಗ್ರಹ ಹೋಮ, ಶ್ರೀರಾಮ ತಾರಕ ಹೋಮ, ಶ್ರೀ ಆಂಜನೇಯ ಸ್ವಾಮಿ ಹೋಮ, ಶ್ರೀ ರಾಘವೇಂದ್ರ ತೀರ್ಥರ ಅಷ್ಟಾಕ್ಷರ ಹೋಮ ನಂತರ ಶ್ರೀ ಆಂಜನೇಯಸ್ವಾಮಿಯವರಿಗೆ ಮತ್ತು ಶ್ರೀ ರಾಘವೇಂದ್ರ ಸ್ವಾಮಿಯವರಿಗೆ ಬೆಳಿಗ್ಗೆ 8.39 ಕ್ಕೆ ಬೆಳ್ಳಿ ಕವಚ ಧರಣೆ ನಡೆಯಲಿದ್ದು ನಂತರ 9 ಗಂಟೆಯಿಂದ ಪೂರ್ಣಾಹುತಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ, ಮಧ್ಯಾಹ್ನ 12ಗಂಟೆಗೆ ಮಹಾಮಂಗಳಾರತಿ ಮತ್ತು ತೀರ್ಥ ವಿನಿಯೋಗದ ನಂತರ ಮಧ್ಯಾಹ್ನ 1ಗಂಟೆಯಿAದ ಸರ್ವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂಧರ್ಬದಲ್ಲಿ ಸಮಿತಿಯ ಉಪಾಧ್ಯಕ್ಷರುಗಳಾದ ಟಿ.ಎ.ಮಾರುತಿ, ಗೋಪಾಲ್‌ಲಾಡ್, ಕಾರ್ಯದರ್ಶಿ ಎಸ್.ಪಿ.ಶ್ರೀನಿವಾಸ್, ಖಜಾಂಚಿ ಎಂ.ಹೆಚ್.ನೀಲಕಂಠಯ್ಯ, ಸಂಘಟನಾ ಕಾರ್ಯದರ್ಶಿ ಮಾರುತಿ ಜಿ.ರೇವಣಕರ್ ಸೇರಿದಂತೆ ಆಡಳಿತ ಮಂಡಳಿಯ ಧರ್ಮದರ್ಶಿಗಳು ಉಪಸ್ಧಿತರಿದ್ದರು.
ಬಾಕ್ಸ್ ಐಟಂ
ಭಕ್ತರ ಮನಸ್ಸಿನಲ್ಲಿ ದೇವಸ್ಧಾನದಲ್ಲಿರುವ ಎರಡೂ ದೇವರುಗಳಿಗೂ ಸಹಾ ಬೆಳ್ಳಿ ಕವಚ ಧಾರಣೆ ಮಾಡಬೇಕೆಂಬ ಇಚ್ಚೆ ಮನಸ್ಸಿನಲ್ಲಿ ಬಂದಿದ್ದು ಅದರಂತೆ ಭಕ್ತರಿಂದ 1.68ಲಕ್ಷ ನಗದು ಮತ್ತು 2.1ಕೆ.ಜಿ.ಬೆಳ್ಳಿ ಸಂಗ್ರಹವಾವಾಗಿದ್ದು ಉಳಿದಂತೆ ಸಮಿತಿಯ ಹಣದಿಂದ ಒಟ್ಟು 11 ಕೆ.ಜಿ. ಶುದ್ದ ಬೆಳ್ಳಿಯಿಂದ ಎರಡೂ ದೇವರುಗಳಿಗೂ ಸಹಾ ಎಕಶಿಲ ಕವಚಗಳನ್ನ ಮಾಡಿಲಾಗಿದ್ದು ಈ ಎರಡೂ ಕವಚಗಳನ್ನು ಸಿದ್ದಾಪುರದ ಪ್ರಶಾಂತ್ ಎಂಬುವವರು 1.20 ಲಕ್ಷಕ್ಕೆ ಸಿದ್ದಪಡಿಸಿಕೋಟ್ಟಿದ್ದಾರೆ.
ಎಂ.ಹೆಚ್.ನೀಲಕಂಠಯ್ಯ, ಖಜಾಂಚಿ
ಮೂಲ ವೃತ್ತಿಕ ಬೃಂದಾವನ ಸೇವಾ ಸಮಿತಿ, ಹೊಸದುರ್ಗ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading