March 16, 2026
IMG-20260102-WA0257.jpg

ಕುದಾಪುರ ಇಂಜಿನಿಯರಿಂಗ್ ವಿದ್ಯಾರ್ಥಿ ಪಿ. ವಿವೇಕಾನಂದ ಸಾವು : ಇಡೀ ಗ್ರಾಮಕ್ಕೆ ಶೋಕ
ನಾಯಕನಹಟ್ಟಿ ಸಮೀಪದ ಎನ್. ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದಾಪುರ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಂ. ಪಾಲಯ್ಯ–ಶಾರದಮ್ಮ ದಂಪತಿಯ ಪುತ್ರ ಪಿ. ವಿವೇಕಾನಂದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ಸಪ್ತಗಿರಿ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿವೇಕಾನಂದ, ಗ್ರಾಮಕ್ಕೆ ಕೀರ್ತಿ ತರುವ ನಿರೀಕ್ಷೆಯ ಯುವ ಪ್ರತಿಭೆಯಾಗಿದ್ದರು. ಅವರ ಅಕಾಲಿಕ ನಿಧನದಿಂದ ಇಡೀ ಕುದಾಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಗ್ರಾಮಸ್ಥರು ಕ್ಯಾಂಡಲ್ ಹಿಡಿದು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಕೆ.ಜಿ. ಪ್ರಕಾಶ್ ಮಾತನಾಡಿ, “ಸಾಧಿಸುವ ಛಲ ಹೊಂದಿದ್ದ ಯುವಕನನ್ನು ಕಳೆದುಕೊಂಡ ನೋವು ನಮ್ಮ ಮನೆ ಮಗನನ್ನು ಕಳೆದುಕೊಂಡಂತಿದೆ” ಎಂದು ಹೇಳಿದರು.
ಪಶು ಸಂಗೋಪನೆ ಇಲಾಖೆ ಅಧೀಕ್ಷಕ ಎಂ.ಬಿ. ಸತೀಶ್ ಮಾತನಾಡಿ, “ವಿವೇಕಾನಂದ ಹೆಸರಿಗೆ ತಕ್ಕಂತೆ ಸುಸಂಸ್ಕೃತ ಯುವಕ. ವಿದ್ಯಾಭ್ಯಾಸದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಅವನ ಅಗಲಿಕೆ ಇಡೀ ಗ್ರಾಮಕ್ಕೆ ಶೋಕ ತಂದಿದೆ” ಎಂದು ಸಂತಾಪ ಸೂಚಿಸಿದರು.
ಈ ವೇಳೆ ಸಮಸ್ತ ಕುದಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading