ಹಿರಿಯೂರು:
ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ವತಿಯಿಂದ ನಗರ ಟಿ.ಬಿ.ವೃತ್ತದ ಬಳಿ ಇರುವ ಅಂಬೇಡ್ಕರ್ ಪ್ರತಿಮೆಯ ಪಕ್ಕದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವದ ವಿಜಯಸ್ತಂಭವನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಯಿತು. ರಾಜ್ಯಾಧ್ಯಕ್ಷರಾದ ಕೆ.ರಾಮಚಂದ್ರಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಾಸ್ತಾವಿಕ ನುಡಿಯನ್ನು ಹೇಳಿದರು. ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಓಂಕಾರಮೂರ್ತಿ ಅವರು ಸ್ವಾಗತ ಭಾಷಣ ಮಾಡಿದರು. ವಿಜಯಸ್ತಂಭಕ್ಕೆ ಪಷ್ಪಾರ್ಚನೆಯನ್ನು ಎನ್. ಮಾರುತಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಹಾಗೂ ಎಸ್.ಗೋಣೆಪ್ಪ ಸಂಗೊಳ್ಳಿ ರಾಜ್ಯ ಕಾನೂನು ಸಲಹೆಗಾರರು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಶಿವರಾಜ್ ಕುಮಾರ್ ಅವರು ನೆರವೇರಿಸಿದರು.
ಬಾಬಾ ಸಾಹೇಬ್ ಪ್ರತಿಮೆಗೆ ಮಾಲಾರ್ಪಣೆ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಕೆ.ತಿಮ್ಮರಾಜು ಹಾಗೂ ಕೆ.ಪಿ. ಶ್ರೀನಿವಾಸ್ ಹಾಗೂ ಘಾಟ್ ರವಿ ಅವರು ನಡೆಸಿಕೊಟ್ಟರು. ನಿರೂಪಣೆಯನ್ನು ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷರಾದ ಪ್ರದೀಪ್ ಅವರು ನೆರವೇರಿಸಿದರು.
ಕಾರ್ಯಕ್ರಮದ ವಿಚಾರ ಮಂಡನೆಯನ್ನು ಶಿವಶಂಕರ್ ಸೀಗೆಹಟ್ಟಿ ಹಾಗೂ ಪರಮೇಶ್ ಮೊಳಕಾಲ್ಮೂರು. ಡಾ.ಬಿ.ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜಿನ ಸಂಸ್ಥಾಪಕರಾದ ಬಿ.ಪಿ.ತಿಪ್ಪೇಸ್ವಾಮಿ ಅವರು ನೆರವೇರಿಸಿಕೊಟ್ಟರು.
ಮುಖ್ಯಅತಿಥಿಗಳಾಗಿ ತಾಲ್ಲೂಕು ದಂಡಾದಿಕಾರಿಗಳಾದ ಸಿದ್ದೇಶ್ ಅವರು ನಗರಸಭೆಯ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಂ.ಡಿ.ಸಣ್ಣಪ್ಪರವರು ಘಾಟ್ ಚಂದ್ರಪ್ಪ, ಅಧ್ಯಕ್ಷರಾದ ಪರಮೇಶ್, ಯುವಕ ಮುಖಂಡರಾದ ಕೇಶವಮೂರ್ತಿ, ಹನುಮಂತರಾಯಪ್ಪ ಬ್ಯಾಡರಹಳ್ಳಿ(ಬಿ.ಎಸ್.ಪಿ), ಯುವ ಮುಖಂಡರಾದ ಎಂ.ಡಿ.ರಮೇಶ್, ಹರಿಯಬ್ಬೆ ಪಂಚಾಯ್ತಿ ಅಧ್ಯಕ್ಷರಾದ ಓಂಕಾರ್(ಸೂಗೂರು), ಗನ್ನಾಯಕನಹಳ್ಳಿ ಪಂಚಾಯಿತಿ ಅಧ್ಯಕ್ಷರಾದ ಟಿ. ಸಿದ್ದೇಶ್, ಈಶ್ವರಗೆರೆ ಪಂಚಾಯಿತಿ ಸದಸ್ಯರಾದ ನರಸಿಂಹಮೂರ್ತಿ ಹಾಗೂ ನೂತನವಾಗಿ ಜಿಲ್ಲಾ ಕಾರ್ಯಾದ್ಯಕ್ಷರಾಗಿ ಆಯ್ಕೆಯಾದ ರಂಗನಾಥ್ ಟಿ.(ಬಗ್ಗನಾಡು) ಇದ್ದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕ ಜಿಲ್ಲಾ ಅಧ್ಯಕ್ಷರಾದ ಸಾಧಿಕ್(ಸೀಮೆಎಣ್ಣೆ), ಜಿಲ್ಲಾ ಉಪಾಧ್ಯಕ್ಷರಾದ ಲಕ್ಷ್ಮಣರಾವ್, ಜಿಲ್ಲಾ ಉಪಾದ್ಯಗಕ್ಷರಾದ ಕೆಂಚಪ್ಪ, ನಿರಂಜನ್, ಸಿಕಂದರ್, ದೇವರಾಜ್, ರಂಗಸ್ವಾಮಿ, ದಾಸಣ್ಣ, ವೈ.ರಮೇಶ್, ರಾಘವೇಂದ್ರ, ಟಿ.ಕೃಷ್ಣಮೂರ್ತಿ, ರಂಗಪ್ಪ, ಅಜಯ್ ಹಾಗೂ ಡೆನಿಲ್ ರಾಜ್ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದ ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.