December 14, 2025
FB_IMG_1735824663428.jpg


ಹಿರಿಯೂರು:
ನಗರದ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 86 ಸಾವಿರ ಜನಸಂಖ್ಯೆ ಹೊಂದಿದ್ದು, 16400 ಕುಟುಂಬಗಳನ್ನು ಹೊಂದಿದೆ. ಎಲ್ಲಾ ಕುಟುಂಬಗಳು ಸಹ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದೆ. ಅಲ್ಲದೇ ಕೆಲವು ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಶೌಚಾಲಯ ಹೊಂದಿವೆ ಎನ್ನಲಾಗಿದ್ದು,
ಈ ಎಲ್ಲಾ ಶೌಚಾಲಯಗಳು ತುಂಬಿದರೆ ಅವುಗಳನ್ನು ಸ್ವಚ್ಚಗೊಳಿಸಲು ಮಲಹೊರುವ ಪದ್ಧತಿ ನಿಷೇಧಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಶೌಚಗುಂಡಿಯ ಸ್ವಚ್ಚತೆಗಾಗಿ ಒಂದೇ ಸಕ್ಕಿಂಗ್ ಯಂತ್ರ ಬಳಕೆಯಾಗುತ್ತಿದೆ.
ಸಕ್ಕಿಂಗ್ ಯಂತ್ರದ ನಿರ್ವಹಣೆ, ವಾಹನದ ಡೀಸೆಲ್ ಖರ್ಚನ್ನು ಭರಿಸುವಷ್ಟು ಕನಿಷ್ಠ ಶುಲ್ಕ ಸಂಗ್ರಹಿಸಿ, ಶೌಚಗುಂಡಿ ಸ್ವಚ್ಚಗೊಳಿಸಿ ಕೊಡಲಾಗುತ್ತಿದ್ದು, ಪ್ರತಿ ಲೋಡ್ ಗೆ ನಗರ ವ್ಯಾಪ್ತಿಗೆ 1500 ರೂ ಶುಲ್ಕ ಹಾಗೂ ನಗರದಿಂದ ಹೊರಗಡೆಯಿದ್ದರೆ 2500 ರೂ ಶುಲ್ಕ ನಿಗದಿ ಮಾಡಲಾಗಿದೆ.

ಸಾರ್ವಜನಿಕರ ಆದ್ಯತೆ ಮೇರೆಗೆ ಯಂತ್ರವನ್ನು ಕಳುಹಿಸಲಾಗುತ್ತದೆ. ದಿನದಲ್ಲಿ ನಾಲ್ಕೈದು ಮನೆಗಳಲ್ಲಿ ಸ್ವಚ್ಚಗೊಳಿಸುವ ಕಾರ್ಯ ಮಾಡುತ್ತದೆ. ಕೆಲವು ವೇಳೆ ಗ್ರಾಮೀಣ ಭಾಗದ ಸರಕಾರಿ ಕಟ್ಟಡಗಳು ಹಾಗೂ ಮನೆಗಳು ಕೂಡ ಗ್ರಾಮಪಂಚಾಯಿತಿ ಪಿ.ಡಿ.ಒ ಅವರಿಂದ ಪತ್ರ ತಂದಾಗಲೂ ಅವರಿಗೆ ಸೆಕ್ಕಿಂಗ್ ಸೌಲಭ್ಯ ನೀಡಲಾಗುತ್ತಿದೆ.
ನಗರದ ಹೇಮದಳ ರಸ್ತೆಯಲ್ಲಿರುವ ನಗರಸಭೆ ಘನ ತ್ಯಾಜ್ಯ ವಿಲೇವಾರಿ ಮಾಡುವ ಘಟಕದಲ್ಲಿಯೇ ಮಲತ್ಯಾಜ್ಯ ಸಂಗ್ರಹಣ ಘಟಕವಿದ್ದು, ಅದರಲ್ಲಿ ತೆಗೆದುಕೊಂಡು ಹೋಗಿ ಸುರಿಯುತ್ತಾರೆ. ಅಲ್ಲಿಯೇ ಮತ್ತೆ ಹಸಿ-ಒಣ ವಿಂಗಡಿಸಿ ಇದರಿಂದ ಗೊಬ್ಬರ ತಯಾರಿಸುವ ಕೆಲಸ ಮಾಡುತ್ತಿದ್ದಾರೆ.
ಯು.ಜಿ.ಡಿ ಸೌಲಭ್ಯವಿಲ್ಲದ ಕಾರಣ ಸಕ್ಕಿಂಗ್ ಮಷಿನ್ ಗಳಲ್ಲಿಯೇ ಮಲತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಯುಜಿಡಿಯಿದ್ದರೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಬಳಸಬಹುದಾಗಿದ್ದು, ದಿನನಿತ್ಯ ನಗರ ಹಾಗೂ ನಗರ ಜನಸಂಖ್ಯೆ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಇನ್ನು ಒಂದರೆಡು ಯಂತ್ರಗಳನ್ನು ನಗರಸಭೆ ತರಿಸಿದರೆ ಜನರಿಗೆ ಸಹಾಯವಾಗಬಹುದು ಎಂಬುದು ನಗರ ಸಾರ್ವಜನಿಕರ ಅಭಿಪ್ರಾಯವಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading